ಕೊಡವರು ಪಾಂಡವAಶÀಸ್ಥರೆAದೂ ಅಜ್ಞಾತವಾಸದಲ್ಲಿದ್ದಾಗ ಅಡಗಿಸಿಟ್ಟಂತ ತಮ್ಮ ಆಯುಧಗಳನ್ನು ಪೂಜಿಸುವ ಸಾಂಕೇತಿಕವಾಗಿ ಕೊಡಗಿನ ಮೂಲ ನಿವಾಸಿಗಳು ಕೈಲ್‌ಪೊಳ್ದ್ಅನ್ನು ಆಚರಿಸುತ್ತಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ. ವೀರ-ಶೂರ ಪರಂಪರೆಯ ನಾಡೆಂದು ಬಣ್ಣಿಸುವ ಕೊಡಗಿನಲ್ಲಿ ಪುರಾತನಕಾಲದಿಂದಲೂ ಸಂಪ್ರದಾಯ ಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವ ಹಬ್ಬವೇ “ಕೈಲ್‌ಪೊಳ್ದ್’’

ಕೈಲ್‌ಪೊಳ್ದ್ಗೆ ತನ್ನದೆ ಆದ ಸಂಪ್ರದಾಯಬದ್ಧ ಹಿನ್ನೆಲೆ ಇದ್ದು ವಿಶಿಷ್ಟ ರೀತಿಯ ಆಯುಧಪೂಜೆಯೆಂದೇ ಹೇಳಲಾಗುತ್ತÀದೆ. ಕೊಡಗಿನ ಕೆಲವು ನಾಡುಗಳಲ್ಲಿ ಸಿಂಹಮಾಸದ ೧೮ ಕ್ಕೆ ಹಬ್ಬ ಆಚರಿಸಿದರೆ ಹಿಂದಿನ ಕಾಲದಲ್ಲಿ ಆಯಾ ನಾಡಿನವರು ನಾಡು ದೇವಾಲಯದಲ್ಲಿ ಸೇರಿ ಕಣಿಯರನ್ನು ಕರೆಸಿ ಹಬ್ಬದ ದಿನವನ್ನು, ಆಯುಧ ಪೂಜೆಯ ಮುಹೂರ್ತದ ಸಮಯವನ್ನು ಹಾಗೂ ಬೇಟೆಯ ದಿಕ್ಕನೆಲ್ಲ ಕೇಳಿ ತಿಳಿದುಕೊಳ್ಳುತ್ತಿದ್ದರು. ನಿಶ್ಚಯಿಸಿದ ದಿನದಂದು ಆ ಊರಿನ ಬೇಟೆಗಾರರೆಲ್ಲ ತನ್ನ ಬೇಟೆನಾಯಿ ಯೊಂದಿಗೆ ಬೇಟೆಗೆ ಹೊರಡುತ್ತಿದ್ದು ಆಗ ಸಂಪ್ರದಾಯ ಬೇಟೆಯಲ್ಲಿ ಸಿಕ್ಕ ಕಾಡುಪ್ರಾಣಿಯ ಮಾಂಸವನ್ನೆಲ್ಲ ಬೇಟೆ ನಿಯಮದಂತೆ ಪಾಲುಮಾಡಿ ಕೈಲ್‌ಪೊಳ್ದನ್ನು ಸಂಭ್ರಮಿಸುತಿದ್ದ ಆಕಾಲ ಹಾಗೂ ಹಿರಿಯರು ಹುಲಿಬೇಟೆ ಯಾಡಿ ಹುಲಿಯನ್ನು ಕೊಂದು ‘ನರಿಮಂಗಲ’ (ಕೊಂದ ಹುಲಿಯೊಂದಿಗೆ ಮದುವೆ) ಮಾಡಿ ಸಂಭ್ರಮಿಸುತಿದ್ದ ಕಾಲವೊಂದಿತ್ತು. ವರ್ಷದ ಸೆಪ್ಟಂಬರ್ ತಿಂಗಳ ಮೂರನೆ ತಾರೀಕಿನಂದೇ ಕೊಡಗಿನ ಹೆಚ್ಚಿನ ಕಡೆಗಳಲ್ಲಿ ಆಚರಿಸ ಲಾಗುತ್ತಿದೆಯಾದರೂ ನಾಲ್ಕುನಾಡ್ ಹಾಗೂ ಮುತ್ತ್ನಾಡ್‌ಗಳಲ್ಲಿ ಶಾಸ್ತçನೋಡಿಯೇ ಆಗಸ್ಟ್ ತಿಂಗಳ ಕೊನೆಯವಾರದಲ್ಲಿ ದಿನ ನಿಶ್ಚಯಿಸುತ್ತಾರೆ.

