ಗೋಣಿಕೊಪ್ಪ ವರದಿ, ಸೆ. ೪: ನೊಕ್ಯ ಗ್ರಾಮದ ಶ್ರೀಕೃಷ್ಣ-ಬಲರಾಮ ದೇವಸ್ಥಾನದಲ್ಲಿ ಮಂಗಳವಾರ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು.
ಗೋವಿಗೆ ಪ್ರಸಾದ ನೀಡುವ ಮೂಲಕ ಭಕ್ತರು ಆಚರಣೆ ಮಾಡಿದರು. ಸುಮಾರು ೫ ಗೋವುಗಳಿಗೆ ಭಕ್ತರು ವಿಶೇಷವಾಗಿ ತಯಾರಿಸಿದ ಪ್ರಸಾದ ತಿನ್ನಿಸಿ ಭಕ್ತಿ ಮೆರೆದರು. ದೇವರ ಪ್ರಸಾದವಾಗಿ ವಾಲೆ ಕಡುಬು, ಅಂಬಟೆ ಸಾರು, ಅವಲಕ್ಕಿ, ಪಾಯಸ, ಜೀಗುಜಿ, ಚಕ್ಕುಲಿ, ಮೊಸರು ಅವಲಕ್ಕಿ ಅರ್ಪಿಸ ಲಾಯಿತು. ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಆಚರಿಸುವಂತೆ ಕೃಷ್ಣ ಜಯಂತಿ ಯಂದು ಇಲ್ಲಿ ಹಬ್ಬ ಆಚರಿಸಲಾಗುತ್ತದೆ. ರೋಹಿಣಿ ನಕ್ಷತ್ರದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದಾಗಿ ಬೆಳಿಗ್ಗೆ ರೋಹಿಣಿ ನಕ್ಷತ್ರದಲ್ಲಿ ಆಚರಿಸಲಾಗಿದೆ ಎಂದು ಹಿರಿಯ ನಿವಾಸಿ ಚೆಪ್ಪುಡೀರ ಕಾರ್ಯಪ್ಪ ಮಾಹಿತಿ ನೀಡಿದರು.