ನಗರಸಭಾ ಸದಸ್ಯನಿಂದ ಕಸ ಸಂಗ್ರಹ
ಮಡಿಕೇರಿ: ನಗರದ ೧೭ನೇ ವಾರ್ಡಿನ ಹಲವೆಡೆ ನಗರಸಭೆಯ ಕಸ ವಿಲೇವಾರಿ ವಾಹನ ಬಾರದ ಕಾರಣ ವಾರ್ಡಿನ ಸದಸ್ಯ ಅರುಣ್ ಶೆಟ್ಟಿ ಅವರು ಸ್ವತಃ ಟ್ರಾö್ಯಕ್ಟರ್ ಬಾಡಿಗೆಗೆ ಪಡೆದು ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಿದ ಘಟನೆ ನಡೆದಿದೆ.
ಅರುಣ್ ಶೆಟ್ಟಿ ಅವರೊಂದಿಗೆ ಭಜರಂಗದಳದ ವಿನಯ್ ಅವರು ಕೂಡ ಈ ಕಾರ್ಯಕ್ಕೆ ಕೈಜೋಡಿಸಿದರು. ಕಳೆದ ಒಂದು ವಾರದಿಂದ ಕಸ ವಿಲೇವಾರಿ ವಾಹನ ಬಾರದಿರುವುದನ್ನು ಗಮನಸಿದ ಅರುಣ್ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಮನೆಮನೆಗಳಿಂದ ಕಸ ಸಂಗ್ರಹಿಸಿದ ಅರುಣ್ ಹಾಗೂ ವಿನಯ್ ಅವರು ನಂತರ ಸ್ಟೋನ್ ಹಿಲ್ನಲ್ಲಿ ವಿಲೇವಾರಿ ಮಾಡಿದ್ದಾರೆ. ವಾಹನ ಕಳುಹಿಸದೆ ನಿರ್ಲಕ್ಷö್ಯ ತೋರುತ್ತಿರುವ ನಗರಸಭೆಯ ವಿರುದ್ಧ ಅರುಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.