ಮಡಿಕೇರಿ, ಸೆ. ೪: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ಕೈಲ್‌ಪೊಳ್ದ್ ಹಬ್ಬವನ್ನು ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಕೊರೊನಾ ಮನೆ-ಮನೆಗಳಲ್ಲಿ ಬಂಧು-ಬಾAಧವ ರೊಂದಿಗೆ ಸೇರಿ ಆಚರಣೆ ಮಾಡಲಾಯಿತು. ಕೊಡಗಿನ ಆಯುಧ ಪೂಜೆ ಎಂದು ಪರಿಗಣಿಸಲಾಗಿರುವ ಕೃಷಿ ಸಂಬAಧಿತ ಹಬ್ಬವಾದ ಕೈಲ್ ಮುಹೂರ್ತದಲ್ಲಿ ಕೃಷಿಗೆ ಬಳಸಲಾಗುವ ನೇಗಿಲು, ನೊಗ, ಎತ್ತು, ಕತ್ತಿ ಗುದ್ದಲ್ಲಿ ಸೇರಿದಂತೆ ಸಂಪ್ರದಾಯ ಬದ್ಧ ಆಯುಧವಾದ ಕೋವಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ ಆಹಾರ ದೊಂದಿಗೆ ಹಬ್ಬಾಚರಿಸಲಾಯಿತು.
ಫೆಡರೇಷನ್ ಆಫ್ ಕೊಡವ ಸಮಾಜದಿಂದ
ಫೆಡರೇಷನ್ ಆಫ್ ಕೊಡವ ಸಮಾಜದಿಂದ "ಕೈಲ್‌ಪೊಳ್ದ್" ಹಬ್ಬ ವನ್ನು ಸರಳವಾಗಿ ಆಚರಿಸಲಾಯಿತು.
ಬಾಳುಗೋಡಿನ ಕೊಡವ ಸಮಾಜದಲ್ಲಿ ಸಂಪ್ರದಾಯದAತೆ ಕೋವಿ, ಕತ್ತಿಯನ್ನು ಸಿಂಗರಿಸಿ ನೆಲ್ಲಕ್ಕಿಯಲ್ಲಿಟ್ಟು, ವಿಶೇಷ ಪೂಜೆ ಸಲ್ಲಿಸ ಲಾಯಿತು. ಕೊಡಗಿನ ಒಳಿತಿಗಾಗಿ ಪ್ರಮುಖರು ಪ್ರಾರ್ಥಿಸಿದರು.
ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ
ಪುತ್ತರಿರ ಐನ್‌ಮನೆಯಲ್ಲಿ
ಚೆಟ್ಟಳ್ಳಿ: ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಐನ್‌ಮನೆಯಲ್ಲಿ ಕೈಲ್ ಪೊಳ್ದ್ ಹಬ್ಬದ ಆಚರಣೆಯನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಯಿತು.
ಪೂರ್ವಾಹ್ನ ೧೦ ಗಂಟೆಗೆ ಕುಟುಂಬದ ಹಿರಿಯರು, ಪುರುಷರು, ಮಹಿಳೆ ಯರು ಹಾಗೂ ಮಕ್ಕಳೆಲ್ಲ ಪುತ್ತರಿರ ಐನ್‌ಮನೆಯಲ್ಲಿ ಸೇರಿ ನೆಲ್ಲಕ್ಕಿ ಬಾಡೆಯಲ್ಲಿ ದೇವರ ದೀಪಕ್ಕೆ ನಮಸ್ಕರಿಸಿ ಹಿರಿಯರ ಆರ್ಶೀವಾದ ಪಡೆದರು.