ಕೊಡಗಿನಲ್ಲಿ ಮುಂಗಾರುಮಳೆ ಪ್ರಾರಂಭವಾದೊಡನೆ ಬೇಸಾಯ ಆರಂಭಿಸಿ ಆಗಸ್ಟ್ ಅಂತ್ಯದೊಳಗೆ ಬೇಸಾಯ ಕಾರ್ಯವೆಲ್ಲ ಸಂಪೂರ್ಣ ಮುಗಿದಿರುವುದು. ಆ ಸಮಯದವರೆಗೆ ಕೊಡಗಿನವರು ತಮ್ಮ-ತಮ್ಮ ಅಯುಧ ಗಳನ್ನು ಮನೆಯ ಕನ್ನಿ ಕೋಂಬರೆಯಲ್ಲಿಟ್ಟಿರುವರು, ಇದನ್ನೇ ಹಿರಿಯರು “ಕೈಲ್‌ಪೊಳ್ದ್ ಕೆಟ್ಟ್” ಎಂದು ಹೇಳುತ್ತಾರೆ. ಕೃಷಿಕಾರ್ಯ ಮುಗಿದು ಕಕ್ಕಡ ತಿಂಗಳು ಕಳೆದ ನಂತರ ಕುಟುಂಬದವರೆಲ್ಲ ಸೇರಿ ಕೈಲ್‌ಪೊಳ್ದ್ ಹಬ್ಬವನ್ನು ಆಚರಿಸುವ ಸಂಪ್ರದಾಯ ಈಗಲೂ ಕೊಡಗಿನಲ್ಲಿ ನಡೆದು ಬಂದಿದೆ. ಹಬ್ಬದ ಆಚರಣೆಗೆ ಕೊಡಗಿನವರು ಎಲ್ಲೇ ಇದ್ದರೂ ತನ್ನ ತಾಯಿನಾಡಿಗೆ ಬಂದು ಆಚರಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಹಿಂದೆ ಕಣಿಯರು ಹೇಳುವ ವ್ಯಕ್ತಿ ಕೈಲ್‌ಪೊಳ್ದ್ ದಿನದಂದು ಸೂರ್ಯೋದಯಕ್ಕೆ ಮುಂಚಿತವಾಗಿ ನಿಶ್ಚಿತ ಗಿಡವೊಂದರ ಬೆರಳು ಗಾತ್ರದ ಗೇಣುದ್ದದ ಮೂರು ತುಂಡುಗಳನ್ನು ಒಂದು ಬದಿಗೆ ಚೂಪಾಗಿ ಬಾಣದಂತೆ ಮಾಡಿ ಇನ್ನೊಂದು ಬದಿಗೆ ನೇರಳೆ ಎಲೆಯನ್ನು ಗರಿಯಂತೆ ಕಟ್ಟಿ ಊರುಮಂದ್‌ಗೆ ಹೋಗಿ ಹಾಲು ಬರುವ ಮರಕ್ಕೆ ಎಸೆದು ಬರುವ ಸಂಪ್ರದಾಯವಿತ್ತು.

