ಸೋಮವಾರಪೇಟೆ,ಆ.೨೭: ಅತಿವೃಷ್ಟಿಯಿಂದಾಗಿ ಮನೆಗಳನ್ನು ಕಳೆದುಕೊಂಡವರು ಹಾಗೂ ಭಾರೀ ಮಳೆಗೆ ತುತ್ತಾಗಿ ಶಿಥಿಲಾವಸ್ಥೆಗೆ ತಲುಪಿದ್ದ ಮನೆಗಳ ಮಾಲೀಕರ ಮನದಲ್ಲೀಗ ಟೆಕ್ಸಾಸ್ ಸಂಸ್ಥೆ ನೆಮ್ಮದಿಯ ಭಾವ ತುಂಬಿದೆ.
ಅತಿವೃಷ್ಟಿಯಿಂದಾಗಿ ಶಿಥಿಲಾವಸ್ಥೆಗೆ ತಲುಪಿದ್ದ ಮನೆಗಳನ್ನು ತೆರವುಗೊಳಿಸಿ ಹೊಸ ಮನೆಗಳನ್ನು ನಿರ್ಮಿಸುವ ಮೂಲಕ ನೊಂದ ಮನಗಳಿಗೆ ಸಂಸ್ಥೆ ಮರುಜೀವನ ಕಲ್ಪಿಸಿದ್ದರೆ, ವಾಸಕ್ಕೆ ಅಯೋಗ್ಯವಾಗಿದ್ದ ಮನೆಗಳನ್ನು ರಿಪೇರಿ ಮಾಡುವ ಮೂಲಕ ಪುನರ್ಜೀವ ನೀಡಿದ್ದು, ಕುಟುಂಬದವರ ಮನದಲ್ಲಿ ನೆಮ್ಮದಿಯ ಭಾವ ಮೂಡಿಸಿದೆ. ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಯತ್ನದ ಫಲವಾಗಿ ಸುಮಾರು ೧೨ ಕುಟುಂಬಗಳಿಗೆ ಹೊಸ ಮನೆಯ ಭಾಗ್ಯ ಲಭಿಸಿದೆ.
ಅತೀವೃಷ್ಟಿಯಿಂದಾಗಿ ಸಂತ್ರಸ್ತರಾದ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ, ರಾಮೇನಹಳ್ಳಿ, ನಂದಿಗುAದ ಮತ್ತು ಗೌಡಳ್ಳಿ ವ್ಯಾಪ್ತಿಯ ಸುಮಾರು ೧೨ ಕುಟುಂಬಗಳಿಗೆ ಅಮೇರಿಕಾದ ತಂತ್ರಜ್ಞಾನ ಕಂಪೆನಿಯಾದ ಟೆಕ್ಸಾಸ್ ಇನ್ಸ್ಟುçಮೆಂಟ್ಸ್ ಸಂಸ್ಥೆಯು ನೆರವಿನ ಹಸ್ತ ಚಾಚಿದೆ.
ಅಮೇರಿಕಾದ ಟೆಕ್ಸಾಸ್ ಇನ್ಸ್ಟುçಮೆಂಟ್ಸ್ ಸಂಸ್ಥೆಯ ನೇತೃತ್ವದಲ್ಲಿ ಹ್ಯಾಬಿಟ್ಯಾಟ್ ಫಾರ್ ಹ್ಯುಮಾನಿಟಿ ಇಂಡಿಯಾ ಸೇವಾ ಸಂಸ್ಥೆಯ ಸಹಯೋಗದಲ್ಲಿ ಗೌಡಳ್ಳಿ, ಶನಿವಾರಸಂತೆ ಹಾಗೂ ನಂದಿಗುAದ ಗ್ರಾಮದ ೪ ಕುಟುಂಬಗಳಿಗೆ ಹೊಸಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಎಂಟು ಮನೆಗಳನ್ನು ದುರಸ್ತಿ ಮಾಡುವ ಮೂಲಕ ಸಂತ್ರಸ್ತರ ಮೊಗದಲ್ಲಿ ಸಂತಸ ತಂದಿದೆ.
