ಮಡಿಕೇರಿ, ಸೆ. ೪: ಮರಂದೋಡ ಗ್ರಾಮದ ಚೋಯಮಾಡಂಡ ಮೊಣ್ಣಪ್ಪ (ಹರೀಶ್) ಅವರ ಗದ್ದೆಗೆ ಆನೆಗಳ ಹಿಂಡು ಬಂದು ನಾಟಿಯನ್ನು ಮೆಟ್ಟಿ ನಷ್ಟವುಂಟುಮಾಡಿವೆ. ಅಲ್ಲದೆ, ಕಾಡುಹಂದಿಗಳ ಓಡಾಟ ಇದ್ದು, ಗದ್ದೆಯ ದಿಂಬುಗಳನ್ನು ಹೂಳಿ ನಷ್ಟವುಂಟುಮಾಡಿವೆ.

ಅರಣ್ಯಾಧಿಕಾರಿಗಳು ಸೂಕ್ತವಾದ ಪರಿಹಾರ ನೀಡುವಂತೆ ಮೊಣ್ಣಪ್ಪ ಆಗ್ರಹಿಸಿದ್ದಾರೆ. ಕಾಡಾನೆಗಳು ಮೂರು- ನಾಲ್ಕು ತಿಂಗಳುಗಳಿAದ ಮರಂದೋಡದ ತೋಟಗಳಲ್ಲಿ ಬೀಡುಬಿಟ್ಟಿದ್ದು, ಒಂದೆರಡು ದಿನಗಳು ಕೋಕೇರಿಯಲ್ಲಿ, ಮತ್ತೆರಡು ದಿನಗಳು ಚೇಲಾವರದಲ್ಲಿ, ಮತ್ತೆ ಪುನಃ ಬಂದು ಮರಂದೋಡದ ಕಾಡಿನಲ್ಲಿ ಸೇರಿಕೊಳ್ಳುತ್ತಿವೆ. ಇದರಿಂದ ಮರಂದೋಡ ಗ್ರಾಮದ ರೈತರೆಲ್ಲರೂ ಆತಂಕದಲ್ಲಿದ್ದಾರೆ.