ಕೈಲ್‌ಪೊಳ್ದ್ದಿನದAದು ಕುಟುಂಬದವರೆಲ್ಲ ತಮ್ಮ ಕುಟುಂಬದ ಐನ್‌ಮನೆಗಳಲ್ಲಿ ಸೇರಿ ಐನ್‌ಮನೆಯ ಪವಿತ್ರಸ್ಥಾನವಾದ ನೆಲ್ಲಕ್ಕಿ ನಡುಬಾಡೆಯ ದೇವನೆಲೆಗೆ ಕೈಮುಗಿದು ಹಿರಿಯರ ಕಾಲುಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವರು. ನಿಶ್ಚಿತ ಸಮಯಕ್ಕೆ ನೆಲ್ಲಕ್ಕಿ ನಡುಬಾಡೆಯಲ್ಲಿ ಶುಭ್ರಗೊಳಿಸಿ ಅಲಂಕರಿಸಿಟ್ಟAತ ಕೋವಿ, ಒಡಿಕತ್ತಿ, ಪೀಚೆಕತ್ತಿ, ಈಟಿ, ಬರ್ಚಿ ಆಯುಧಗಳಿಗೆಲ್ಲ ಗಂಧದ ಬೊಟ್ಟನ್ನು ಹಾಗೂ ವಿಶೇಷವಾದ ತೋಕ್‌ಪೂ (ನೇಂಗಿಪೂ)ವನ್ನು ಎಲ್ಲಾ ಆಯುಧಗಳಿಗಿಟ್ಟು ಶೃಂಗರಿಸಿ ದೂಪ-ದೀಪಾದಿಗಳಿಂದ ಪೂಜಿಸುವರು. ಕೊಡಿಬಾಳೆ (ಬಾಳೆಲೆಯ ತುದಿಭಾಗ) ಎಲೆಯನ್ನು ದೇವರನೆಲೆಯಲ್ಲಿ ಇಟ್ಟು ಹಬ್ಬಕ್ಕೆ ಮಾಡಿದ ವಿಶೇಷ ಭೋಜನ ಮದ್ಯವನ್ನು ದೇವರಿಗೆ ಸಮರ್ಪಿಸುವರು. ಕೊಡವ ಸಂಪ್ರದಾಯದ ಕುಪ್ಯಚ್ಯಾಲೆ ತೊಟ್ಟಂತ ಕುಟುಂಬದ ಪಟ್ಟೆದಾರ (ಹಿರಿಯ) ಪೂಜಾ ಕೈಂಕರ್ಯವನ್ನೆಲ್ಲ ಮುಗಿಸಿ ದೇವರ ನೆಲೆಯಲ್ಲಿ ನಿಂತು “ಪ್ರತಿವರ್ಷದಂತೆ ಕೈಲ್‌ಪೊಳ್ದ್ ಹಬ್ಬವನ್ನು ನಡೆಸಿಕೊಂಡು ಬರುತ್ತಿರುವ ಹಾಗೆ ಈ ವರ್ಷ ಕೈಲ್‌ಪೊಳ್ದನ್ನು ಆಚರಿಸಲು ಕುಟುಂಬದವರೆಲ್ಲ ಇಲ್ಲಿ ಸೇರಿದ್ದೇವೆ, ಊರು, ನಾಡು ಹಾಗೂ ನಮ್ಮ ಕುಟುಂಬದವರಿಗೆಲ್ಲ ಒಳಿತನ್ನು ಮಾಡೆಂದು” ಕುಲ ದೇವರನ್ನು ಹಾಗೂ ಗ್ರಾಮ ದೇವರನ್ನೆಲ್ಲ ನೆನೆದು ಬೇಡಿಕೊಳ್ಳುವರು.