ನೆಲ್ಲಕ್ಕಿ ನಡುಬಾಡೆಯಲ್ಲಿ ಕೊಡವರ ಸಾಂಪ್ರದಾಯಿಕ ಆಯುಧವಾದ ಕೋವಿ, ಒಡಿಕತ್ತಿ ನಳನಿಟ್ಟು ವಿಶೇಷ ಪಟ್ಟತೋಕ್‌ಪೂ, ಗಂಧದ ಬೊಟ್ಟನ್ನಿಟ್ಟು ಹಬ್ಬದ ಅಂಗವಾಗಿ ತಯಾರಿಸಿದಂತ ವಿಶೇಷ ಭೋಜನವನ್ನು ದೇವರಿಗೆ ಅರ್ಪಿಸಿದರು. ಕುಟುಂಬದ ಹಿರಿಯರಾದ ಪುತ್ತರಿರ ಟುಟ್ಟು ಕಾರ್ಯಪ್ಪ ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಈ ಕೈಲ್‌ಪೊಳ್ದ್ ಹಬ್ಬದ ಆಚರಣೆಯನ್ನು ಕುಟುಂಬದವರೆಲ್ಲ ಸೇರಿ ಆಚರಿಸಿದರು. ಕುಟುಂಬದವರನ್ನು ಕಾಪಾಡಬೇಕೆಂದು ದೇವರ ನೆಲೆಯಲ್ಲಿ ಬೇಡಿಕೊಂಡರು.
ಕುಟುಂಬದ ಪ್ರತೀ ಮನೆಮನೆಯಿಂದಲು ತಂದ ವಿಶೇಷ ಭೋಜನವನ್ನು ಕುಟುಂಬದವರೆಲ್ಲ ಸವಿದರು. ಪುರುಷರು, ಮಹಿಳೆಯರು ಹಾಗೂ ವiಕ್ಕಳು ಐನ್ ಮನೆಯ ಮುಂದಿನ ಹಟ್ಟಿಯಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆದು ಕೊಡವ ಸಾಂಪ್ರದಾಯಿಕ ವಾಲಗ ಕುಣಿತಕ್ಕೆ ಹೆಜ್ಜೆ ಹಾಕಿ ಕುಣಿದು ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಆಚರಿಸಿದರು. ನಂತರ ಕುಟುಂಬದ ಪುರುಷರು ಊರ ಮಂದ್‌ಗೆ ತೆರಳಿ ಊರಿನವರ ಸಮ್ಮುಖದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಈ ವರ್ಷದ ಕೈಲ್‌ಪೊಳ್ದ್ ಹಬ್ಬಕ್ಕೆ ತೆರೆ ಎಳೆಯಲಾಯಿತು.*ಗೋಣಿಕೊಪ್ಪ: ಆಯುಧ ಪೂಜೆಯ ಪ್ರಯುಕ್ತ ನಡಿಕೇರಿ ಗ್ರಾಮಸ್ಥರು ಕೋವಿ, ನೇಗಿಲು, ಆಯುಧಗಳಿಗೆ ಪೂಜಿಸಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಕ್ರೀಡಾ ಸ್ಪರ್ಧೆಗಳ ಮೂಲಕ ಕೈಲ್‌ಪೊಳ್ದ್ ಆಚರಣೆಯನ್ನು ನಡೆಸಿ ಸಂಭ್ರಮಿಸಿದರು.
ನಡಿಕೇರಿ ಊರಿನ ಅಂಬಲದಲ್ಲಿ ಗ್ರಾಮಸ್ಥರ ಕೋವಿಗಳನ್ನು ಹಾಗೂ ನೇಗಿಲುಗಳನ್ನು ಪೂಜಿಸಿ ನಂತರ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀ. ತಲಭಲೇಶ್ವರ ದೇವಾಲಯದ ವತಿಯಿಂದ ಹಬ್ಬದ ಆಚರಣೆಗೆ ಗ್ರಾಮಸ್ಥರು ಮುಂದಾದರು.
ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಊರಿನವರ ಸಮ್ಮುಖದಲ್ಲಿ ಹಬ್ಬವನ್ನು ಊರಿನ ಗ್ರಾಮದ ಅಧ್ಯಕ್ಷ ಕೋಳೆರ ನರೇಂದ್ರ ಅವರ ಉಸ್ತುವಾರಿಯಲ್ಲಿ ಕೈಲ್‌ಪೊಳ್ದ್ ಆಚರಣೆ ನಡೆಯಿತು.
ಗ್ರಾಮದ ಯುವಕ ಸಂಘದ ವತಿಯಿಂದ ಮಹಿಳೆಯರಿಗೆ ಏರ್‌ಗನ್‌ನಿಂದ ಬಲೂನ್‌ಗೆ ಗುಂಡು ಹೊಡೆಯುವುದು, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ನಡಿಕೇರಿ ಅಂಬಲದಿAದ ಗ್ರಾಮದ ಗಡಿಭಾಗಕ್ಕೆ ಕಾಲ್ನಡಿಗೆ ತೆರಳಿ ಗಾಳಿಯಲ್ಲಿ ಗುಂಡು ಹಾರಿಸಿ ಸಾಂಪ್ರಾದಾಯಿಕ ಆಚರಣೆ ನೆರವೇರಿಸಲಾಯಿತು.
