*ಗೋಣಿಕೊಪ್ಪ, ಸೆ. ೨: ಏಳು ದಿನದೊಳಗಾಗಿ ವ್ಯಾಪಾರದ ಪರವಾನಗಿ ನವೀಕರಣಗೊಳಿಸದೆ ವ್ಯಾಪಾರ ಮುಂದುವರಿಸಿದರೆ, ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಚೇತನ್ ಹೇಳಿದರು.

ಕಳೆದ ಮೂರು ನಾಲ್ಕು ವರ್ಷಗಳಿಂದ ವ್ಯಾಪಾರದ ಪರವಾನಗಿ ನವೀಕರಣಗೊಳಿಸದೇ ವ್ಯಾಪಾರ ನಡೆಸುತ್ತಿರುವ ಪಟ್ಟಣದ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿದ ಗ್ರಾ.ಪಂ. ಅಧ್ಯಕ್ಷರ ಹಾಗೂ ಸದಸ್ಯರ ತಂಡ ವ್ಯಾಪಾರದ ಪರವಾನಗಿ ಬಗ್ಗೆ ಪರಿಶೀಲನೆ ನಡೆಸಿ ಈ ಸೂಚನೆ ನೀಡಿತು.

ಪಟ್ಟಣದಲ್ಲಿ ೧೧೦೦ ಅಂಗಡಿಗಳು ಇದ್ದು, ತರಕಾರಿ, ಹಣ್ಣು, ದಿನಸಿ, ಮಾಂಸ, ಮೀನು, ಬಟ್ಟೆ ಸೇರಿದಂತೆ ಇತರ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿವೆ. ಇದರಲ್ಲಿ ಕೇವಲ ೩೦೦ ಮಳಿಗೆಗಳÀ ಪರವಾನಗಿ ನವೀಕರಣಗೊಂಡಿದ್ದು, ಉಳಿದ ೮೦೦ ಅಂಗಡಿಗಳು ಪರವಾನಗಿ ನವೀಕರಣಗೊಳಿಸದೆ ವ್ಯಾಪಾರ ನಡೆಸುತ್ತಿವೆ. ಈ ಬಗ್ಗೆ ಮಾಲೀಕರಿಗೆ ನೋಟೀಸ್ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅಂತಹ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಸೂಚನೆ ನೀಡಲಾಗುತ್ತಿದೆ. ೮೦೦ ಮಳಿಗೆಗಳು ಪರವಾನಗಿ ನವೀಕರಣಗೊಳಿಸಿಕೊಂಡರೆ ಪಂಚಾಯಿತಿಗೆ ಕನಿಷ್ಟ ರೂ. ೨೦ ಲಕ್ಷ ಆದಾಯ ಕ್ರೋಢೀಕರಣವಾಗಿ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಚೈತ್ರಾ ಚೇತನ್ ಹೇಳಿದರು. ವಾರದ ಒಳಗೆ ವ್ಯಾಪಾರದ ಪರವಾನಗಿ ನವೀಕರಣಕ್ಕೆ ಮುಂದಾಗದಿದ್ದರೆ ಸರ್ಕಾರದ ದಂಡದ ರೂಪದಲ್ಲಿ ದುಪ್ಪಟ್ಟು ಮೊತ್ತ ಪಾವತಿಸಬೇಕಾಗುತ್ತದೆ. ಅಲ್ಲದೇ ವ್ಯಾಪಾರದ ಸಂದರ್ಭ ಪ್ಲಾಸ್ಟಿಕ್ ಬಳಕೆ ಕಂಡುಬAದರೆ ದಂಡ ವಿಧಿಸಲಾಗುವುದು ಎಂದರು. ಅಂಗಡಿಗಳಿಗೆ ಭೇಟಿ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಕೆ.ರಾಜೇಶ್, ನೂರೇರ ರತಿಅಚ್ಚಪ್ಪ, ಹಕೀಂ, ಪುಷ್ಪಾಮನೋಜ್, ವಿವೇಕ್ ರಾಯ್ಕರ್, ಪಂಚಾಯಿತಿ ಕಾರ್ಯದರ್ಶಿ ಗುರು, ಕಂದಾಯ ಸಂಗ್ರಾಹಕ ರಾಜ ಇದ್ದರು.''