ಮಡಿಕೇರಿ, ಸೆ. ೪: ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ಯಾರೂ ಹಿಂಜರಿಯ ಬೇಕಿಲ್ಲ. ಲಂಚಗುಳಿತನದಿAದ ಬೇಸತ್ತವರು ಧೈರ್ಯವಾಗಿ ಲೋಕಾಯುಕ್ತಕ್ಕೆ ದೂರು ನೀಡಬಹುದು. ನೊಂದವರು ನೀಡುವ ದೂರನ್ನು ಸ್ವೀಕರಿಸಿ ತನಿಖೆ ನಡೆಸಿ ಸೂಕ್ತ ನ್ಯಾಯ ಒದಗಿಸಲು ಲೋಕಾಯುಕ್ತ ಸದಾ ಬದ್ಧವಾಗಿರುತ್ತದೆ ಎಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣ ದಲ್ಲಿಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸರಕಾರಿ ಅಧಿಕಾರಿಗಳಿಂದಾಗಲಿ, ಇನ್ಯಾರಿಂದಲೇ ಆದರೂ ಕೆಲಸಕಾರ್ಯಗಳಿಗೆ ಲಂಚದ ಬೇಡಿಕೆ ಬಂದರೆ ಅದನ್ನು ಲೋಕಾಯುಕ್ತರ ಗಮನಕ್ಕೆ ತರಬಹುದು. ಇದಕ್ಕೆ ಸಂಬAಧಿಸಿದAತೆ ಸಂಬAಧಿಸಿದವರು ನೋಟೀಸ್ ನೀಡುವ ಮೂಲಕ ತನಿಖೆ ನಡೆಸಿ ಲೋಕಾಯುಕ್ತ ಮುಂದಿನ ಕ್ರಮಕೈಗೊಳ್ಳುತ್ತದೆ. ಯಾರ ವಿರುದ್ಧ ನೊಂದವರು ದೂರು ನೀಡುತ್ತಾರೋ ಅವರಿಂದ ದೂರುದಾರರಿಗೆ ಏನಾದರೂ ತೊಂದರೆಗಳಾಗುವ ಸಾಧ್ಯತೆಗಳಿದ್ದರೂ ದೂರುದಾರರ ರಕ್ಷಣೆಗೆ ಲೋಕಾಯುಕ್ತ ಸಿದ್ಧವಿರುತ್ತದೆ ಎಂದು ಪಾಟೀಲ್ ಅವರು ಹೇಳಿದರು.
ಪ್ರಾಮಾಣಿಕ ಕೆಲಸಕ್ಕೆ ಸೂಚನೆ
ವಿವಿಧ ಇಲಾಖೆಗಳ ಸುಮಾರು ೪೦ಕ್ಕೂ ಅಧಿಕ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ ಕೆಲಸ ಕಾರ್ಯಗಳ ಪ್ರಗತಿ ಪರಿಶೀಲನೆ ಮಾಡಿದ್ದೇನೆ. ಪ್ರಸ್ತುತ ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ವಿವಿಧ ಇಲಾಖೆ ಗಳಲ್ಲಿರುವ ಯೋಜನೆಗಳ ಪ್ರಯೋಜನ ಅರ್ಹ ಫಲಾನುಭವಿ ಗಳಿಗೆ ಸಿಗುವಂತಾಗ ಬೇಕು. ಈ ದಿಸೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಉಪಲೋಕಾ ಯುಕ್ತರು ಮಾಹಿತಿ ನೀಡಿದರು.
೩ ಸುಮೊಟೋ ಪ್ರಕರಣ ದಾಖಲು
ಅಧಿಕಾರಿಗಳ ಸಭೆಯಲ್ಲಿ ಕೊಡಗಿನ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದ ಅವರು, ಅರಣ್ಯ ಇಲಾಖೆ, ಸರ್ವೆ ಇಲಾಖೆ ಹಾಗೂ ಕೆರೆಗಳ ಸಂರಕ್ಷಣೆ ಈ ಮೂರು ವಿಭಾಗಗಳಲ್ಲಿ ಸೇರಿ ಒಟ್ಟು ೩ ಸುಮೊಟೋ ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಸಂಬAಧಿಸಿದವರಿಗೆ ನೋಟೀಸ್ ನೀಡಿ ಮುಂದಿನ ಕ್ರಮಕೈಗೊಳ್ಳ ಲಾಗುತ್ತದೆ ಎಂದರು.
೫೭ ಪ್ರಕರಣಗಳು ಬಾಕಿ
ಕೊಡಗು ಲೋಕಾಯುಕ್ತದಲ್ಲಿ ಸುಮಾರು ೫೭ ಪ್ರಕರಣಗಳು ವಿಲೇವಾರಿಗೆ ಬಾಕಿಯಿದ್ದು, ಇವುಗಳನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡುವುದರೊಂದಿಗೆ ಸಂಬAಧಿಸಿದವರಿಗೆ ನ್ಯಾಯ ಒದಗಿಸಿ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಟೀಲ್ ಆಶ್ವಾಸನೆಯಿತ್ತರು.
ಕೋವಿಡ್ ನಿಯಂತ್ರಣಕ್ಕೆ ಸಲಹೆ
ಕೊಡಗಿನಲ್ಲಿ ಕೊರೊನಾ ಪ್ರಮಾಣ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಸಂಬAಧ ತಾನೂ ಕೂಡ ಕೆಲ ಸಲಹೆಗಳನ್ನು ನೀಡಿದ್ದೇನೆ ಎಂದು ತಿಳಿಸಿದ ಉಪಲೋಕಾಯುಕ್ತರು, ಗ್ರಾಮೀಣ ಭಾಗದಲ್ಲಿ ಟಾಸ್ಕ್ ಫೋರ್ಸ್ಗಳು ಮಕ್ಕಳಿಗೆ ಸೋಂಕು ಹರಡದ ರೀತಿಯಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.