ಗ್ರಾಮದ ಹಿರಿಯ ಚೆಟ್ಟಮಾಡ ಮಾಚಯ್ಯ, ಯುವಕ ಸಂಘದ ಸದಸ್ಯರಾದ ಕಳ್ಳಿಚಂಡ ಸುನೀಲ್, ಮುದ್ದಿಯಡ ಕಿಶೋರ್, ಗ್ರಾ.ಪಂ. ಸದಸ್ಯರಾದ ಶೀಲಾಕಿಶೋರ್, ಆಶಾ ಕಾರ್ಯಕರ್ತೆ ಮಾಣಿಪಂಡ ನಳಿನಿ, ಕೋಳೆರ ಸನ್ನು ಕಾವೇರಪ್ಪ, ಕೋಳೇರ ವೆಂಕಟೇಶ್, ಕೋಳೆರ ಸ್ವೀಟಿ ಮಂದಣ್ಣ, ಬಿಪಿನ್, ಲೊಕೇಶ್, ಗ್ರಾಮದ ಅಧ್ಯಕ್ಷ ಕೋಳೆರ ನರೇಂದ್ರ ಅವರ ಉಸ್ತುವಾರಿಯಲ್ಲಿ ಕೈಲ್‌ಪೊಳ್ದ್ ಆಚರಣೆ ನಡೆಯಿತು.
ಗ್ರಾಮದ ಯುವಕ ಸಂಘದ ವತಿಯಿಂದ ಮಹಿಳೆಯರಿಗೆ ಏರ್‌ಗನ್‌ನಿಂದ ಬಲೂನ್‌ಗೆ ಗುಂಡು ಹೊಡೆಯುವುದು, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ನಡಿಕೇರಿ ಅಂಬಲದಿAದ ಗ್ರಾಮದ ಗಡಿಭಾಗಕ್ಕೆ ಕಾಲ್ನಡಿಗೆ ತೆರಳಿ ಗಾಳಿಯಲ್ಲಿ ಗುಂಡು ಹಾರಿಸಿ ಸಾಂಪ್ರಾದಾಯಿಕ ಆಚರಣೆ ನೆರವೇರಿಸಲಾಯಿತು.
ಗ್ರಾಮದ ಹಿರಿಯ ಚೆಟ್ಟಮಾಡ ಮಾಚಯ್ಯ, ಯುವಕ ಸಂಘದ ಸದಸ್ಯರಾದ ಕಳ್ಳಿಚಂಡ ಸುನೀಲ್, ಮುದ್ದಿಯಡ ಕಿಶೋರ್, ಗ್ರಾ.ಪಂ. ಸದಸ್ಯರಾದ ಶೀಲಾಕಿಶೋರ್, ಆಶಾ ಕಾರ್ಯಕರ್ತೆ ಮಾಣಿಪಂಡ ನಳಿನಿ, ಕೋಳೆರ ಸನ್ನು ಕಾವೇರಪ್ಪ, ಕೋಳೇರ ವೆಂಕಟೇಶ್, ಕೋಳೆರ ಸ್ವೀಟಿ ಮಂದಣ್ಣ, ಬಿಪಿನ್, ಲೊಕೇಶ್, ಮಡಿಕೇರಿ : ಹೆರವನಾಡು ಗ್ರಾಮದ ಉಡೋತ್‌ನಲ್ಲಿ ಜೈ ಹನುಮಾನ್ ಸಂಘದ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಕ್ರೀಡಾಕೂಟವನ್ನು ಕೋವಿಡ್ ನಿಯಮಾನುಸಾರ ಆಚರಿಸಲಾಯಿತು. ಈ ಸಂದರ್ಭ ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ಭಾರದ ಗುಂಡು ಎಸೆತ, ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವುದು ಮತ್ತು ಪಾಸಿಂಗ್ ದಿ ಬಾಲ್ ಕ್ರೀಡೆಗಳು ನಡೆದವು.
