ಸೋಮವಾರಪೇಟೆ, ಸೆ. ೪: ಇಲ್ಲಿನ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಮತ್ತು ೩ರಲ್ಲಿ ತೆರವಾಗಿರುವ ಸದಸ್ಯ ಸ್ಥಾನಕ್ಕೆ ತಾ. ೩ ರಂದು ಶಾಂತಿಯುತ ಮತದಾನ ನಡೆದಿದ್ದು, ತಾ. ೬ ರಂದು (ನಾಳೆ) ಫಲಿತಾಂಶ ಪ್ರಕಟವಾಗಲಿದೆ.

ಎರಡೂ ವಾರ್ಡ್ಗಳಿಗೆ ಸಂಬAಧಿಸಿದAತೆ ೭ ಮಂದಿ ಕಣದಲ್ಲಿದ್ದು, ವಾರ್ಡ್ ೧ ರಲ್ಲಿ ಬಿಜೆಪಿ ಯಿಂದ ಬಿ.ಆರ್. ಮೃತ್ಯುಂಜಯ, ಕಾಂಗ್ರೆಸ್ ಅಭ್ಯರ್ಥಿಯಾಗಿ ಭುವನೇಶ್ವರ್, ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಎಸ್. ಗಿರೀಶ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ರವಿಶಂಕರ್, ವಾರ್ಡ್ ೩ರಲ್ಲಿ ಬಿಜೆಪಿಯಿಂದ ಮೋಹಿನಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂದ್ಯಾ ಪ್ರಕಾಶ್, ಜೆಡಿಎಸ್‌ನಿಂದ ಕೆ.ಎಂ.ಪುಷ್ಪ ಕಣದಲ್ಲಿದ್ದರು.

೧ನೇ ವಾರ್ಡ್ಗೆ ಸಂಬAಧಿಸಿ ದಂತೆ ಎಸ್.ಜೆ.ಎಂ. ಬಾಲಿಕಾ ಪ್ರೌಢಶಾಲೆಯ ಮತಗಟ್ಟೆ ಹಾಗೂ ೩ನೇ ವಾರ್ಡ್ ಬೇಳೂರು ರಸ್ತೆಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾರರು ಮತ ಚಲಾಯಿಸಿದರು. ಎರಡೂ ಮತಗಟ್ಟೆಗಳಲ್ಲಿ ಮಧ್ಯಾಹ್ನದವರೆಗೆ ಮಂದಗತಿಯಲ್ಲಿ ಮತದಾನ ನಡೆಯಿತು. ಸಂಜೆ ೪ ಗಂಟೆಯಿAದ ೬ ಗಂಟೆಯವರೆಗೆ ಬಿರುಸಿನ ಮತದಾನವಾಯಿತು.

ವಾರ್ಡ್ ೧ರಲ್ಲಿ ೫೫೫ ಮತದಾರರ ಪೈಕಿ ೩೫೫ ಮತದಾರರು ಮತ ಚಲಾಯಿಸಿದರು. ಇದರಲ್ಲಿ ಪುರುಷರು ೧೭೩ ಹಾಗೂ ಮಹಿಳೆಯರು ೧೮೨ ಮಂದಿ ಮತದಾನದಲ್ಲಿ ಭಾಗವಹಿಸುವ ಮೂಲಕ ಶೇ. ೬೩.೯೬ ಮತದಾನ ವಾಯಿತು.

ಮೂರನೇ ವಾರ್ಡ್ನ ೪೮೪ ಮತದಾರರ ಪೈಕಿ ೪೦೪ ಮತದಾರರು ತಮ್ಮ ಮತ ಚಲಾಯಿಸಿದರು. ಪುರುಷರು ೧೮೩ ಹಾಗೂ ೨೨೧ ಮಹಿಳೆಯರು ತಮ್ಮ ಮತ ಚಲಾಯಿಸುವ ಮೂಲಕ ಶೇ. ೮೩.೪೭ರಷ್ಟು ಮತದಾನವಾಯಿತು.

ತಹಶೀಲ್ದಾರ್ ಗೋವಿಂದರಾಜು ಹಾಗೂ ಚುನಾವಣಾಧಿಕಾರಿಯಾಗಿ ಹೇಮಂತ್‌ಕುಮಾರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದರು. ಅಭ್ಯರ್ಥಿಗಳು ತಮ್ಮ ಬೆಂಬಲಿಗರೊAದಿಗೆ ಪ್ರಚಾರದಲ್ಲಿ ತೊಡಗಿದ್ದರು.

ಎರಡೂ ಮತಗಟ್ಟೆಗಳಲ್ಲಿ ಯಾವುದೇ ಗೊಂದಲವಿಲ್ಲದೆ ಮತದಾನವಾಯಿತು. ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್ ಅವರುಗಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಈ ಹಿಂದೆ ೧ನೇ ವಾರ್ಡ್ನಿಂದ ಸದಸ್ಯರಾಗಿದ್ದ ಉದಯಶಂಕರ್ ಹಾಗೂ ೩ನೇ ವಾರ್ಡ್ನಿಂದ ಗೆಲುವು ಸಾಧಿಸಿ ಅಧ್ಯಕ್ಷರೂ ಆಗಿದ್ದ ನಳಿನಿ ಗಣೇಶ್ ಅವರುಗಳ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿದೆ. ಸದ್ಯ ಪಂಚಾಯಿತಿಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ತಲಾ ೩ ಮಂದಿ ಸದಸ್ಯರಿದ್ದಾರೆ. ಮರು ಚುನಾವಣೆಯಿಂದಾಗಿ ಯಾವ ಪಕ್ಷಕ್ಕೆ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ ಎಂಬುದು ತಾ. ೬ ರಂದು ನಿರ್ಧಾರವಾಗಲಿದೆ.

ನಾಳೆ ಫಲಿತಾಂಶ: ೨ ವಾರ್ಡ್ಗಳಿಗೆ ನಡೆದ ಮತದಾನದ ಫಲಿತಾಂಶ ತಾ. ೬ ರಂದು (ನಾಳೆ) ಬೆಳಿಗ್ಗೆ ೮ ಗಂಟೆಗೆ ಇಲ್ಲಿನ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ನಡೆಯಲಿದೆ. ಅಭ್ಯರ್ಥಿಗಳ ಭವಿಷ್ಯ ಹೊತ್ತಿರುವ ಮತಪೆಟ್ಟಿಗೆಗಳು ತಾಲೂಕು ಕಚೇರಿಯ ಭದ್ರತಾ ಕೊಠಡಿಯಲ್ಲಿ ಭದ್ರವಾಗಿದ್ದು, ತಾ. ೬ರಂದು ಪೂರ್ವಾಹ್ನ ೯ ಗಂಟೆಯ ವೇಳೆಗೆ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ.