ವೀರಾಜಪೇಟೆ, ಸೆ. ೪: ಆರ್ಥಿಕ ಸಂಕಷ್ಟದಿAದ ಜೀವನದಲ್ಲಿ ಜಿಗುಪ್ಸೆ ಹೊಂದಿ ಕೂಲಿ ಕಾರ್ಮಿಕ ನೇಣಿಗೆ ಶರಣಾದ ಘಟನೆ ನಗರದ ದಖ್ಖನಿ ಮೊಹಲ್ಲ ವಾರ್ಡ್ನಲ್ಲಿ ನಡೆದಿದೆ.
ಮೈಸೂರು ತಾಲೂಕು, ನಾಗನಹಳ್ಳಿ ಮೂಲದ ಪ್ರಸ್ತುತ ವೀರಾಜಪೇಟೆ ನಗರದ ದಖ್ಖನಿ ಮೊಹಲ್ಲಾ ನಿವಾಸಿ ನಿಂಗರಾಜು (೪೦) ನೇಣಿಗೆ ಶರಣಾದ ವ್ಯಕ್ತಿ.
ಮೃತ ನಿಂಗರಾಜು ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸುಮಾರು ೮ ವರ್ಷದಿಂದ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿ ಹಾಗೂ ಆರ್ಥಿಕ ಸಂಕಷ್ಟದಿAದ ನೊಂದ ಮೃತ ವ್ಯಕ್ತಿ ತಾ.೪ ರ ಬೆಳಿಗಿನ ಜಾವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಈ ಸಂಬAಧ ವೀರಾಜಪೇಟೆ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಮೃತನ ಪತ್ನಿ ಲಕ್ಷಿö್ಮ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲು ಮಾಡಲಾಗಿದ್ದು. ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಲಾಗಿದೆ.