ಇಂದು ಶಿಕ್ಷಕರ ದಿನಾಚರಣೆ
ಮೊದಲ ಗುರು ಅಮ್ಮ ಕಲಿಸಿದ ನುಡಿಗಳಿಗೆ ಅಕ್ಷರಗಳ ಜೋಡಣೆ ಹೇಳಿಕೊಡುವ ಬಹುತರ ಹೊಣೆಗಾರಿಕೆ ಹೊತ್ತು ಮಾಡುವ ಕಾರ್ಯ, ಶಾಲೆಯೆಂಬ ದೇಗುಲದಲ್ಲಿರುವ ಎರಡನೆ ಗುರುವಿನ ಕೆಲಸ. ಆಕಾರವಿಲ್ಲದ ಶಿಲೆಗೆ ರೂಪಕೊಡುವ ಶಿಲ್ಪಿಯಂತೆ, ಖಾಲಿ ಹಾಳೆಯಂತಹ ಮನದಲ್ಲಿ ವಿದ್ಯೆ ಮತ್ತು ಜ್ಞಾನವನ್ನು ತುಂಬಿಸಿ ಸಾಧನೆಯ ಗುರಿ ತಲುಪಲು ದಾರಿಯನ್ನು ತೋರಿಸಿ ಕೊಡುವ ಕೆಲಸವನ್ನು ಗುರುವಾದವನು ಮಾಡುವನು. ಮಕ್ಕಳ ಕುಚೇಷ್ಠೆಗೆ ತಾಳ್ಮೆ ಕಳೆದುಕೊಂಡ ಸಂದರ್ಭದಲ್ಲಿ ನೀವು ಉದ್ದಾರ ಆದ ಹಾಗೆ, ನಿಮ್ಮಂತಹ ಕೆಟ್ಟ ಬ್ಯಾಚ್ ನೋಡಿಲ್ಲ, ನೀವು ಭೂಮಿಗೆ ಭಾರ ದೇಶಕ್ಕೆ ದಂಡ ಎಂದು ಬೈದುಕೊಳ್ಳುತ್ತಾ, ಬೈದ ನಂತರ ಪಶ್ಚಾತ್ತಾಪ ಪಡುತ್ತಾ ಬದುಕಿಗೆ ವಿದ್ಯೆ ಎಷ್ಟು ಅವಶ್ಯವೆಂದು ಮನದಟ್ಟು ಮಾಡುವರು. ವಿದ್ಯಾರ್ಥಿಗಳ ತುಂಟತನವನ್ನು ಸಹಿಸುತ್ತಾ, ಕಿಡಿಗೇಡಿ ಮಕ್ಕಳ ಉತ್ತರಿಸಲು ಅಸಾಧ್ಯವಾದ ತಲೆಹರಟೆ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನು ತಿದ್ದಿ, ಬುದ್ಧಿ ಹೇಳಿ ಒಳ್ಳೆಯ ವಿದ್ಯಾರ್ಥಿಗಳನ್ನಾಗಿ ಮಾಡುವ ಸವಾಲನ್ನು ಎದುರಿಸುವರು. ಮಕ್ಕಳ ಮನಸ್ಥಿತಿ ಬೇರೆ ಬೇರೆಯಾಗಿದ್ದರೂ ಅವರಿಗೆ ಅರ್ಥ ಮಾಡಿಕೊಳ್ಳುವ ಸುಲಭ ದಾರಿ ಕಂಡುಕೊAಡು ಪಾಠ ಅರ್ಥೈಸುವ ಚಾಣಾಕ್ಷತನ ಶಿಕ್ಷಕರಿಗಿದೆ. ಕಪ್ಪೆಗಳಂತೆ ಕುಳಿತಲ್ಲಿ ಕುಳಿತಿರದ ಅತ್ತಿಂದಿತ್ತ ನೆಗೆಯುತ್ತಾ ಸಹಪಾಠಿಯ ದೂರು ಹೇಳುತ್ತಿದ್ದಾಗ ಬಾಯಿ ಮಾತಲ್ಲಿ ಬುದ್ಧಿ ಹೇಳಿ ಬಗ್ಗದಾಗ ಬೆತ್ತದ ರುಚಿ ತೋರಿಸಿ ಅವರಿಗೆ ನ್ಯಾಯ ಒದಗಿಸುವ ತಾಳ್ಮೆ ಜಾಣ್ಮೆ ಶಿಕ್ಷಕರಿಗೆ ಮಾತ್ರ ಇದೆ ಎಂದರೆ ತಪ್ಪಾಗದು.
