ಸೋಮವಾರಪೇಟೆ, ಸೆ. ೫: ಕುಗ್ರಾಮಗಳ ಸಮಸ್ಯೆಗಳನ್ನು ಅರಿತು, ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೊಡಗು ರಕ್ಷಣಾ ವೇದಿಕೆಯಿಂದ ಕೈಗೊಳ್ಳಲಾಗಿರುವ ಗ್ರಾಮ ವಾಸ್ತವ್ಯ ಅಭಿಯಾನ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಕಲ್ಲಳ್ಳಿ-ಕಲ್ಲಾರೆ ಗ್ರಾಮದಲ್ಲಿ ನಡೆಯಿತು.

ಕಲ್ಲಾರೆ ಗ್ರಾಮದಲ್ಲಿ ೩೫೦ಕ್ಕೂ ಅಧಿಕ ಮನೆಗಳಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಗ್ರಾಮಕ್ಕೆ ಸಮರ್ಪಕವಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕವಿಲ್ಲದೇ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈವರೆಗೆ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರವನ್ನೂ ವಿತರಿಸಿಲ್ಲ. ಇವುಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ವೇದಿಕೆಯ ಪದಾಧಿಕಾರಿಗಳು ತೀರ್ಮಾನಿಸಿದರು.

ದಶಕಗಳಿಂದ ಇಲ್ಲಿಯ ಜನರು ಮನೆ ಪಟ್ಟೆಗಾಗಿ ಇಲಾಖೆಗಳಿಗೆ ಅಲೆದು ಸುಸ್ತಾಗಿದ್ದಾರೆ. ಜನಪ್ರತಿನಿಧಿ ಗಳಿಂದಲೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕಂದಾಯ ದಾಖಲೆಗಳಿಲ್ಲದೆ ಯಾವುದೇ ಸೌಲಭ್ಯಗಳೂ ಸಿಗುತ್ತಿಲ್ಲ ಎಂದು ಗ್ರಾಮಸ್ಥರು, ವೇದಿಕೆಯ ಪದಾಧಿಕಾರಿಗಳಲ್ಲಿ ಅಳಲು ತೋಡಿಕೊಂಡರು.

ಇದರೊAದಿಗೆ ಗ್ರಾಮದಲ್ಲಿರುವ ಕಲ್ಲುಕೋರೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ೧೫೦ ಅಡಿ ಆಳದ ಪ್ರಪಾತಕ್ಕೆ ಬೇಲಿಯ ವ್ಯವಸ್ಥೆ ಇಲ್ಲವಾಗಿದೆ. ಇದರಿಂದಾಗಿ ಮಾನವ ಜೀವಹಾನಿ, ಜಾನುವಾರು ಹಾನಿಗಳು ಸಂಭವಿಸುತ್ತಲೇ ಇವೆ. ಮೃತ್ಯುಕೂಪ ವಾಗಿರುವ ಕಲ್ಲುಕೋರೆಯಲ್ಲಿ ನಿರ್ವಹಣೆಯ ಕೊರತೆಯಿಂದ ಕೊಳಚೆ ನೀರು ಸಂಗ್ರಹವಾಗಿದ್ದು, ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣವಾಗಿದೆ ಎಂದು ಸ್ಥಳೀಯರು ಪರಿಸ್ಥಿತಿಯನ್ನು ವಿವರಿಸಿದರು.

ಊರಿನಲ್ಲಿರುವ ನ್ಯಾಯಬೆಲೆ ಅಂಗಡಿಯಿAದಲೂ ಸಮರ್ಪಕ ಸೇವೆ ಲಭಿಸುತ್ತಿಲ್ಲ. ಸಂಬAಧಿಸಿದ ಗ್ರಾಮ ಪಂಚಾಯಿತಿಯಿAದಲೂ ಸ್ಪಂದನೆ ಸಿಗುತ್ತಿಲ್ಲ. ಪಂಚಾಯಿತಿಯೇ ೨೩ ಲಕ್ಷದಷ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಒಟ್ಟಾರೆ ಕಲ್ಲಾರೆ ವ್ಯಾಪ್ತಿಯ ಸಮಸ್ಯೆಗಳಿಗೆ ಮುಕ್ತಿ ನೀಡಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ಅಭಿಪ್ರಾಯಿಸಿದರು.

ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಅರಿತು ವೇದಿಕೆಯ ಮುಖಾಂತರ ಸಂಬAಧಿಸಿದ ಇಲಾಖೆಯ ಗಮನ ಸೆಳೆಯುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. ಮನವಿಗೆ ಸ್ಪಂದನೆ ದೊರಕದಿದ್ದಲ್ಲಿ ಸ್ಥಳೀಯ ಗ್ರಾಮಸ್ಥ ರೊಂದಿಗೆ ವೇದಿಕೆಯ ನೇತೃತ್ವಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪವನ್ ಎಚ್ಚರಿಸಿದರು.

ಈ ಸಂದರ್ಭ ವೇದಿಕೆಯ ತಾಲೂಕು ಉಪಾಧ್ಯಕ್ಷ ಶಾನ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಶೋಬಿತ್ ಗೌಡ, ಉಪಾಧ್ಯಕ್ಷ ಲತೇಶ್ ಶೆಟ್ಟಿ, ಕಾರ್ಯದರ್ಶಿ ವಸಂತ್ ಕೊಡ್ಲಿಪೇಟೆ, ಖಚಾಂಚಿ ಮೊಹಮ್ಮದ್ ತುಫೇಲ್, ಸಹ ಸಂಚಾಲಕ ಪ್ರಸನ್ನ, ಸಾಮಾಜಿಕ ಜಾಲತಾಣ ಸಂಚಾಲಕ ಸಿದ್ದೇಶ್, ನಿರ್ದೇಶಕರುಗಳಾದ ಅವಿನಾಶ್ ಕೆರಗನಹಳ್ಳಿ, ಕಾಂತ, ಬಾಪುಟ್ಟಿ, ಗಿರೀಶ್, ಶಿವಕುಮಾರ, ಸಿದ್ದಿಕ್, ಭಾಗಮಂಡಲ ಹೋಬಳಿ ಅಧ್ಯಕ್ಷ ವಿನೋದ್ ಚೆದುಕಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವೇದಿಕೆಯ ಕೊಡ್ಲಿಪೇಟೆ ಹೋಬಳಿ ಗೌರವ ಸಲಹೆಗಾರರಾದ ರುದ್ರಮುನಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ, ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದ ಆವರಣದಲ್ಲಿ ಸಭೆ ನಡೆಸಲಾಯಿತು. ಮಠದಲ್ಲಿಯೇ ವಾಸ್ತವ್ಯ ಹೂಡಿದ ಕಾರ್ಯಕರ್ತರು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ಮುಂದಿನ ಹೋರಾಟದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಿದರು.