ವೀರಾಜಪೇಟೆ, ಸೆ. ೪: ಈ ಜಗತ್ತಿನಲ್ಲಿ ದುಷ್ಟ ಶಕ್ತಿಗಳು ಹೆಚ್ಚಾದಾಗ ದೇವರು ಅವತರಿಸಿ ದುಷ್ಟಶಕ್ತಿಗಳ ಸಂಹಾರ ಮಾಡುತ್ತಾನೆ. ರಾಮಾಯಣ, ಮಹಾಭಾರತಗಳನ್ನು ಮೇಲುದೃಷ್ಟಿಯಿಂದ ನೋಡಬಾರದು ಅದರಲ್ಲಿರುವ ತತ್ವಸಾರವನ್ನು ತಿಳಿದುಕೊಳ್ಳಬೇಕು ಎಂದು ಸಾಹಿತಿ ಪುಷ್ಪಲತಾ ಶಿವಪ್ಪ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬಾಲಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಡೆದ ಛಧ್ಮವೇಷ ಹಾಗೂ ನೃತ್ಯ ಸ್ಪರ್ಧೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಪುಷ್ಪಲತಾ ಅವರು ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತಗಳನ್ನು ಓದಿ ಅದರಲ್ಲಿರುವ ತತ್ವಸಾರವನ್ನು ತಿಳಿದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಸದಸ್ಯೆ, ಸಾಹಿತಿ ರಜಿತ ಕಾರ್ಯಪ್ಪ ಮಾತನಾಡಿ ಮಕ್ಕಳಿಗೆ ಸಂಸ್ಕöÈತಿ, ಸಂಸ್ಕಾರದ ತಿಳುವಳಿಕೆಯ ಜೊತೆಗೆ ನಾಯಕತ್ವದ ಗುಣಗಳನ್ನು ಗಳಿಸಲು ಸ್ಪರ್ಧೆಗಳು ಬಹು ಸಹಕಾರಿಯಾಗಿವೆ. ಮಕ್ಕಳಿಗೆ ಶಾಲೆಯ ವಿಷಯಗಳಿಂದ ಭಿನ್ನವಾಗಿ ತಮ್ಮನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವ ಈ ಸ್ಪರ್ಧೆಗಳು ಮನೆಯ ಹಿರಿಯರನ್ನೂ ಮಕ್ಕಳೊಂದಿಗೆ ಮಕ್ಕಳಂತೆ ಸಂತೋಷ ಪಟ್ಟುಕ್ಕೊಳ್ಳಲು ಉತ್ತಮ ಅವಕಾಶ ನೀಡುತ್ತದೆ.

ನೃತ್ಯ ಶಾಲೆಯ ಟ್ರಸ್ಟಿ ದಿಲೀಶ್ ನಾಯರ್ ಮಾತನಾಡಿ ಕೃಷ್ಣ ಜನ್ಮಾಷ್ಠಮಿಯು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಬಹಳ ಮಹತ್ವ ಪಡೆದಿದೆ ಎಂದರು.

ಬಾಲಾಂಜನೇಯ ದೇವಸ್ಥಾನದ ಅಧ್ಯಕ್ಷ ಬಾಬಾ ಶಂಕರ್ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಾಟ್ಯ ಮಯೂರಿ ನೃತ್ಯ ಶಾಲೆಯ ಶಿಕ್ಷಕಿ ವಿದೂಷಿ ಪ್ರೇಮಾಂಜಲಿ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ ಮತ ಬೇಧವಿಲ್ಲದೆ ಜಗತ್ತಿನಾದ್ಯಂತ ಕೃಷ್ಣನನ್ನು ಆರಾಧಿಸಲಾಗುತ್ತಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ವಿಚಾರಗಳು ಪ್ರಸ್ತುತ ಕೃಷ್ಣನ ಬದುಕಿನ ಕಥೆಗಳು ನಮ್ಮ ಜೀವನಕ್ಕೂ ಪ್ರೇರಣೆ ಎಂದು ಕೃಷ್ಣನ ಜನ್ಮದಿನದ ವಿಶೇಷತೆ ಮತ್ತು ಹಿನ್ನಲೆಯ ಕುರಿತು ವಿವರಿಸಿದರು.

ಕೃಷ್ಣ ಜನ್ಮಾಷ್ಠಮಿಯಂದು ಮಕ್ಕಳು ಮುದ್ದು ಕೃಷ್ಣ ಮತ್ತು ಗೋಪಿಕೆಯರ ವೇಷದಲ್ಲಿ ಕಂಗೊಳಿಸಿದರು ಮತ್ತು ಕೃಷ್ಣನ ವಿವಿಧ ಸನ್ನಿವೇಶಗಳ ನ್ನೊಳಗೊಂಡ ನೃತ್ಯ ಪ್ರದರ್ಶನವನ್ನು ನೀಡಿದರು. ಸ್ಪರ್ಧೆಯಲ್ಲಿ ವಿಜೇತರಾದÀ ಮಕ್ಕಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಟ್ರಸ್ಟಿಗಳಾದ ಗಿರೀಶ್ ಇದ್ದರು. ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಟ್ರಸ್ಟಿಗಳಾದ ಲವೀನ್ ಲೋಪೇಸ್ ಕಾರ್ಯಕ್ರಮ ನಿರ್ವಹಿಸಿದರು. ಕೋವಿಡ್ ಮಾರ್ಗ ಸೂಚಿಗನು ಸಾರವಾಗಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.