ಮಡಿಕೇರಿ, ಸೆ. ೪: ಕಂದುರೋಗ ಅಥವಾ ಬ್ರುಸೆಲ್ಲೋಸಿಸ್ ಎಂಬುವುದು ಅಗೋಚರವಾಗಿ ಅತೀ ವೇಗವಾಗಿ ಜಾನುವಾರುಗಳಲ್ಲಿ ಹರಡುವ ಒಂದು ರೋಗವಾಗಿದೆ.
ಈ ರೋಗವಿರುವ ಜಾನುವಾರುಗಳಲ್ಲಿ ಗರ್ಭಪಾತವಾಗುವುದು, ಸತ್ತೆ ಬೀಳದಿರುವುದು ಹಾಗೂ ಗರ್ಭ ನಿಲ್ಲದಿರುವುದು ಕಾಣಿಸಿಕೊಳ್ಳುತ್ತದೆ. ಸೋಂಕಿತ ಜಾನುವಾರುಗಳ ಹಾಲು ಅಥವಾ ಹಾಲಿನ ಉತ್ಪನ್ನಗಳ ಸೇವನೆಯಿಂದ ಮನುಷ್ಯರಲ್ಲಿಯೂ ಸಹ ಗಂಟುನೋವು, ಮಕ್ಕಳಾಗದಿರುವಿಕೆಗೆ ಕಾರಣವಾಗಬಹುದು. ಆದ್ದರಿಂದ ರಾಷ್ಟಿçÃಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಾ. ೬ ರಿಂದ ೧೫ ರವರೆಗೆ ಕೊಡಗು ಜಿಲ್ಲೆಯಾದ್ಯಂತ ೪ ರಿಂದ ೮ ತಿಂಗಳ ಹಸು ಮತ್ತು ಎಮ್ಮೆಯ ಹೆಣ್ಣು ಕರುಗಳಿಗೆ ಕಂದು ರೋಗದ ವಿರುದ್ಧ ಪಶುಸಂಗೋಪನಾ ಇಲಾಖಾ ವತಿಯಿಂದ ಉಚಿತ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸ್ಥಳೀಯ ಪಶುವೈದ್ಯಕೀಯ ಸಂಸ್ಥೆಗಳಿಗೆ ಮಾಹಿತಿ ನೀಡಿ ಕಂದುರೋಗದ ವಿರುದ್ಧ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಪಿ. ಸುರೇಶ್ ಭಟ್ ತಿಳಿಸಿದ್ದಾರೆ.