ಸೋಮವಾರಪೇಟೆ, ಸೆ. ೨: ಇಲ್ಲಿನ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಮತ್ತು ೩ರಲ್ಲಿ ತೆರವಾಗಿರುವ ಸದಸ್ಯ ಸ್ಥಾನಕ್ಕೆ ತಾ. ೩ ರಂದು (ಇಂದು) ಮತದಾನ ನಡೆಯಲಿದ್ದು, ಎರಡೂ ವಾರ್ಡ್ಗಳಿಗೆ ಸಂಬAಧಿಸಿದAತೆ ೭ ಮಂದಿ ಕಣದಲ್ಲಿದ್ದಾರೆ.

ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಹಿತ ಪಕ್ಷೇತರ ಅಭ್ಯರ್ಥಿಯೂ ಕಣದಲ್ಲಿದ್ದು, ಅಂತಿಮ ಹಂತದ ಮತಯಾಚನೆಯ ಕಸರತ್ತು ಬಿರುಸಿನಿಂದ ನಡೆದಿದೆ. ಪಟ್ಟಣ ಪಂಚಾಯಿತಿಯ ವಾರ್ಡ್ ೧ರ ಬಸವೇಶ್ವರ ರಸ್ತೆ ಹಾಗೂ ವಾರ್ಡ್ ೩ರ ವೆಂಕಟೇಶ್ವರ ಬ್ಲಾಕ್‌ಗೆ ತಾ.೩ರಂದು ಬೆಳಿಗ್ಗೆ ೭ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ಮತದಾನ ನಡೆಯಲಿದೆ. ವಾರ್ಡ್ ೧ರ ಮತದಾರರು ಎಸ್‌ಜೆಎಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಮತದಾನ ಕೇಂದ್ರದಲ್ಲಿ ಹಾಗೂ ವಾರ್ಡ್ ೩ರ ಮತದಾರರು ಬೇಳೂರು ರಸ್ತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಮತದಾನ ಕೇಂದ್ರದಲ್ಲಿ ಮತಚಲಾಯಿಸಬೇಕಿದೆ. ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಎರಡೂ ವಾರ್ಡ್ಗಳಲ್ಲಿ ಚುನಾವಣೆಯ ಅಖಾಡಕ್ಕಿಳಿದಿದ್ದಾರೆ. ಈ ಹಿಂದೆ ೧ನೇ ವಾರ್ಡ್ನಿಂದ ಸದಸ್ಯರಾಗಿದ್ದ ಉದಯಶಂಕರ್ ಹಾಗೂ ೩ನೇ ವಾರ್ಡ್ನಿಂದ ಗೆಲುವು ಸಾಧಿಸಿ ಅಧ್ಯಕ್ಷರೂ ಆಗಿದ್ದ ನಳಿನಿ ಗಣೇಶ್ ಅವರುಗಳ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಬಿಸಿಎಂಬಿ ಮೀಸಲು ಕ್ಷೇತ್ರವಾಗಿರುವ ವಾರ್ಡ್ ೧ ರಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಆರ್. ಮೃತ್ಯುಂಜಯ (ಜಯಣ್ಣ), ಕಾಂಗ್ರೆಸ್ ಅಭ್ಯರ್ಥಿಯಾಗಿ ಭುವನೇಶ್ವರ್ (ಧನು), ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಎಸ್. ಗಿರೀಶ್, ಪಕ್ಷೇತರ ಅಭ್ಯರ್ಥಿಯಾಗಿ ರವಿಶಂಕರ್ ಅವರುಗಳು ಕಣದಲ್ಲಿದ್ದಾರೆ. ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರವಾಗಿರುವ ೩ನೇ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಮೋಹಿನಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಧ್ಯಾ ಪ್ರಕಾಶ್, ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಂ. ಪುಷ್ಪ ಅವರುಗಳು ಚುನಾವಣಾ ಕಣದಲ್ಲಿದ್ದಾರೆ. ಚುನಾವಣಾಧಿಕಾರಿಯಾಗಿ ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ್‌ಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ರಾಜೇಶ್ ಅವರುಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾ. ೩ ರಂದು ಚುನಾವಣೆ, ಮರು ಮತದಾನದ ಅವಶ್ಯಕತೆ ಉಂಟಾದಲ್ಲಿ ತಾ.೫ರಂದು ಮರು ಮತದಾನ, ತಾ. ೬ರಂದು ಮತ ಎಣಿಕೆ ನಡೆಯಲಿದೆ.