ಸುಂಟಿಕೊಪ್ಪ, ಸೆ.೪: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಕೆದಕಲ್ ಗ್ರಾಮ ಪಂಚಾಯಿತಿಯಲ್ಲಿ ಕಸ ವಿಲೇವಾರಿಗೆ ಹಲವಾರು ವರ್ಷಗಳಿಂದ ಕಸವಿಲೇವಾರಿ ಘಟಕ ಸ್ಥಾಪಿಸಲು ಪಂಚಾಯಿತಿ ಸಭೆüಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಪಂಚಾಯಿತಿಗೆ ಸೂಕ್ತ ಜಾಗದ ಕೊರತೆ ಉಂಟಾಗಿತ್ತು. ಇದೀಗ ನೂತನ ಆಡಳಿತ ಮಂಡಳಿಯು ಪಂಚಾಯಿತಿ ಕಚೇರಿಯ ಹಿಂಬಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಭೂಮಿ ಪೂಜೆಯನ್ನು ಪಂಚಾಯಿತಿ ಅಧ್ಯಕ್ಷೆ ನಿಶ್ಮಿತ,ಉಪಾಧ್ಯಕ್ಷ ಸಂಜು ಪೊನ್ನಪ್ಪ ಹಾಗೂ ಅಭಿವೃಧ್ದಿ ಅಧಿಕಾರಿ ರಾಜ ಶೇಖರ್ ನೆರವೇರಿಸಿದರು.

ಈ ಸಂದರ್ಭ ಪಂಚಾಯಿತಿ ಸದಸ್ಯರು ಸಾರ್ವಜನಿಕರು ಹಾಜರಿದ್ದರು.