*ವೀರಾಜಪೇಟೆ, ಸೆ. ೪: ವೀರಾಜಪೇಟೆ ಪಟ್ಟಣ ಪಂಚಾಯಿತಿ ಮೀನುಪೇಟೆ ವಾರ್ಡ್ಗೆ ನಡೆದ ಉಪಚುನಾವಣೆ ಬಿರುಸಿನಿಂದ ನಡೆಯಿತು. ಶುಕ್ರವಾರ ಬೆಳಿಗ್ಗೆ ಏಳು ಘಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಯಿತು. ಬಿಜೆಪಿಯಿಂದ ವಿನಾಂಕ್ ಕುಟ್ಟಪ್ಪ, ಕಾಂಗ್ರೆಸ್‌ನಿAದ ಮಾದಂಡ ತಿಮ್ಮಯ್ಯ ಸ್ಫರ್ಧೆ ಮಾಡಿದ್ದರು.

ಮತದಾನವೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಮತದಾರರು ಬೆಳ್ಳಿಗ್ಗೆನಿಂದಲೇ ಮತದಾನದಲ್ಲಿ ಪಾಲ್ಗೊಂಡರು. ವೃದ್ಧರು ಕೂಡಾ ಮನೆಯವರ ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು.

ಪುರುಷ ಮತದಾರರು ೨೭೫, ಮಹಿಳಾ ಮತದಾರರು ೨೬೯ ಸೇರಿದಂತೆ ಒಟ್ಟು ೫೪೪ ಮತದಾರರಿದ್ದರು. ಮಧ್ಯಾಹ್ನ ಮೂರು ಘಂಟೆಯ ವೇಳೆಗೆ ೩೭೭ ಮತಗಳು ಚಲಾವಣೆಯಾಗುವ ಮೂಲಕ ಶೇಕಡ ೭೦ ರಷ್ಟು ಮತದಾನ ವಾಯಿತು. ಅಂತಿಮವಾಗಿ ೨೦೮ ಪುರುಷರು ಮತ ಚಲಾಯಿಸಿದ್ದರೆ ೨೦೮ ಮಹಿಳೆಯರು ಮತ ಚಲಾಯಿಸಿ ಒಟ್ಟು ೪೧೬ ಮಂದಿ ಮತ ಚಲಾಯಿಸುವ ಮೂಲಕ ಶೇಕಡ ೭೬.೪೭ ರಷ್ಟು ಮತದಾನ ನಡೆಯಿತು. ಪೊಲೀಸ್ ಇಲಾಖೆಯ ಬಿಗಿ ಬಂದೋಬಸ್ತ್ ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿತ್ತು.

ತಾ. ೬ರಂದು (ನಾಳೆ) ಮತ ಎಣಿಕೆ ನಡೆಯಲಿದೆ.