ಮಡಿಕೇರಿ, ಆ. ೨೭: ಕೊಡಗು ರಕ್ಷಣಾ ವೇದಿಕೆಯ ಕುದುರೆಪಾಯ ಘಟಕದ ಅಧ್ಯಕ್ಷರಾಗಿ ಜಯಂತ್ ಪೊಯ್ಯಮಜಲು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ರಂಜಿತ್ ಕುಮಾರ್ ಪೊಳ್ಮಾರ್, ಕಾರ್ಯದರ್ಶಿ ಯಕ್ಷಿತ್ ವಾಟೆಕಾಡು, ಖಜಾಂಚಿ ದೀಕ್ಷಿತ್ ಬೊಳ್ಳುರ್, ನಿರ್ದೇಶಕರಾಗಿ ನಂದನ ಮುದಡ್ಕ, ಹೇಮಂತ್ ಮುದಡ್ಕ ಹಾಗೂ ಹೇಮಂತ್ ಕಟ್ಟಪರೆ ಅವರನ್ನು ನೇಮಕ ಮಾಡಲಾಗಿದೆ ಎಂದು ಕೊರವೇ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.

ಕೊರವೇ ದಬ್ಬಡ್ಕ ಚೆಂಬು ಅಧ್ಯಕ್ಷರಾಗಿ ಯತೀಶ್ ಕೆದಂಬಾಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಸನ್ನ ಪನೇಡ್ಕ, ಕಾರ್ಯದರ್ಶಿ ಮಿಥುನ್ ಹೊಸೂರು, ಖಜಾಂಚಿ ಹೇಮದರ ಹೊಸೂರು, ನಿರ್ದೇಶಕರುಗಳಾಗಿ ಗಿರೀಶ್ ಹೊಸೂರು, ವಿಜಯ ಕೊಪ್ಪ, ಆನಂದ ದಬ್ಬಡ್ಕ, ಪ್ರದೀಪ್ ಕುಡೆಕಲ್ಲು, ಕೌಶಿಕ್ ಹೊಸೂರು, ಮನು ದಬ್ಬಡ್ಕ, ತೀರ್ಥ ಕುವೆಂಡ್ರ, ಸನತ್ ನಡುಬೆಟ್ಟು, ಹರಿಕೃಷ್ಣ ದಬ್ಬಡ್ಕ, ಶಿವರಾಮ ಕೊಪ್ಪ, ಹರೀಶ್ ನಡುಬೆಟ್ಟು ಹಾಗೂ ಸೋಮಯ್ಯ ಕೆದಂಬಾಡಿ ನೇಮಕಗೊಂಡಿದ್ದಾರೆ.