ಪುರುಷರ ವಾಲಿಬಾಲ್ ಪಂದ್ಯದಲ್ಲಿ ರವೀಂದ್ರ ಫ್ರೆಂಡ್ಸ್ ಗೋಳಿಕಟ್ಟೆ ಪ್ರಥಮ ಹಾಗೂ ಶಾಕ್ ಬಾಯ್ಸ್ ಉಡೋತ್ ದ್ವಿತೀಯ ಸ್ಥಾನ, ಮಹಿಳೆಯರ ಹಗ್ಗಜಗ್ಗಾಟದಲ್ಲಿ ಅಪ್ಪಂಗಳದ ಕನ್ನಿಕೆ ಫ್ರೆಂಡ್ಸ್ ಪ್ರಥಮ ಹಾಗೂ ಉಡೋತ್ ನೀತು ಫ್ರೆಂಡ್ಸ್ ದ್ವಿತೀಯ, ಪುರುಷರ ಹಗ್ಗಜಗ್ಗಾಟದಲ್ಲಿ ಅಪ್ಪಂಗಳದ ಶ್ರೀ ವಿಜಯ ವಿನಾಯಕ ಸಂಘ ಪ್ರಥಮ ಹಾಗೂ ಗೋಳಿಕಟ್ಟೆಯ ರವೀಂದ್ರ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಗೋಪಾಲ ಪೂಜಾರಿ, ಎಂ.ಆರ್. ಮಣಿಕಂಠ ಹಾಗೂ ಜೈ ಹನುಮಾನ್ ಸಂಘದ ಅಧ್ಯಕ್ಷ ನಾಪಂಡ ಸದಾಶಿವ, ಸಂಘದ ಎಲ್ಲಾ ಸದಸ್ಯರುಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಮದಲಾಪುರ ಸೀಗೆಹೊಸೂರು ಕೂಡಿಗೆ ಕೂಡುಮಂಗಳೂರು ಗ್ರಾಮಗಳಲ್ಲಿ ಕೈಲ್ ಮುಹೂರ್ತ ಅಚರಣೆ ಮಾಡುವವರು ತಮ್ಮ ತಮ್ಮ ಮನೆಗಳಲ್ಲಿ ಸಂಪ್ರದಾಯದAತೆ ಪೂಜೆ ಸಲ್ಲಿಸಿ ಹಬ್ಬವನ್ನು ಅಚರಿಸಿದರು.
ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಮದಲಾಪುರ ಸೀಗೆಹೊಸೂರು ಕೂಡಿಗೆ ಕೂಡುಮಂಗಳೂರು ಗ್ರಾಮಗಳಲ್ಲಿ ಕೈಲ್ ಮುಹೂರ್ತ ಅಚರಣೆ ಮಾಡುವವರು ತಮ್ಮ ತಮ್ಮ ಮನೆಗಳಲ್ಲಿ ಸಂಪ್ರದಾಯದAತೆ ಪೂಜೆ ಸಲ್ಲಿಸಿ ಹಬ್ಬವನ್ನು ಅಚರಿಸಿದರು.
ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಮದಲಾಪುರ ಸೀಗೆಹೊಸೂರು ಕೂಡಿಗೆ ಕೂಡುಮಂಗಳೂರು ಗ್ರಾಮಗಳಲ್ಲಿ ಕೈಲ್ ಮುಹೂರ್ತ ಅಚರಣೆ ಮಾಡುವವರು ತಮ್ಮ ತಮ್ಮ ಮನೆಗಳಲ್ಲಿ ಸಂಪ್ರದಾಯದAತೆ ಪೂಜೆ ಸಲ್ಲಿಸಿ ಹಬ್ಬವನ್ನು ಅಚರಿಸಿದರು.
ಗೋಣಿಕೊಪ್ಪಲು : ಕೈಲ್‌ಪೊಳ್ದ್ ಅಂಗವಾಗಿ ಸಾಂಪ್ರದಾಯಿಕವಾಗಿ ತಮ್ಮ ವಾಹನಗಳಿಗೆ ಹಾಗೂ ಆಯುಧಗಳಿಗೆ ಪೂಜೆ ಸಲ್ಲಿಸಿ ಆಚರಿಸಲಾಯಿತು.
ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸ್ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಗ್ರಾಮದ ಅನೇಕರು ಭಾಗವಹಿಸಿ ಸಾಂಪ್ರದಾಯಿಕ ಪೂಜೆಯಲ್ಲಿ ಪಾಲ್ಗೊಂಡರು.
ಈ ವೇಳೆ ಸಮಾಜದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕಟ್ಟೇರ ಈಶ್ವರ್, ಸಲಹೆಗಾರ ರವಿ ಸುಬ್ಬಯ್ಯ, ನಾಡು ತಕ್ಕರಾದ ಕೈಬುಲ್ಲಿರ ಹರೀಶ್, ಕಾರ್ಯದರ್ಶಿ ಮನ್ನೆರ ರಮೇಶ್, ಉಪಾಧ್ಯಕ್ಷ ಮಾಣೀರ ವಿಜಯ್ ನಂಜಪ್ಪ, ಪ್ರಮುಖರಾದ ಮನ್ನೆರ ಕಾವೇರಮ್ಮ ಅಜೀತ್, ಗಿಲನ್ ಗಣಪತಿ, ರವಿ ಮುಂತಾದವರು ಉಪಸ್ಥಿತರಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ತೋಣಕೇರಿ ಭಗವತಿ ಅಂಬಲದಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಾಮೂಹಿಕವಾಗಿ ಹಾಗೂ ಸಾಂಪ್ರದಾಯಕವಾಗಿ ಆಚರಿಸಲಾಯಿತು. ಗ್ರಾಮಸ್ಥರು ಕೃಷಿ ಪರಿಕರಗಳಿಗೆ ಹಾಗೂ ಶಸ್ತಾçಸ್ತçಗಳಿಗೆ ಪೂಜೆ ಸಲ್ಲಿಸಿದರು. ನಂತರ ಅರಳಿ ಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕಿ ಮುಹೂರ್ತದ ಹಾಡನ್ನು ಹಾಡಿ ದೇವರನ್ನು ಸ್ತುತಿಸಿದರು. ಈ ಸಂದರ್ಭ ಗ್ರಾಮಸ್ಥರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಗ್ರಾಮದ ಹಿರಿಯರು ಹಾಗೂ ಕಿರಿಯರು ತಮ್ಮ ಗುರಿ ಪ್ರದರ್ಶನ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ತೆAಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮಲ್ಚೀರ ರಮೇಶ್ ಸೋಮಯ್ಯ ಪ್ರಥಮ, ಮಲ್ಚೀರ ಹರ್ಷ ದ್ವಿತೀಯ,
ಮಲ್ಚೀರ ಮಹೇಶ್ ಪೂಣಚ್ಚ ತೃತೀಯ ಬಹುಮಾನ ಕೊಂಡರು. ಕಾರ್ಯಕ್ರಮದಲ್ಲಿ ಮುಗುಟಗೇರಿ ಮರಣ ನಿಧಿ ಅಧ್ಯಕ್ಷ ಚೀರಂಡ ಗಣಪತಿ, ತೋಣಕೇರಿ ದೇವಸ್ಥಾನ ಸಮಿತಿ ಅಧ್ಯಕ್ಷ ಕಳ್ಳಿಚಂಡ ಪೂವಯ್ಯ, ಗ್ರಾ.ಪಂ.ಸದಸ್ಯ ಆಲೆಮಾಡ ನವೀನ್, ಪೊನ್ನಂಪೇಟೆ ಎಪಿಸಿಎಂಎಸ್ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ಕಾರ್ಯಕ್ರಮ ಸಂಚಾಲಕ ಚೀರಂಡ ಪ್ರವೀಣ್ ಚಂಗಪ್ಪ ಹಾಗೂ ಗ್ರಾಮಸ್ಥರು ಇದ್ದರು. ಮುದ್ದಿಯಡ ಗಣೇಶ್ ಪೂಜಾ ಕಾರ್ಯ ನೆರವೇರಿಸಿದರು.
ಕುಶಾಲನಗರ : ಕುಶಾಲನಗರ ಪಟ್ಟಣ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಮನೆ ಮನೆಯಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಅವರ ನಿವಾಸದಲ್ಲಿ ಕೈಲ್‌ಪೊಳ್ದ್ ಅಂಗವಾಗಿ ಆಯುಧಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವುದರೊಂದಿಗೆ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕೂಡ ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ.