ತ್ರಿವೇಣಿ ಸಂಗಮದ ಎಡದಂಡೆಯಲ್ಲಿ ಶ್ರೀ ಭಗಂಡೇಶ್ವರ ದೇವಾಲಯದ ಸಮುಚ್ಚಯವು ಕಂಡು ಬರುತ್ತದೆ. ಕರಾವಳಿಯ ದೇವಾಲಯಗಳಂತೆ ಕೇರಳ ಶೈಲಿಯ ಮಿಶ್ರ ಮಾಳಿಗೆಗಳಲ್ಲಿ ನಿರ್ಮಿತಗೊಂಡಿರುವ ಈಶ್ವರ, ಸುಬ್ರಹ್ಮಣ್ಯ, ಮಹಾವಿಷ್ಣು ಮತ್ತು ಗಣಪತಿಯ ದೇವಾಲಯಗಳಿವೆ. ಗಣಪತಿಯ ದೇವಾಲಯವು ಹೊರ ಪ್ರಾಕಾರದಲ್ಲಿ ಕಂಡು ಬರುತ್ತದೆ. ಆದರೆ ಈಶ್ವರ ಅಥವಾ ಭಗಂಡೇಶ್ವರ, ಸುಬ್ರಹ್ಮಣ್ಯ ಮತ್ತು ಮಹಾವಿಷ್ಣು ದೇವಾಲಯಗಳು ಒಳ ಪ್ರಾಕಾರದಲ್ಲಿ ಸಾಲಾಗಿವೆ. ಈ ದೇವಾಲಯ ಗಳನ್ನು ಕ್ರಿ. ಶ. ೧೧ನೆಯ ಶತಮಾನಕ್ಕೂ ಹಿಂದೆ ಚೋಳರು ನಿರ್ಮಿಸಿರಬಹುದಾದ ಕಟ್ಟಡ ಗಳೆಂದು ಪ್ರತೀತಿಯಿದ್ದರೂ, ವಾಸ್ತು ಶಿಲ್ಪ ಶೈಲಿಯ ದೃಷ್ಟಿಯಿಂದ ಇವು ಕೇರಳದ ಶೈಲಿಯಿಂದ ಪ್ರಭಾವಿತ ವಾಗಿವೆ. ಈ ದೇವಾಲಯಕ್ಕೆ ಎತ್ತರವಾದ ದೊಡ್ಡ ಗೋಡೆಗಳಿಂದ ಸುತ್ತುವರೆದಿರುವ ವಿಶಾಲವಾದ ಪ್ರಾಕಾರವಿದೆ.
ಭಗಂಡೇಶ್ವರ ದೇವಾಲಯವು ಸುಮಾರು ನಾಲ್ಕು ಅಡಿ ಎತ್ತರ ವಿರುವ ಜಗ್ತಿಯ ಮೇಲೆ ಒಂದು ಚೌಕ ಗರ್ಭಗೃಹ ಹಾಗೂ ಚಿಕ್ಕದಾದ ಅರ್ಧ ಮಂಟಪಗಳನ್ನು ಮಾತ್ರ ಹೊಂದಿದೆ. ಗರ್ಭ ಗೃಹದ ಮೇಲ್ಛಾಗದಲ್ಲಿ ಶಂಕುವಿನಾಕಾರವಾದ ಶಿಖರವಿದ್ದು ಸ್ತೂಪಿಕೆಯ ತುದಿಯಲ್ಲಿ ದೊಡ್ಡ ವೀರರಾಜೇಂದ್ರನು ಹಾಕಿಸಿರುವ ಹೊನ್ನ ಕಲಶವಿದೆ. ಈ ದೇವಾಲಯದ ತಳಪಾಯವು ಕಲ್ಲಿನದ್ದಾಗಿದ್ದು ಗೋಡೆಗಳನ್ನು ಜಂಬಿಟ್ಟಿಗೆಯಿAದ ನಿರ್ಮಿಸಲಾಗಿದೆ. ಗರ್ಭಗೃಹದ ಮುಂಭಾಗದಲ್ಲಿರುವ ಅರ್ಧಮಂಟಪದ ಮೇಲೆ ಕೇರಳ ಶೈಲಿಯ ಇಳಿಜಾರಾದ ತಾಮ್ರದ ಹೊದಿಕೆಯಿರುವ ಛಾವಣಿ ಇದೆ. ಗರ್ಭಗೃಹದಲ್ಲಿ ಅತ್ಯಂತ ಪ್ರಾಚೀನ ಶೈಲಿಯ ಶಿವಲಿಂಗವಿದೆ ಮತ್ತು ಅದರ ಪಕ್ಕದಲ್ಲಿ ಪಾರ್ವತಿಯ ಕಂಚಿನ ಪ್ರತಿಮೆ ಇದೆ. ದೊಡ್ಡ ವೀರರಾಜೇಂದ್ರನು ಇಲ್ಲಿಯ ಉತ್ಸವಮೂರ್ತಿಯನ್ನು ಮಾಡಿಸಿಕೊಟ್ಟಿದ್ದಾರೆ. ಇದರ ಹೊರಭಾಗದ ಗೋಡೆಯಲ್ಲಿ ದೇವಕೋಷ್ಟಗಳಿದ್ದು ಒಳಗೆ ಅಕರ್ಷಕವಾದ ದೇವ-ದೇವತೆಗಳ ಶಿಲ್ಪಗಳಿವೆ. ಗೋಡೆಯ ಬೋದಿಗೆಗಳಲ್ಲಿ ಹೂಬಳ್ಳಿಗಳು ಹಾಗೂ ಸ್ತಿçÃಪುರುಷರ ಉಬ್ಬು ಶಿಲ್ಪಗಳಿವೆ. ಭಗಂಡೇಶ್ವರ ದೇವಾಲಯದ ಹೊರಗಡೆ ಬಲಿಪೀಠದ ಮೇಲೆ ಮರದ ಚೌಕವಾದ ಛಾವಣಿಯಿದ್ದು ಒಳಭಾಗದಲ್ಲಿ ಬ್ರಹ್ಮ, ದಿಕ್ಪಾಲಕರು ಮತ್ತು ಬಳ್ಳಿಗಳ ಅಲಂಕಾರ ಯುತ ಕೆತ್ತನೆಗಳಿವೆ. ಹೂ-ಬಳ್ಳಿಗಳಿಗೂ ಮೂರ್ತಿಗಳಿಗೂ ಬಣ್ಣಗಳನ್ನು ಉಪಯೋಗಿಸಲಾಗಿದೆ. ಅರ್ಧಮಂಟಪದ ಇಳಿಜಾರಾದ ಮರದ ಛಾವಣಿಯ ಒಳಭಾಗದಲ್ಲೂ ಅಷ್ಟದಿಕ್ಪಾಲಕರುಗಳು, ದೇವದೇವಿಯರುಗಳು ಋಷಿಗಳು, ನರ್ತಕಿಯರು, ಡೋಲು ಬಾರಿಸುವವರು, ನವಿಲು ಮುಂತಾದ ಪಕ್ಷಿಗಳು, ಹೂ ಬಳ್ಳಿಗಳು ಮುಂತಾದ ಉತ್ಕೃಷ್ಟವಾದ ಕಾಷ್ಟ ಶಿಲ್ಪಗಳು ಕಂಡು ಬರುತ್ತವೆ. ಮುಖಮಂಟಪದ ಮುಂಭಾಗದಲ್ಲಿ ಇಳಿಜಾರಾದ ತಾಮ್ರದ ಹೆಂಚಿನ ಛಾವಣಿಯ ಮೇಲ್ಭಾಗದಲ್ಲಿ ಮುಂದಕ್ಕೆ ಚಾಚಿಕೊಂಡಿರುವ ‘ಮಂಕಿಟಾಪ್’ ಗಳ ಒಳ ಭಾಗದಲ್ಲೂ ಸಹ ಅತ್ಯುತ್ತಮವಾದ ಕಾಷ್ಟಶಿಲ್ಪಗಳು ಹಾಗೂ ಇತರ ಅಲಂಕಾರಯುತ ಕೆತ್ತನೆಗಳು ಕಾಣಸಿಗುತ್ತವೆ. ಮುಂಭಾಗದಲ್ಲಿ ಛಾವಣಿಯ ತೋರಣದಲ್ಲಿ ಎಂಟು ಸರ್ಪಗಳು ಹೆಣೆದುಕೊಂಡ ಆಕರ್ಷಕ ಮರದ ಕೆತ್ತನೆಯ ವಿನ್ಯಾಸವಿದೆ.
ಮಧ್ಯದಲ್ಲಿರುವ ಸುಬ್ರಹ್ಮಣ್ಯ ದೇವಾಲಯವು ಭಾಗಮಂಡಲದ ಎಲ್ಲಾ ದೇವಾಲಯಗಳಿಗಿಂತಲೂ ಸುಂದರವಾದ ವಾಸ್ತುವಿನ್ಯಾಸವನ್ನು ಹೊಂದಿದೆ. ಇದರಲ್ಲಿಯೂ ಸಹ ಗರ್ಭಗೃಹ ಹಾಗೂ ಅದರ ಮುಂಭಾಗದಲ್ಲಿ ಕಿರಿದಾದ ಅರ್ಧಮಂಟಪವು ಕಂಡುಬರುತ್ತವೆ. ಈ ದೇವಾಲಯವನ್ನು ಪೂರ್ಣವಾಗಿ ಕಲ್ಲಿನಿಂದಲೇ ಕಟ್ಟಿರುವುದು ಮಾತ್ರವಲ್ಲದೇ, ಹೊರಭಾಗದ ಗೋಡೆಗಳು ನುಣುಪಾಗಿವೆ. ಗರ್ಭಗೃಹದ ಮೇಲ್ಭಾಗದಲ್ಲಿ ಇಳಿಜಾರಾದ ಛಾವಣಿಯ ಒಳಭಾಗದಲ್ಲಿ ತಾಮ್ರದ ಹೊದಿಕೆಯಿರುವುದನ್ನು ಕಾಣಬಹುದಾಗಿದೆ. ಗರ್ಭ ಗೃಹದಲ್ಲಿ ಪ್ರಾಚೀನ ಚೌರಸವಾದ ಪಾಣಿಪೀಠದ ಮೇಲೆ ನಿಂತಿರುವ (ಸು.೨.೫ ಅಡಿ ಎತ್ತರ) ದ್ವಿಬಾಹು ಸುಬ್ರಹ್ಮಣ್ಯನ ಸುಂದರ ಶಿಲಾಮೂರ್ತಿಯಿದ್ದು, ಒಂದು ಕೈಯನ್ನು ಸೊಂಟದ ಮೇಲೂ ಹಾಗೂ ಇನ್ನೊಂದರಲ್ಲಿ ತ್ರಿಶೂಲವನ್ನು ಹಿಡಿದಿದ್ದು, ಇದು ಬಹುಶಃ ಚೋಳ ಪಲ್ಲವರ ಶೈಲಿಯನ್ನು ಹೋಲುತ್ತದೆ ಎನ್ನಬಹುದು. ಗರ್ಭಗೃಹದ ಇಳಿಜಾರಾದ ಛಾವಣಿಯ ಚಾಚು ಪೀಠಗಳ ಮೇಲೆ ಯೋಗಾನರಸಿಂಹ, ಬ್ರಹ್ಮ, ಈಶ್ವರ, ಅಷ್ಟದಿಕ್ಪಾಲರು ಹಾಗೂ ಇತರ ಸುಂದರ ಮೂರ್ತಿಗಳ ಕಾಷ್ಟ ಶಿಲ್ಪಗಳಿವೆ. ಅರ್ಧಮಂಟಪದ ಮುಂಭಾಗದಲ್ಲಿರುವ ಪ್ರತ್ಯೇಕ ಮಂಟಪಕ್ಕೆ ಮರದ ಇಳಿಜಾರಾದ ಛಾವಣಿ ಯಿದ್ದು, ಒಳಭಾಗದಲ್ಲಿ ಅತ್ಯುತ್ತಮವಾದ ಪೌರಾಣಿಕ ಕಥೆಗಳನ್ನು ಪ್ರತಿನಿಧಿಸುವ ತಾರಕ ಜನನ, ತಾರಕವಧೆ, ಅಷ್ಟದಿಕ್ಪಾಲಕರು, ಸಮುದ್ರ ಮಥನ, ದಶಾವತಾರ, ಗಣಗಳು, ಋಷಿಗಳು, ಸಂಗೀತವಾದಕರು, ವಿಷ್ಣುವಿನ ಲೀಲೆಗಳು, ಅಲಂಕಾರ ಚಿತ್ತಾರಗಳು ಇನ್ನೂ ಮುಂತಾದ ದೃಶ್ಯಗಳನ್ನು ಪ್ರತಿನಿಧಿಸುವ ಅತ್ಯುತ್ಕೃಷ್ಟ ಕಾಷ್ಟ ಕೆತ್ತನೆಗಳು ಹಲವಾರು ಬಾರಿ ನೋಡಿದರೂ ಮತ್ತೆ ನೋಡಲೇಬೇಕೆನಿಸುವ ಕಲಾ ಪ್ರದರ್ಶನದಂತಿವೆ. ಇವು ಕಿರು ಶಿಲ್ಪಗಳಾಗಿದ್ದು ಹಲವು ಸಾಲುಗಳಲ್ಲಿವೆ. ಸುಬ್ರಹ್ಮಣ್ಯ ದೇವಾಲಯದ ಹೊರಭಾಗದ ಗೋಡೆಗಳಲ್ಲಿ ದೇವಕೋಷ್ಟಗಳಿದ್ದು ಅವುಗಳಲ್ಲಿ ಸುಂದರ ಶಿಲಾಮೂರ್ತಿಗಳಿವೆ. ಅರ್ಧಮಂಟಪದ ಮೇಲ್ಭಾಗದಲ್ಲಿ ಮುಂದಕ್ಕೆ ಚಾಚಿಕೊಂಡಿರುವ ಛಾವಣಿಯ ಮೇಲ್ಭಾಗದಲ್ಲಿರುವ ದೇವಕೋಷ್ಟ ದಲ್ಲಿ ನಾಲ್ಕು ಮುಖಗಳ ಗಣಪತಿ ಹಾಗೂ ಪಕ್ಕದಲ್ಲಿ ಆತನ ಪತ್ನಿ ಸಿದ್ದಿಯ ಸುಂದರ ಶಿಲಾಮೂರ್ತಿ ಕಂಡುಬರುತ್ತವೆ. ಇದರ ಮುಂಭಾಗದ ತೋರಣವು ಚೈತ್ಯದಾಕಾರವನ್ನು ಹೋಲುತ್ತದೆ. ಇಲ್ಲಿನ ಹೊರಭಾಗದ ಗೋಡೆಗಳಲ್ಲಿ ವೀರರಾಜೇಂದ್ರನು ದುರಸ್ತಿ ಮಾಡಿಸಿದ್ದರ ನೆನಪಿಗೆ ‘ವಿ’ ಅಕ್ಷರವನ್ನು ಹಿತ್ತಾಳೆಯ ಹೆಂಚಿನ ಛಾವಣಿಯ ಮೇಲ್ಭಾಗದಲ್ಲಿ ಮುಂದಕ್ಕೆ ಚಾಚಿಕೊಂಡಿರುವ ‘ಮಂಕಿಟಾಪ್’ ಗಳ ಒಳ ಭಾಗದಲ್ಲೂ ಸಹ ಅತ್ಯುತ್ತಮವಾದ ಕಾಷ್ಟಶಿಲ್ಪಗಳು ಹಾಗೂ ಇತರ ಅಲಂಕಾರಯುತ ಕೆತ್ತನೆಗಳು ಕಾಣಸಿಗುತ್ತವೆ. ಮುಂಭಾಗದಲ್ಲಿ ಛಾವಣಿಯ ತೋರಣದಲ್ಲಿ ಎಂಟು ಸರ್ಪಗಳು ಹೆಣೆದುಕೊಂಡ ಆಕರ್ಷಕ ಮರದ ಕೆತ್ತನೆಯ ವಿನ್ಯಾಸವಿದೆ.
ಮಧ್ಯದಲ್ಲಿರುವ ಸುಬ್ರಹ್ಮಣ್ಯ ದೇವಾಲಯವು ಭಾಗಮಂಡಲದ ಎಲ್ಲಾ ದೇವಾಲಯಗಳಿಗಿಂತಲೂ ಸುಂದರವಾದ ವಾಸ್ತುವಿನ್ಯಾಸವನ್ನು ಹೊಂದಿದೆ. ಇದರಲ್ಲಿಯೂ ಸಹ ಗರ್ಭಗೃಹ ಹಾಗೂ ಅದರ ಮುಂಭಾಗದಲ್ಲಿ ಕಿರಿದಾದ ಅರ್ಧಮಂಟಪವು ಕಂಡುಬರುತ್ತವೆ. ಈ ದೇವಾಲಯವನ್ನು ಪೂರ್ಣವಾಗಿ ಕಲ್ಲಿನಿಂದಲೇ ಕಟ್ಟಿರುವುದು ಮಾತ್ರವಲ್ಲದೇ, ಹೊರಭಾಗದ ಗೋಡೆಗಳು ನುಣುಪಾಗಿವೆ. ಗರ್ಭಗೃಹದ ಮೇಲ್ಭಾಗದಲ್ಲಿ ಇಳಿಜಾರಾದ ಛಾವಣಿಯ ಒಳಭಾಗದಲ್ಲಿ ತಾಮ್ರದ ಹೊದಿಕೆಯಿರುವುದನ್ನು ಕಾಣಬಹುದಾಗಿದೆ. ಗರ್ಭ ಗೃಹದಲ್ಲಿ ಪ್ರಾಚೀನ ಚೌರಸವಾದ ಪಾಣಿಪೀಠದ ಮೇಲೆ ನಿಂತಿರುವ (ಸು.೨.೫ ಅಡಿ ಎತ್ತರ) ದ್ವಿಬಾಹು ಸುಬ್ರಹ್ಮಣ್ಯನ ಸುಂದರ ಶಿಲಾಮೂರ್ತಿಯಿದ್ದು, ಒಂದು ಕೈಯನ್ನು ಸೊಂಟದ ಮೇಲೂ ಹಾಗೂ ಇನ್ನೊಂದರಲ್ಲಿ ತ್ರಿಶೂಲವನ್ನು ಹಿಡಿದಿದ್ದು, ಇದು ಬಹುಶಃ ಚೋಳ ಪಲ್ಲವರ ಶೈಲಿಯನ್ನು ಹೋಲುತ್ತದೆ ಎನ್ನಬಹುದು. ಗರ್ಭಗೃಹದ ಇಳಿಜಾರಾದ ಛಾವಣಿಯ ಚಾಚು ಪೀಠಗಳ ಮೇಲೆ ಯೋಗಾನರಸಿಂಹ, ಬ್ರಹ್ಮ, ಈಶ್ವರ, ಅಷ್ಟದಿಕ್ಪಾಲರು ಹಾಗೂ ಇತರ ಸುಂದರ ಮೂರ್ತಿಗಳ ಕಾಷ್ಟ ಶಿಲ್ಪಗಳಿವೆ. ಅರ್ಧಮಂಟಪದ ಮುಂಭಾಗದಲ್ಲಿರುವ ಪ್ರತ್ಯೇಕ ಮಂಟಪಕ್ಕೆ ಮರದ ಇಳಿಜಾರಾದ ಛಾವಣಿ ಯಿದ್ದು, ಒಳಭಾಗದಲ್ಲಿ ಅತ್ಯುತ್ತಮವಾದ ಪೌರಾಣಿಕ ಕಥೆಗಳನ್ನು ಪ್ರತಿನಿಧಿಸುವ ತಾರಕ ಜನನ, ತಾರಕವಧೆ, ಅಷ್ಟದಿಕ್ಪಾಲಕರು, ಸಮುದ್ರ ಮಥನ, ದಶಾವತಾರ, ಗಣಗಳು, ಋಷಿಗಳು, ಸಂಗೀತವಾದಕರು, ವಿಷ್ಣುವಿನ ಲೀಲೆಗಳು, ಅಲಂಕಾರ ಚಿತ್ತಾರಗಳು ಇನ್ನೂ ಮುಂತಾದ ದೃಶ್ಯಗಳನ್ನು ಪ್ರತಿನಿಧಿಸುವ ಅತ್ಯುತ್ಕೃಷ್ಟ ಕಾಷ್ಟ ಕೆತ್ತನೆಗಳು ಹಲವಾರು ಬಾರಿ ನೋಡಿದರೂ ಮತ್ತೆ ನೋಡಲೇಬೇಕೆನಿಸುವ ಕಲಾ ಪ್ರದರ್ಶನದಂತಿವೆ. ಇವು ಕಿರು ಶಿಲ್ಪಗಳಾಗಿದ್ದು ಹಲವು ಸಾಲುಗಳಲ್ಲಿವೆ. ಸುಬ್ರಹ್ಮಣ್ಯ ದೇವಾಲಯದ ಹೊರಭಾಗದ ಗೋಡೆಗಳಲ್ಲಿ ದೇವಕೋಷ್ಟಗಳಿದ್ದು ಅವುಗಳಲ್ಲಿ ಸುಂದರ ಶಿಲಾಮೂರ್ತಿಗಳಿವೆ. ಅರ್ಧಮಂಟಪದ ಮೇಲ್ಭಾಗದಲ್ಲಿ ಮುಂದಕ್ಕೆ ಚಾಚಿಕೊಂಡಿರುವ ಛಾವಣಿಯ ಮೇಲ್ಭಾಗದಲ್ಲಿರುವ ದೇವಕೋಷ್ಟ ದಲ್ಲಿ ನಾಲ್ಕು ಮುಖಗಳ ಗಣಪತಿ ಹಾಗೂ ಪಕ್ಕದಲ್ಲಿ ಆತನ ಪತ್ನಿ ಸಿದ್ದಿಯ ಸುಂದರ ಶಿಲಾಮೂರ್ತಿ ಕಂಡುಬರುತ್ತವೆ. ಇದರ ಮುಂಭಾಗದ ತೋರಣವು ಚೈತ್ಯದಾಕಾರವನ್ನು ಹೋಲುತ್ತದೆ. ಇಲ್ಲಿನ ಹೊರಭಾಗದ ಗೋಡೆಗಳಲ್ಲಿ ವೀರರಾಜೇಂದ್ರನು ದುರಸ್ತಿ ಮಾಡಿಸಿದ್ದರ ನೆನಪಿಗೆ ‘ವಿ’ ಅಕ್ಷರವನ್ನು ಹಿತ್ತಾಳೆಯ ಭಗಂಡೇಶ್ವರ ದೇವಾಲಯದ ಪ್ರಾಕಾರದ ಪ್ರವೇಶದ ಮಧ್ಯದಲ್ಲಿರುವ ಮರದ ಬಾಗಿಲುವಾಡದ ಅಲಂಕಾರವನ್ನು ದೊಡ್ಡ ವೀರರಾಜೇಂದ್ರನು ಮಾಡಿಸಿದರೆಂದು ತಿಳಿದು ಬರುತ್ತದೆ. ಬಾಗಿಲುವಾಡದ ಲಲಾಟದಲ್ಲಿ ಅತ್ಯುತ್ತಮ ಕರಕುಶಲ ಜಾಣ್ಮೆಯನ್ನು ಪ್ರತಿನಿಧಿಸುವ ೬” ಮತ್ತು ೩೬” ಆಯದ ಕರಿ ಮರದಲ್ಲಿ ಶ್ರೀ ಸಂತಾನ ಗೋಪಾಲಕೃಷ್ಣ ಲೀಲೆಯನ್ನು ಚಿತ್ರಿಸÀಲಾಗಿದೆ. ಭಗಂಡೇಶ್ವರ ದೇವಾಲಯದ ಖಜಾನೆಯಲ್ಲಿರುವ ಬೆಳ್ಳಿಯ
ಪೀಠದ ಮೇಲೆ ಶಾಸನವಿದ್ದು ಕ್ರಿ.ಶ. ೧೮೩೯ರಲ್ಲಿ ಕೊಡಗಿನಲ್ಲಿದ್ದ ಬ್ರಿಟಿಷ್ ಸೂಪರಿಂಟೆAಡೆAಟ್ ಕ್ಯಾಪ್ಟನ್ ಲೀ ಹಾರ್ಡಿಯ ಕಾಲದಲ್ಲಿ ದಿವಾನ್ ಬೋಪು ಹಾಗೂ ವಿÆನಾಕ್ಷಯ್ಯ ಎಂಬ ಅಧಿಕಾರಿ ಗಳು ಬೆಳ್ಳಿ ಖಜಾನೆಯ
ಪೀಠ, ಬೆಳ್ಳಿ ಪ್ರಭಾವಳಿ, ಮೂರು ಸುವರ್ಣ ಛತ್ರಿಗಳು, ಎರಡು ಸೂರ್ಯಪಾನ ಮತ್ತು ಎರಡು ಪತ್ತಕ (ಪತಾಕೆ ?)ಗಳನ್ನು ಮಾಡಿಸಿ ದೇವರಿಗೆ ಸಮರ್ಪಿಸಿದರೆಂದು ತಿಳಿಸುತ್ತದೆ. ಈ ದೇವಾಲಯದ ಹೊರ ಪ್ರಾಕಾರ ದಲ್ಲಿ ಗಣಪತಿಯ ಚಿಕ್ಕ ಗುಡಿಯಿದೆ. ಕೇವಲ ಗರ್ಭಗೃಹವನ್ನು ಮಾತ್ರ ಹೊಂದಿರುವ ಚಿಕ್ಕದಾದರೂ ಆಕರ್ಷಕ ಕಟ್ಟಡದಲ್ಲಿ ಗಣಪತಿಯ ಶಿಲಾಮೂರ್ತಿ ಇದೆ. ಗೋಡೆಯಲ್ಲಿ ಎರಡು ಮಾಡುಗಳಿದ್ದು, ಕಿರಿದಾದ ಲಕ್ಷಿö್ಮÃ ಮತ್ತು ಕಾಳಿಯ ಶಿಲಾ ಪ್ರತಿಮೆಗಳಿವೆ. ಈ ಗುಡಿಯು ಪಶ್ಚಿಮಾಭಿಮುಖವಾಗಿದ್ದು, ಮುಖ್ಯ ಕಟ್ಟಡಕ್ಕೆ ಸರಿಯಾಗಿ ಎದುರಿಗೆ ನಿರ್ಮಿತವಾಗಿದೆ. ಈ ಆವರಣದಲ್ಲಿರುವ ವಸಂತ ಮಂಟಪದ ಎದುರಿಗೆ ಎರಡು ಕಲ್ಲಿನ ಆನೆಗಳಿದ್ದು, ಅವುಗಳ ಸೊಂಡಿಲುಗಳು ಭಗ್ನವಾಗಿದ್ದು ಟಿಪ್ಪುವಿನ ಆಕ್ರಮಣದ ಕಾಲದಲ್ಲಿ ಹೀಗಾಯಿತೆಂದು ವದಂತಿ. ಭಗಂಡೇಶ್ವರವೂ ಕೊಡಗಿನ ಅತ್ಯಂತ ಸುಂದರ ಮತ್ತು ಆಕರ್ಷಕ ದೇವಾಲಯ. ಇಲ್ಲಿನ ಕಾಷ್ಟ ಶಿಲ್ಪಗಳು ಕರ್ನಾಟಕದಲ್ಲೇ ಅಪರೂಪ ವಾಗಿದ್ದು ಬಹುಶಃ ದೊಡ್ಡ ವೀರರಾಜೇಂದ್ರನ ಕಾಲದಲ್ಲೇ ರಚಿತವಾಗಿರ ಬೇಕು. ಅವುಗಳಿಗೆ ಬಳಿದ ಬಣ್ಣವೂ ಕಲಾತ್ಮಕವಾಗಿದೆ. ಇಲ್ಲಿನ ವಸಂತ ಮಂಟಪದಲ್ಲಿ ಹುತ್ತರಿ ಹಬ್ಬದ ದಿನ ದೇವರ ಗದ್ದೆಯಿಂದ ಹೊಸ ಕದಿರು ತಂದು ಪೂಜಿಸುತ್ತಾರೆ. (ಮುಗಿಯಿತು)
(ಸಂಗ್ರಹ) ಬಿ. ಜಿ. ಅನಂತಶಯನ
ಮಡಿಕೇರಿ.