ಕಣಿವೆ, ಸೆ. ೫: ಇಲ್ಲಿಗೆ ಸಮೀಪದ ಶಿರಂಗಾಲದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಪಿ. ರಾಜು ಅಧ್ಯಕ್ಷತೆಯಲ್ಲಿ ನಡೆಯಿತು.

ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತಕುಮಾರ್ ಮಾತನಾಡಿ, ರೈತರು ಹಾಲಿನ ಗುಣಮಟ್ಟವನ್ನು ಕಾಯ್ದುಕೊಂಡು ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಸಬೇಕು. ಹೈನುಗಾರಿಕ ಕೃಷಿಕರು ಒಕ್ಕೂಟದಿಂದ ದೊರಕುವ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮತ್ತಷ್ಟು ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಕರೆನೀಡಿದರು. ಕೊಡಗು ಜಿಲ್ಲೆಯಿಂದ ದಿನಂಪ್ರತಿ ೫೦ ಸಾವಿರ ಲೀಟರ್ ಸಂಗ್ರಹವಾಗುತ್ತಿದ್ದು ಅಷ್ಟೇ ಪ್ರಮಾಣದ ಹಾಲು ಕೊಡಗು ಜಿಲ್ಲೆಯಲ್ಲಿ ಖರ್ಚಾಗುತ್ತಿದೆ ಎಂದರು.

ಶಿರAಗಾಲ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್. ಲೋಕೇಶ್, ಕೂಡಿಗೆ ಹಾಲಿನ ಡೇರಿಯ ವಿಸ್ತರಣಾಧಿಕಾರಿ ವೀಣಾ, ಹಾಲು ಉತ್ಪಾದಕ ಸಂಘದ ನಿರ್ದೇಶಕರು ಹಾಗೂ ಕಾರ್ಯದರ್ಶಿ ಇದ್ದರು.