ಸಿದ್ದಾಪುರ, ಸೆ. ೪: ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಂದೆ-ಮಗ ಧಾರುಣವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಸಿದ್ದಾಪುರದಲ್ಲಿ ನಡೆದಿದೆ. ಟಾಟಾ ಕಂಪೆನಿಗೆ ಸೇರಿದ ಎಮ್ಮೆಗುಂಡಿ ಕಾಫಿ ತೋಟದ ಕಾರ್ಮಿಕ ಮಣಿ (೫೩) ಹಾಗೂ ಅವರ ಪುತ್ರ ಪ್ರವೀಣ್ (೨೧) ಮೃತ ದುರ್ಧೈವಿಗಳು.

ಕೈಲುಮುಹೂರ್ತ ಹಬ್ಬ ಇದ್ದ ಕಾರಣ ಕಾಫಿ ತೋಟಕ್ಕೆ ರಜೆ ಇತ್ತು. ಪ್ರವೀಣ್ ಅರೆಕಾಡುವಿನ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ. ಎಮ್ಮೆಗುಂಡಿ ಕಾಫಿ ತೋಟಕ್ಕೆ ಸ್ಕೂಟಿಯಲ್ಲಿ ಹಬ್ಬಕ್ಕೆಂದು ಮಣಿ ಮಗನನ್ನು ಕರೆತರುವಾಗ ಸಿದ್ದಾಪುರದ ಮೈಸೂರು ರಸ್ತೆಯ ಮುಲ್ಲೆತೋಡು ಎಂಬಲ್ಲಿ ರಸ್ತೆ ತಿರುವಿನಲ್ಲಿ ಸ್ಕೂಟಿ ಹಾಗೂ ಜೀಪ್ ನಡುವೆ ರಸ್ತೆ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಸ್ಕೂಟಿಯಲ್ಲಿದ್ದ ತಂದೆ-ಮಗ ಇಬ್ಬರು ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ರಸ್ತೆ ಬದಿಗೆ ಬಿದ್ದಿದ್ದರು. ನಂತರ ಸಿದ್ದಾಪುರದ ಯುವಕರು ಸೇರಿ ಚಿಂತಾಜನಕ ಸ್ಥಿತಿಯಲ್ಲಿದ್ದ ಈರ್ವರನ್ನು ವಾಹನವೊಂದರಲ್ಲಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿದರು.

ಆದರೆ, ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಈರ್ವರನ್ನು ಆ್ಯಂಬ್ಯೂಲೆನ್ಸ್ ಮೂಲಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಣಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಮಗ ಪ್ರವೀಣ್ ಜೀವನ್ಮರಣ ಸ್ಥಿತಿಯಲ್ಲಿದ್ದ ಈತನನ್ನು ಮಡಿಕೇರಿಯಿಂದ ಮೈಸೂರಿಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ ಮೃತಪಟ್ಟಿದ್ದಾನೆ.

ಸ್ಕೂಟಿ ಹಾಗೂ ಜೀಪು ನಡುವೆ ನಡೆದ ರಸ್ತೆ ಅಪಘಾತದಲ್ಲಿ ಸ್ಕೂಟಿ ಸಂಪೂರ್ಣ ಜಖಂಗೊAಡು ನಜ್ಜುಗುಜ್ಜಾಗಿದೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಮಾನವೀಯತೆ ಮೆರೆದ ಯುವಕರು

ರಸ್ತೆಯ ಬದಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು ಸ್ಥಳದಲ್ಲಿದ್ದವರು ರಕ್ಷಿಸದೆ ತಮ್ಮ ಮೊಬೈಲ್‌ಗಳಲ್ಲಿ ಚಿತ್ರಿಸುತ್ತಿದ್ದರು. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆತರಲು ಭಯಪಟ್ಟು ಹಿಂದೇಟು ಹಾಕುತ್ತಿದ್ದರು. ಅಷ್ಟರಲ್ಲಿ ಅದೇ ಮಾರ್ಗವಾಗಿ ಕೆಲಸ ನಿಮಿತ್ತ ಬರುತ್ತಿದ್ದ ಸಿದ್ದಾಪುರದ ಪತ್ರಕರ್ತ ಎ.ಎಸ್. ಮುಸ್ತಫ ಹಾಗೂ ಇವರ ಸ್ನೇಹಿತರಾದ ಆಸ್ಕರ್ ಮತ್ತು ಸಾಹುಲ್, ಜಲೀಲ್ ಸೇರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದರು.

ಆದರೆ ಜೀವನ್ಮರಣ ಸ್ಥಿತಿಯಲ್ಲಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗೆ ಇದೇ ಯುವಕರು ಸೇರಿ ಮಡಿಕೇರಿ ಆ್ಯಂಬ್ಯೂಲೆನ್ಸ್ನಲ್ಲಿ ತೆರಳಿ ಚಿಕಿತ್ಸೆ ಕೊಡಿಸಲು ಸಹಕರಿಸಿದರು. ಸಿದ್ದಾಪುರಕ್ಕೆ ಗಾಯಾಳುಗಳನ್ನು ಇಕ್ಬಾಲ್ ಎಂಬವರ ವಾಹನದಲ್ಲಿ ಕರೆತಂದು ಚಿಕಿತ್ಸೆ ಕೊಡಿಸಿ ಯುವಕರ ತಂಡ ಮಾನವೀಯತೆ ಮೆರೆದರು.

(ಮೊದಲ ಪುಟದಿಂದ) ಘಟನೆಯ ಬಗ್ಗೆ ಮೃತಪಟ್ಟ ಮಣಿರವರ ಪತ್ನಿ ಮಂಜುಳರವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಖಾಸಗಿ ತೋಟದ ಜೀಪು ಚಾಲಕ ರಂಜಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಅAತ್ಯಕ್ರಿಯೆಗೆ ವಿರೋಧ: ಮೃತರು ಹಿಂದೂ ಧರ್ಮದವರಾಗಿದ್ದರೂ ಕೂಡ ಇವರು ಹುಣಸೂರಿನ ಚರ್ಚ್ವೊಂದಕ್ಕೆ ಪ್ರಾರ್ಥನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮೃತದೇಹಗಳನ್ನು ಸಿದ್ದಾಪುರ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರು. ಅಲ್ಲದೇ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲವೆಂದು ಹಿಂದೂ ಸಂಘಟನೆಯ ಪದಾಧಿಕಾರಿ ಆಕ್ಷೇಪಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಹುಣಸೂರಿಗೆ ಕೊಂಡೊಯ್ದು ಅಂತ್ಯಸAಸ್ಕಾರ ನೆರವೇರಿಸಲಾಯಿತು. ವರದಿ: ವಾಸು