ನಾಪೋಕ್ಲು, ಸೆ. ೪: ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಅಸ್ಸಾಂ ಕಾರ್ಮಿಕರಿಗೆ ಸಂಬಳ ನಿಗದಿ ಮಾಡುವ ಸಲುವಾಗಿ ಗ್ರಾಮಸ್ಥರ ಸಭೆ ನಡೆಯಿತು.

ಸಭೆಯಲ್ಲಿ ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ರೂ. ೨೫೦ ಸಂಬಳ ನೀಡಲು ಒಮ್ಮತದಿಂದ ತೀರ್ಮಾನಿಸಲಾಯಿತು. ಕಾರ್ಮಿಕರು ಬೆಳಿಗ್ಗೆ ೮ ಗಂಟೆಯಿAದ ಸಂಜೆ ೪.೩೦ರ ವರೆಗೆ ಕಡ್ಡಾಯವಾಗಿ ಕೆಲಸ ನಿರ್ವಹಿಸಬೇಕು. ಮಧ್ಯಾಹ್ನ ಊಟಕ್ಕಾಗಿ ಒಂದು ಗಂಟೆಗಳ ಕಾಲಾವಕಾಶ ನೀಡಲು ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ವಹಿಸಿದ್ದರು.

ಕಕ್ಕಬ್ಬೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅಲ್ಲಾರಂಡ ಸನ್ನು ಅಯ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಕೋಡಿಮಣಿಯಂಡ ಬೋಪಣ್ಣ, ಹಿರಿಯ ಗ್ರಾಮಸ್ಥರಾದ ಪೊನ್ನೋಲತಂಡ ಸೋಮಣ್ಣ, ಪರದಂಡ ಡಾಲಿ ಇದ್ದರು. ಸಭೆಯಲ್ಲಿ ಗ್ರಾಮದ ಮಕ್ಕಿ ಹುಸೈನ್ ಹಾಜಿ, ಪೈಯಡಿ ಹಂಸ, ಪರದಂಡ ಅರ್ಜುನ್, ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಹಾಜರಿದ್ದರು.