ಗೋಣಿಕೊಪ್ಪ ವರದಿ, ಸೆ. ೫: ಈಶ ಫೌಂಡೇಷನ್ ವತಿಯಿಂದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕಾಡು ಮರಗಳ ಕೃಷಿ ಮಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಟಿಂಬರ್ ಮರ ನೆಡುವುದರಿಂದ ಆದಾಯ ಹೆಚ್ಚಳ, ಮಣ್ಣಿನ ಫಲವತ್ತತೆ, ಇಳುವರಿ ಹೆಚ್ಚಿಸುವ ಬಗ್ಗೆ ಸಲಹೆ ನೀಡಲಾಯಿತು.
ಮರದಿಂದ ಸಂಪತ್ತು ಹೆಚ್ಚಿಸಿಕೊಳ್ಳುವುದು, ಆರ್ಥಿಕ ಸ್ವಾಲಂಬನೆ, ಆದಾಯ ಖಾತ್ರಿ, ಕಾರ್ಮಿಕರ ಅಗತ್ಯವಿಲ್ಲದೆ ಕೃಷಿ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು. ಜಮೀನು ಹೊಂದಿರುವ ರೈತರಿಗೆ ಗಿಡ ಪೂರೈಸಲಾಗುವುದು ಎಂದು ಈಶ ಫೌಂಡೇಷನ್ ಸ್ವಯಂ ಸೇವಕರಾದ ಸಂದೇಶ್, ಪ್ರಶಾಂತ್, ಹಿಮಾಂಶು ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್, ಪಿಡಿಒ ಕುಟ್ಟಂಜೆಟ್ಟೀರ ಎಂ. ತಿಮ್ಮಯ್ಯ ಕರಪತ್ರ ಬಿಡುಗಡೆ ಗೊಳಿಸಿದರು. ಸದಸ್ಯರು ಇದ್ದರು.