ಕಾರ್ಯಪ್ಪ ಅವರ ಹೆಸರಿಡಲು ಸಿಎಂಗೆ ಸಂಸದ ಪತ್ರ
ಮಡಿಕೇರಿ, ಸೆ. ೨: ಮೈಸೂರು ಹಾಗೂ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ರಾಜೀವ್ ಗಾಂಧಿ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶವನ್ನು ‘ಫೀಲ್ಡ್ ಮಾರ್ಷಲ್ ಕೆ.ಎಮ್ ಕಾರ್ಯಪ್ಪ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶ’ ಎಂದು ಮರುಹೆಸರಿಸುವಂತೆ ಕೋರಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಉದ್ಯಾನವನಕ್ಕೆ ಕಾರ್ಯಪ್ಪ ಅವರ ಹೆಸರಿಡುವಂತೆ ಆನ್‌ಲೈನ್ ಕ್ಯಾಂಪೇನ್ ಒಂದು ಪ್ರಾರಂಭವಾಗಿದ್ದು, ಜಿಲ್ಲೆಯ ಜನತೆಯ ಬೇಡಿಕೆಯಂತೆ ಭಾರತ ಭೂ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಫೀಲ್ಡ್ ಮಾರ್ಷಲ್ ಕೆ.ಎಮ್ ಕಾರ್ಯಪ್ಪ ಅವರ ಹೆಸರನ್ನು ಉದ್ಯಾನವನಕ್ಕೆ ಇಡುವಂತೆ ಪತ್ರದ ಮೂಲಕ ಸಿಂಹ ಅವರು ಒತ್ತಾಯಿಸಿದ್ದಾರೆ.
ಭಾರತ ಸೇನಾಪಡೆಗೆ ಕಾರ್ಯಪ್ಪ ಅವರು ನೀಡಿರುವ ಸೇವೆಯನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಕೊಡಗು ಜಿಲ್ಲೆಯು ಸೇನೆಗೆ ನೀಡಿರುವ, ನೀಡುತ್ತಿರುವ ಕೊಡುಗೆಯನ್ನೂ ಸ್ಮರಿಸಿದ್ದಾರೆ. ಜಿಲ್ಲೆಯ ಜನರ ಭಾವನೆಗಳನ್ನು ಹಾಗೂ ಬೇಡಿಕೆಯನ್ನು ಪರಿಗಣಿಸಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರನ್ನು ಉದ್ಯಾನವನಕ್ಕೆ ಇಟ್ಟು ಗೌರವಿಸುವಂತೆ ಮನವಿ ಮಾಡಿದ್ದಾರೆ.