*ವೀರಾಜಪೇಟೆ, ಸೆ. ೨: ವೀರಾಜಪೇಟೆಯ ಗಡಿಯಾರ ಕಂಬ ಮುಖ್ಯರಸ್ತೆಯಿಂದ ಇಂದು ಈರ್ವರು ಯುವಕರು ಕಾಲ್ನಡಿಗೆಯಲ್ಲಿಯೇ ಲಡಾಕ್‌ಗೆ ಪ್ರಯಾಣ ಕೈಗೊಂಡರು. ಈಗಷ್ಟೇ ಎಸ್‌ಎಸ್‌ಎಲ್‌ಸಿ ಮುಗಿಸಿ ವೀರಾಜಪೇಟೆಯ ಬಟ್ಟೆ ಅಂಗಡಿ ಯಲ್ಲಿ ಜೀವನೋಪಾಯ ಕ್ಕಾಗಿ ಕೆಲಸ ಮಾಡುತ್ತಿದ್ದ ಯುವಕರು ಲಡಾಕ್‌ನತ್ತ ನಡಿಗೆ ಆರಂಭಿಸುವ ಮುನ್ನ ‘ಶಕಿ’್ತಯೊಂದಿಗೆ ಮಾತನಾಡಿ ಇದು ನಮ್ಮ ಕನಸಾಗಿತ್ತು. ಬೈಕ್ ಅಥವಾ ಸೈಕಲ್‌ನಲ್ಲಿ ಹೋಗಬೇಕೆಂದುಕೊAಡಿದ್ದೆವು.

(ಮೊದಲ ಪುಟದಿಂದ) ಆದರೆ ಹಣಕಾಸಿನ ನೆರವು ಸಿಗದ ಕಾರಣ ಕಾಲ್ನಡಿಗೆಯಲ್ಲೇ ಲಡಾಕ್‌ಗೆ ಹೋಗಿಬರಲು ತೀರ್ಮಾನ ಮಾಡಿದ್ದೇವೆ ಎಂದರು. ಮನೆಯವರು ಮೊದಲು ಬೇಡವೆಂದರೂ ನಂತರ ಒಪ್ಪಿಗೆ ನೀಡಿದರು.

ಇಬ್ಬರು ಯುವಕರಾದ ವೀರಾಜಪೇಟೆ ಕಲ್ಲುಬಾಣೆ ನಿವಾಸಿ ನೌಶಾದ್ ಹಾಗೂ ರೆಹಮತ್ ಅವರ ಪುತ್ರ ಅಫ್‌ನಾಜ್, ಕಡಂಗ ಗ್ರಾಮದ ನಿವಾಸಿ ನಸೀರ್ ಹಾಗೂ ರಜೀನಾ ದಂಪತಿಗಳ ಪುತ್ರ ಅನ್ಸಾರ್ ತಿಳಿಸಿದರು. ಇವರಿಗೆ ಸಿ.ಆರ್ ಹಾಜಿಯವರು ಸಣ್ಣ ಪ್ರಮಾಣದ ಹಣ ಸಹಾಯ ಮಾಡಿದ್ದಾರೆ. ಕೊಡಗಿನಿಂದ ಲಡಾಕ್ ೩,೩೮೦ ಕಿಲೋಮೀಟರ್ ದೂರವಿದ್ದು, ಕಾಲ್ನಡಿಗೆಯಲ್ಲಿ ಕ್ರಮಿಸಲು ಸುಮಾರು ಮೂರು ತಿಂಗಳು ಸಮಯ ಹಿಡಿಯಬಹುದು ಎನ್ನುವ ಮಾಹಿತಿಯನ್ನು ನೀಡಿದರು. ಯುವಕರ ಕಾಲ್ನಡಿಗೆಗೆ ವೀರಾಜಪೇಟೆ ಪಟ್ಟಣ ಪಂಚಾಯತ್ ಸದಸ್ಯ ಮೊಹಮ್ಮದ್ ರಾಫಿ ಹಸಿರು ನಿಶಾನೆ ತೋರಿದರು.