ಚೆಟ್ಟಳ್ಳಿ, ಸೆ. ೪: ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ನೇತೃತ್ವದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪರವಾಗಿ ಸಹಕಾರ ಸಂಘದಲ್ಲಿ ಸದಸ್ಯರಾಗಿ ಕೊರೊನಾ ಪೀಡಿತರಾಗಿದ್ದಂತ ಸದಸ್ಯರು, ಸಂಘದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸೇರಿ ೧೭ ಸದಸ್ಯರ ಕುಟುಂಬಗಳ ಮನೆ ಮನೆಗೆ ತೆರಳಿ ದಿನಸಿ ಕಿಟ್ಟನ್ನು ವಿತರಿಸಲಾಯಿತು.

ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ ಸಹಕಾರಿ ಸಂಘದ ಸದಸ್ಯರಿಗೆ ತೊಂದರೆಯಾದAತ ಸಂದರ್ಭದಲ್ಲಿ ಸಹಕಾರ ಸಂಘವು ಕೈಜೋಡಿಸಬೇಕಿರುವುದು ಸಂಘದ ಕರ್ತವ್ಯ. ಅದೇ ರೀತಿ ಚೆಟ್ಟಳ್ಳಿ ಸಹಕಾರ ಸಂಘವು ಸಂಘದ ನಿರ್ದೇಶಕರ ಮಾರ್ಗದರ್ಶನದಂತೆ ಇಂತಹ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ ಎಂದರು. ಈ ಸಂದರ್ಭ ಸಂಘದ ನಿರ್ದೇಶಕ ಮರದಾಳು ಉಲ್ಲಾಸ, ಪೇರಿಯನ ಪೂಣಚ್ಚ, ಪುತ್ತರಿರ ಸೀತಮ್ಮ ಮೊಣ್ಣಪ್ಪ, ಕೊಂಗೇಟಿರ ವಾಣಿ ಕಾಳಪ್ಪ ಹಾಜರಿದ್ದರು.