ಅತಿವೃಷ್ಟಿಯಿAದಾಗಿ ಈ ಭಾಗದ ಕೂಲಿ ಕಾರ್ಮಿಕರ ಮನೆಗಳು ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದವು. ಕೆಲವರ ಮನೆಗಳು ಕುಸಿದು ಬಿದ್ದು ನಿರ್ಗತಿಕರಾಗಿದ್ದರು. ಕಾಫಿತೋಟಗಳಲ್ಲಿ ದಿನಗೂಲಿ ಕಾರ್ಮಿಕರಾಗಿರುವ ಇವರುಗಳಿಗೆ ನೂತನ ಮನೆ ನಿರ್ಮಾಣ ಕನಸಾಗಿತ್ತು. ಇಂತಹ ಸನ್ನಿವೇಶದಲ್ಲಿ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರು ಹ್ಯಾಬಿಟ್ಯಾಟ್ ಫಾರ್ ಹ್ಯುಮಾನಿಟಿ ಇಂಡಿಯಾ ಸಂಸ್ಥೆಯ ಪ್ರಮುಖರ ಗಮನ ಸೆಳೆದು, ಬಡ ವರ್ಗಕ್ಕೆ ಸಹಾಯ ಕೋರಿದ್ದರು.
ಇದಕ್ಕೆ ಸ್ಪಂದಿಸಿದ ಸಂಸ್ಥೆಯ ಅಧಿಕಾರಿಗಳು, ಸಮಗ್ರ ಮಾಹಿತಿ ಸಂಗ್ರಹಿಸಿ ಟೆಕ್ಸಾಸ್ ಸಂಸ್ಥೆಯೊAದಿಗೆ ಮಾತುಕತೆ ನಡೆಸಿ, ಮನೆಗಳ ನಿರ್ಮಾಣಕ್ಕೆ ಮುಂದಾದರು. ಟೆಕ್ಸಾಸ್ ಸಂಸ್ಥೆಯು ಮಾನವೀಯ ಹಸ್ತ ಚಾಚಿದ್ದು, ೪ ಕುಟುಂಬಗಳಿಗೆ ನೂತನ ಆರ್ಸಿಸಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರೆ, ಉಳಿದ ೮ ಕುಟುಂಬಗಳ ಮನೆಗಳನ್ನು ರಿಪೇರಿ ಮಾಡಿಸುವ ಮೂಲಕ ವಾಸಕ್ಕೆ ಯೋಗ್ಯವನ್ನಾಗಿಸಿದೆ.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಪತ್ತು ನಿರೋಧಕ ಮನೆಗಳ ನಿರ್ಮಾಣ ಕಾರ್ಯ ಮುಗಿದಿದ್ದು, ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡಿದ್ದ ಬೀಟಿಕಟ್ಟೆಯ ಜಯಾನಂದ, ಸುಶೀಲ, ಚಿಕ್ಕಾರದ ಗೋವಿಂದಗೌಡ, ಕೂಗೂರಿನ ನವೀನಕುಮಾರಿ ಅವರುಗಳಿಗೆ ತಲಾ ೫ ಲಕ್ಷ ವೆಚ್ಚದಲ್ಲಿ ವಾಸಕ್ಕೆ ಯೋಗ್ಯವಾದ ಆರ್ಸಿಸಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ.
ಇದರೊಂದಿಗೆ ತಲಾ ಎರಡೂವರೆ ಲಕ್ಷ ವೆಚ್ಚದಲ್ಲಿ ಕೂಗೂರಿನ ರಕ್ಷಿತ್ ಹಾಗೂ ಶನಿವಾರಸಂತೆಯ ನಾಗರಾಜ ಅವರುಗಳಿಗೆ ಸಿಮೆಂಟ್ ಶೀಟ್ ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ತಲಾ ೨.೫೦ ಲಕ್ಷ ವೆಚ್ಚದಲ್ಲಿ ರಾಮೇನಹಳ್ಳಿಯ ಶಾರದ, ಶೋಭ, ನಂದಿಗುAದ ಗ್ರಾಮದ ಸತ್ಯನಾರಾಯಣ, ಕಾಂತರಾಜ್, ಚನ್ನಾಪುರದ ದೇವಮ್ಮ ಚನ್ನಶೆಟ್ಟಿ, ರಾಧಾ ಮಹೇಶ್ ಅವರುಗಳ ಮನೆಗಳನ್ನು ಸಂಪೂರ್ಣ ದುರಸ್ತಿಗೊಳಿಸಿ ಪಕ್ಕಾ ಮನೆಯನ್ನಾಗಿ ಪರಿವರ್ತಿಸಿ, ಹಸ್ತಾಂತರ ಮಾಡಲಾಗಿದೆ.