ಶಿಕ್ಷಕರು ಎದುರಿಸುವ ಸವಾಲನ್ನು ಅರ್ಥಮಾಡಿಕೊಂಡAತಹ ನಮ್ಮ ದೇಶದ ಎರಡನೆ ರಾಷ್ಟçಪತಿ ಸ್ವತ: ಶಿಕ್ಷಕರಾಗಿ ಸೇವೆ ಸಲ್ಲಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವೇ ಶಿಕ್ಷಕರ ದಿನ. ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಪೋಷಕರ ಸ್ಥಾನವನ್ನು ಪಡೆದುಕೊಳ್ಳುತ್ತಾರೆ, ಎಲ್ಲಾ ಶಿಕ್ಷಕರನ್ನು ಎಲ್ಲರೂ ನೆನೆಯುವಂತಾಗಬೇಕೆAದು ತಮ್ಮ ಜನ್ಮದಿನ ಸೆಪ್ಟೆಂಬರ್ ೫ನ್ನು ಶಿಕ್ಷಕರ ದಿನವನ್ನಾಗಿ ಮಾರ್ಪಡಿಸಿ ಧೀಮಂತರೆನಿಸಿಕೊAಡಿದ್ದಾರೆ. ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರಾಚಾರ್ಯ, ಮಧ್ವ, ರಾಮಾನುಜ, ಪ್ಲೇಟೋ, ಬ್ರಾ÷್ಯಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ವಿಚಾರಧಾರೆಗಳನ್ನು ಬರೆಯುತ್ತಾ ಸಾಗಿದ ಇವರು ‘ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್’ ಎಂಬ ಮೊದಲ ಪುಸ್ತಕ ಬರೆದರು. ವಿದೇಶಗಳಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನವರಿಕೆ ಮಾಡಿಕೊಟ್ಟರು. ರಾಧಾಕೃಷ್ಣನ್ ಅವರ ಅಪಾರ ಸೇವೆಯನ್ನು ಗುರುತಿಸಿದ ಸರಕಾರ ಮೊಟ್ಟಮೊದಲ ಉಪರಾಷ್ಟçಪತಿ (೧೯೫೧-೫೨) ಹುದ್ದೆಯಲ್ಲಿದ್ದಾಗಲೇ ಅವರಿಗೆ ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ಅದೇ ರೀತಿ ಎರಡನೇ ಬಾರಿ ೧೯೬೨ ರಲ್ಲಿ ರಾಷ್ಟçಪತಿಯಾಗಿ ಆಯ್ಕೆಯಾದಾಗಲೂ ದೇಶದ ಸರ್ವತೋಮುಖ ಏಳಿಗೆಗೆ ಶ್ರಮಿಸಿದರು. ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪನ್ನೊತ್ತಿದ್ದಾರೆ. ಇಂದಿನ ಈ ದಿನವನ್ನು ರಾಧಾಕೃಷ್ಣನ್ ಅವರನ್ನು ನೆನೆದುಕೊಳ್ಳುತ್ತ ಆ ಮೂಲಕ ಶಿಕ್ಷಕರ ಸೇವೆಗೊಂದು ಸಲಾಂ ಹೇಳೋಣ.
- ಕುಕ್ಕುನೂರು ರೇಷ್ಮ ಮನೋಜ್, ಕುಶಾಲನಗರ.