ಆಯುಧಪೂಜೆಯ ಸಂಪ್ರದಾಯ ಮುಗಿದ ನಂತರ ಕುಟುಂಬ ದವರೆಲ್ಲ ಹಬ್ಬದ ದಿನದ ವಿಶೇಷ ಭೋಜನವನ್ನು ಸವಿಯುವರು. ನಂತರದಲ್ಲಿ ಪಟ್ಟೆದಾರರು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟ ಆಯುಧವನ್ನು ನೀಡುವಾಗ ಎಲ್ಲ ಕಿರಿಯರು ಪಟ್ಟೆದಾರ (ಹಿರಿಯನ) ಕಾಲುಮುಟ್ಟಿ ನಮಸ್ಕರಿಸಿ ಆಶೀರ್ವಾದದೊಂದಿಗೆ ಆಯುಧವನ್ನು ಪಡೆವ ಸಂಪ್ರದಾಯ. ಹಿರಿಯರು ತೆಂಗಿನಕಾಯಿಗೆ ಮೊದಲ ಗುಂಡು ಹೊಡೆದ ನಂತರವೇ ಕಿರಿಯರು, ಮಹಿಳೆಯರು ತೆಂಗಿನಕಾಯಿಗೆ ಗುಂಡು ಹೊಡೆದು ಶೌರ್ಯ ಪ್ರದರ್ಶಿಸುವರು. ತೆಂಗಿನಕಾಯಿಗೆ ಕಲ್ಲು ಎಸೆಯುವುದು ಹಾಗೂ ‘ತೆಂಗೆಪೋರ್’ ಎಂಬ ತೆಂಗಿನಕಾಯಿ ಎಳೆಯುವ ಸ್ಪರ್ಧೆ ಕೂಡ ಇರುವುದು. ಬಳಿಕ ಊರ್ ಮಂದ್‌ಗೆ ತೆರಳಿ ನೆರೆಯ ಊರಿನವರೆಲ್ಲ ಸೇರಿ ತೆಂಗಿನಕಾಯಿಗೆ ಗುಂಡು ಹೊಡೆಯುವರು. ಕಡಂಬುಟ್ಟ್ ಪಂದಿಕರಿಯ ಜೊತೆ ಹಲವು ವಿಶೇಷ ಬೋಜನವನ್ನು ಸವಿಯುವರು.

ಕೊಡಗಿನಲ್ಲಲ್ಲದೆ ದೇಶವಿದೇಶಗಳಲ್ಲಿ ನೆಲೆಸಿರುವ ಕೊಡಗಿನವರು ತಮ್ಮ ತಾಯಿ ನಾಡಿನ ಸಂಪ್ರದಾಯವನ್ನು ಮರೆಯದೆ ಕೈಲ್‌ಪೊಳ್ದ್ ಹಬ್ಬದಂದು ಬಂದು ತನ್ನ ಕುಟುಂಬದವರೊAದಿಗೆ ಸೇರಿ ಹಬ್ಬವನ್ನು ಆಚರಿಸಿದರೆ ಮತ್ತೆ ಕೆಲವರು ಅವರವರ ನೆಲೆಯಲ್ಲಿಯೆ ಕುಟುಂಬದವ ರೊಂದಿಗೆ ಆಚರಿಸುತ್ತಾ ಆ ಹಿಂದಿನ ಹಬ್ಬದ ಸಂಭ್ರಮವನ್ನು ನೆನೆಸಿಕೊಳ್ಳು ವರು. ಹಬ್ಬ ಕಳೆದ ನಂತರ ಕೆಲವೊಂದು ಸಂಘ-ಸAಸ್ಥೆಗಳು ಈ ಹಬ್ಬದ ಸಂತೋಷಕೂಟವನ್ನು ಅಚರಿಸುತ್ತಿರುವರು.

ಕೊಡಗಿನ ಸಂಪ್ರದಾಯಬದ್ಧವಾಗಿ ನಡೆದು ಬಂದ ಕೈಲ್‌ಪೊಳ್ದ್ ನಮ್ಮೆಯನ್ನು ಸಹಬಾಳ್ವೆಯೊಂದಿಗೆ ಸಂತೋಷದಿAದ ಆಚರಿಸೋಣ.

-ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ.