ಪಾಲಿಬೆಟ್ಟ, ಸೆ. ೫: ಭಾರತದ ಅನುಭವಿ ಸ್ಕಾ÷್ವಷ್ ಆಟಗಾರ್ತಿ ಜೋತ್ಸಾö್ನ ಚಿನ್ನಪ್ಪ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಧನಸಹಾಯ ಮಾಡುವ ಮೂಲಕ ನೆರವು ನೀಡಿದ್ದಾರೆ.
ಕೋವಿಡ್ ಪರಿಸ್ಥಿತಿಯಲ್ಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸುತ್ತಿರುವ ಪಾಲಿಬೆಟ್ಟ ಹಾಗೂ ಚೆನ್ನಯ್ಯನಕೊಟೆ ವ್ಯಾಪ್ತಿಯ ಒಟ್ಟು ೧೭ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಚೆನ್ನಯ್ಯನಕೋಟೆ ಉಪ ಆರೋಗ್ಯ ಕೇಂದ್ರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜೋತ್ಸಾö್ನ ಚಿನ್ನಪ್ಪ ಅವರ ತಂದೆ ಅಂಜನ್ ಚಿನ್ನಪ್ಪ ಒಟ್ಟು ಇಪ್ಪತ್ತು ಸಾವಿರ ನಗದು ನೀಡಿ ವಾರಿಯರ್ಸ್ಗಳನ್ನು ಗೌರವಿಸಿ ಮಾತನಾಡಿ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಪರಿಗಣಿಸಿ ಜೋತ್ಸಾö್ನ ಚಿನ್ನಪ್ಪ ನೆರವು ನೀಡಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ವಾರಿಯರ್ಸ್ ಗಳ ಪಾತ್ರ ಬಹಳ ಮುಖ್ಯವಾದದ್ದು, ಪ್ರತಿಯೊಬ್ಬರು ಸೇವಾ ಮನೋಭಾವ ದಿಂದ ವಾರಿಯರ್ಸ್ಗಳಿಗೆ ಸಹಕಾರ ನೀಡಬೇಕೆಂದು ಹೇಳಿದರು.
ಪಾಲಿಬೆಟ್ಟ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಜಗದೀಶ್ ಮಾತನಾಡಿ ಜೋತ್ಸಾö್ನ ಚಿನ್ನಪ್ಪ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು. ಅಂಜನ್ ಚಿನ್ನಪ್ಪ ಅವರು ಆಸ್ಪತ್ರೆಗೆ ಬೇಕಾದ ಸಲಕರಣೆಗಳಿಗೂ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಚೆನ್ನಯ್ಯನಕೋಟೆ ಉಪ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿವಪ್ಪ ಎಸ್. ಗೋಟ್ಯಾಳ, ಆಶಾ ಕಾರ್ಯಕರ್ತೆ ಇಂದಿರಾ ಸೇರಿದಂತೆ ಮತ್ತಿತರರು ಹಾಜರಿದ್ದರು.