ವೀರಾಜಪೇಟೆ, ಆ. ೪: ವೀರಾಜಪೇಟೆ ತಾಲೂಕು ಕೊಳ್ತೋಡು ಬೈಗೋಡು ಗ್ರಾಮದ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ೨ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಘಟನೆ ಹಿನ್ನೆಲೆ: ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ೬.೧೨.೨೦೧೮ ರಂದು ಫೋಕ್ಸೋ ಕಾಯ್ದೆಯಡಿ ಬೊಳಕ (ಚೋಮ) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಗ್ರಾಮದ ಲೈನ್‌ಮನೆಯೊಂದರಲ್ಲಿ ಅಪ್ರಾಪ್ತೆ ಒಬ್ಬಳೆ ಇದ್ದ ಸಂದರ್ಭ ಬೊಳಕ ಅತ್ಯಾಚಾರ ನಡೆಸಿದ್ದು, ವಿಚಾರವನ್ನು ಯಾರಿಗೂ ಹೇಳಬೇಡ. ನಾನು ನಿನ್ನನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿ ೪-೫ ಬಾರಿ ದೈಹಿಕ ಸಂಪರ್ಕ ಹೊಂದಿದ್ದಾನೆ. ಬಳಿಕ ಸಂತ್ರಸ್ತೆ ದೇಹದಲ್ಲಿ ಬದಲಾವಣೆ ಗಮನಿಸಿದ ಪೋಷಕರು ವಿಚಾರಣೆ ನಡೆಸಿದಾಗ, ಸತ್ಯಾಂಶ ಬೆಳಕಿಗೆ ಬಂದಿದೆ. ಈ ಸಂಬAಧ ಪೋಷಕರು ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಅಂದಿನ ವೃತ್ತ ನಿರೀಕ್ಷಕ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಎಸ್.ಆರ್. ದಿಂಡಿಲ್‌ಕೊಪ್ಪ ವಿಚಾರಣೆ ನಡೆಸಿ ಪ್ರಕರಣದ ಅಪರಾಧಿಗೆ ಕಲಂ ೩೭೬ (೨)(ಜೆ)(ಎನ್) ಐ.ಪಿ.ಸಿ.ಯಡಿ೨೦ ವರ್ಷಗಳ ಸಾದಾ ಸೆರೆಮನೆ ವಾಸ ಹಾಗೂ ೩೦ ಸಾವಿರ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ೨ ವರ್ಷಗಳ ಹೆಚ್ಚುವರಿ ಸೆರೆಮನೆ ವಾಸ ಅನುಭವಿಸುವ ಶಿಕ್ಷೆ ವಿಧಿಸಿದ್ದಾರೆ.

ಕಲಂ ೩೭೬ (ಎ) (ಬಿ) ಐಪಿಸಿಗೆ ೨೦ ವರ್ಷಗಳ ಸಾದಾ ಸೆರೆವಾಸ ಹಾಗೂ ರೂ. ೨೦ ಸಾವಿರ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ೧ ವರ್ಷಗಳ ಹೆಚ್ಚುವರಿ ಸೆರೆಮನೆ ವಾಸ, ಕಲಂ ೪ ಪೋಕ್ಸೋ ಕಾಯ್ದೆಗೆ ೨೦ ವರ್ಷಗಳ ಸಾದಾ ಸೆರೆಮನೆ ವಾಸ ಹಾಗೂ ೨೦ ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ೬ ತಿಂಗಳ ಹೆಚ್ಚುವರಿ ಸೆರೆಮನೆ ವಾಸ ಅನುಭವಿಸುವ ಶಿಕ್ಷೆ, ಕಲಂ ೬ ಪೋಕ್ಸೋ ಕಾಯ್ದೆಗೆ ೨೦ ವರ್ಷಗಳ ಸಾದಾ ಸೆರೆಮನೆ ವಾಸ ಹಾಗೂ ರೂ. ೨೦ ಸಾವಿರ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ೧ ವರ್ಷಗಳ ಹೆಚ್ಚುವರಿ ಸೆರೆಮನೆ ವಾಸ ಅನುಭವಿಸುವ ಶಿಕ್ಷೆ ವಿಧಿಸಲಾಗಿದೆ.

ದಂಡದ ಒಟ್ಟು ರೂ. ೯೦ ಸಾವಿರ ಹಣದಲ್ಲಿ ಸಂತ್ರಸ್ತೆಗೆ ರೂ. ೮೦ ಸಾವಿರ ನೀಡುವಂತೆ ಹಾಗೂ ರೂ. ೧೦ ಸಾವಿರ ದಂಡದ ರೀತಿಯಲ್ಲಿ ಸಂಗ್ರಹಿಸುವAತೆ ನ್ಯಾಯಾಲಯ ಸೂಚಿಸಿದೆ.

ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ಸರ್ಕಾರದ ಪರ ವಾದ ಮಂಡಿಸಿದ್ದರು.

-ಕೆ.ಕೆ.ಎಸ್./ಉಷಾಪ್ರೀತA