ನೂತನ ಮನೆಗಳಿಗೆ ಸೋಲಾರ್ ಅಳವಡಿಸಿದ್ದು, ೩ ಬಲ್ಬ್ಗಳ ಮೂಲಕ ಮನೆಗೆ ಬೆಳಕಿನ ಭಾಗ್ಯವನ್ನೂ ಒದಗಿಸಿದ್ದು, ಸಂತ್ರಸ್ತರ ಬಾಳಲ್ಲಿ ಬೆಳಕು ಮೂಡಿಸಿದೆ. ಟೆಕ್ಸಾಸ್ ಇನ್ಸ್ಟುçಮೆಂಟ್ಸ್ ಮತ್ತು ಹ್ಯಾಬಿಟ್ಯಾಟ್ ಫಾರ್ ಹ್ಯುಮಾನಿಟಿ ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಗಳು ಮನೆಗಳನ್ನು ವೀಕ್ಷಿಸಿದ ನಂತರ ಫಲಾನುಭವಿಗಳಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭ ಮಾತನಾಡಿದ ಹ್ಯಾಬಿಟ್ಯಾಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜನ್ ಸ್ಯಾಮುಯೆಲ್, ಮಳೆ, ಭೂಕುಸಿತದಿಂದಾಗಿ ಮನೆ ಮಠ ಕಳೆದುಕೊಂಡಿದ್ದಲ್ಲದೇ, ಬಳಿಕ ಸರಣಿರೂಪದಲ್ಲಿ ಬಂದ ಕೋವಿಡ್ ೧೯ ಪರಿಸ್ಥಿತಿಯಿಂದಾಗಿ ಈ ಬಡ ಕುಟುಂಬಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ದೈಹಿಕವಾಗಿಯೂ ಕಠಿಣ ಪರಿಸ್ಥಿತಿಯಲ್ಲಿವೆ. ಟೆಕ್ಸಾಸ್ ನೆರವಿನಿಂದಾಗಿ ಇವರಿಗೆ ವಿಪತ್ತು ನಿರೋಧಕ ಮನೆಗಳನ್ನು ನಿರ್ಮಿಸಿದ್ದು, ಅವರುಗಳ ಉಪಯೋಗಕ್ಕೆ ಹಸ್ತಾಂತರಿಸಲಾಗಿದೆ ಎಂದರು.
ಟೆಕ್ಸಾಸ್ ಇನ್ಸ್ಟುçಮೆಂಟ್ನ ನಿರ್ದೇಶಕ ಶೇತುಲ್ ಥಕ್ರಾರ್ ಮಾತನಾಡಿ ‘ವಿಪತ್ತು ನಿರೋಧಕ ಮನೆಗಳಿಂದಾಗಿ ಫಲಾನುಭವಿ ಕುಟುಂಬಗಳು ಮುಂದೆ ಪ್ರವಾಹದಂತಹ ಸ್ಥಿತಿಯನ್ನು ಧೈರ್ಯದಿಂದ ಎದುರಿಸಬಹುದಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಸಮುದಾಯದಲ್ಲಿ ಸ್ಥಿರತೆ ತರುವುದರಲ್ಲಿ ಟೆಕ್ಸಾಸ್ ನಂಬಿಕೆ ಇಟ್ಟಿದೆ. ಈ ಯೋಜನೆಯ ಮೂಲಕ ಸಮಾಜಕ್ಕೆ ಸಂಸ್ಥೆಯು ತನ್ನದೇ ಆದ ಕೊಡುಗೆ ನೀಡಿದೆ’ ಎಂದರು.
ಸAಸ್ಥೆ ನಿರ್ಮಿಸಿಕೊಟ್ಟ ಮನೆಯನ್ನು ಪಡೆದ ಫಲಾನುಭವಿ ನವೀನ್ಕುಮಾರ್ ಮಾತನಾಡಿ, ಭಾರೀ ಮಳೆಯಿಂದಾಗಿ ನಮ್ಮ ಮನೆಗಳು ವಾಸಕ್ಕೆ ಅಯೋಗ್ಯವಾಗಿದ್ದವು. ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಮನೆಗಳ ಒಳಗೆ ಮಳೆಗಾಲದಲ್ಲಿ ಹಾವುಗಳು ಬರುತ್ತಿದ್ದವು. ಇದೀಗ ಶಿಥಿಲಾವಸ್ಥೆಯಲ್ಲಿದ್ದ ಮನೆಗಳನ್ನು ಒಡೆದು ನೂತನ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಆಧುನಿಕ ತಂತ್ರಜ್ಞಾನದಡಿ ಮನೆಗಳನ್ನು ಕಟ್ಟಿದ್ದಾರೆ. ಮಳೆ, ಬಿಸಿಲು, ಕೋವಿಡ್ ಪರಿಸ್ಥಿತಿಯನ್ನು ಲೆಕ್ಕಿಸದೇ ನಮಗೆ ಮನೆಗಳನ್ನು ನಿರ್ಮಿಸಿದ್ದಾರೆ ಎಂದು ಕೃತಜ್ಞತೆಯ ನುಡಿಯಾಡಿದರು.
- ವಿಜಯ್ ಹಾನಗಲ್