ಮಡಿಕೇರಿ, ಸೆ. ೫: ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್‌ಗಳ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿಯನ್ನು ತಯಾರಿಸುವ ಕುರಿತು ಪರಿಸರ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಾಗವಹಿಸಲು ಮನವಿ ಮಾಡಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಮನವಿ ಮಾಡಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದಲ್ಲಿ ೧೦ ಲಕ್ಷ ದಷ್ಟು ಗಣೇಶ ಮೂರ್ತಿಗಳನ್ನು ನಾಗರಿಕರಿಂದ ತಯಾರಿಸುವ ಮೂಲಕ ಗಿನ್ನಿಸ್ ದಾಖಲೆಯ ಗುರಿ ಹೊಂದಲಾಗಿದ್ದು, ಜಿಲ್ಲೆಯ ಜನತೆ ಈ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಅರಿಶಿಣದಿಂದ ಗಣೇಶ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ ಅದನ್ನು ಪೂಜಿಸಿದ ನಂತರ ಮನೆಯಲ್ಲೇ ಬಕೇಟ್‌ನಲ್ಲಿ ವಿಸರ್ಜಿಸುವ ಕುರಿತು ಶಿಕ್ಷಕರು, ಉಪನ್ಯಾಸಕರು ಜನಜಾಗೃತಿ ಮೂಡಿಸಬೇಕು ಎಂದು ಜಿ.ಆರ್. ಗಣೇಶನ್ ಕೋರಿದ್ದಾರೆ.
ಶಾಲೆಗಳಲ್ಲಿ ಶಿಕ್ಷಕರು ಇಕೋ ಕ್ಲಬ್, ಎನ್.ಎಸ್.ಎಸ್. ಘಟಕ, ಶಾಲಾಭಿವೃದ್ಧಿ ಸಮಿತಿಗಳ ವತಿಯಿಂದ ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿಗಳನ್ನು ತಯಾರಿಸುವ ಕುರಿತಾಗಿ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಹಾಗೂ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಡಿಪಿಐ ಎ. ಶ್ರೀಧರನ್ ತಿಳಿಸಿದ್ದಾರೆ.
ಅಪ್‌ಲೋಡ್ ಮಾಡಲು ಮನವಿ: ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನಾಗರಿಕರು ತಮ್ಮ ಮನೆಯಲ್ಲಿ ತಯಾರಿಸಿದ ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿಯೊಂದಿಗೆ ತಮ್ಮ ಸೆಲ್ಫಿ ಫೋಟೋ ತೆಗೆದು ವೆಬ್‌ಸೈಟ್ hಣಣಠಿ://ತಿತಿತಿ.ಣuಡಿmeಡಿiಛಿgಚಿಟಿeshಚಿ.ಛಿom ಲಿಂಕ್ ಬಳಸಿ ತಾ. ೧೦ ರೊಳಗೆ ಅಪ್‌ಲೋಡ್ ಮಾಡಬೇಕು ಎಂದು ರಾಷ್ಟಿçÃಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಅಭಿಯಾನದ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಮನವಿ ಮಾಡಿದ್ದಾರೆ.
ಅರಿಶಿಣ ಗಣೇಶ ಮೂರ್ತಿ ತಯಾರಿಕೆ ಕುರಿತು ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‌ಸೈಟ್ hಣಣಠಿs://ಞsಠಿಛಿb.ಞಚಿಡಿಟಿಚಿಣಚಿಞಚಿ.gov.iಟಿ/ಟಿoಜe/೬೬೮ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಅಭಿಯಾನದ ಸಂಚಾಲಕರಾದ ಟಿ.ಜಿ.ಪ್ರೇಮಕುಮಾರ್ ಅವರನ್ನು (ಮೊಬೈಲ್ ನಂಬರ್: ೯೪೪೮೫ ೮೮೩೫೨) ಹಾಗೂ ತಾಲೂಕು ಶಿಕ್ಷಣ ಸಂಯೋಜಕರು, ಬಿ.ಆರ್.ಪಿ., ಕ್ಲಸ್ಟರ್ ಸಿ.ಆರ್.ಪಿ.ಗಳನ್ನು ಸಂಪರ್ಕಿಸಬಹುದು.
ಮಕ್ಕಳಿAದ ಮೂರ್ತಿ ತಯಾರು: ಜಿಲ್ಲೆಯ ವಿವಿಧ ಶಾಲೆಗಳ ಇಕೋ ಕ್ಲಬ್ ವತಿಯಿಂದ ಮಕ್ಕಳು ಮನೆಯಲ್ಲೇ ತಯಾರಿಸಿರುವ ಅರಿಶಿಣ ಗಣೇಶಮೂರ್ತಿಗಳ ಚಿತ್ರಗಳು ಜನರ ಗಮನ ಸೆಳೆದಿವೆ. ಮಕ್ಕಳು ಈಗಾಗಲೇ ತಾವು ತಯಾರಿಸಿರುವ ಅರಿಶಿಣ ಗಣೇಶಮೂರ್ತಿಯ ಚಿತ್ರಗಳನ್ನು ಶಾಲೆಯ ಶಿಕ್ಷಕರಿಗೆ ಕಳುಹಿಸುತ್ತಿದ್ದಾರೆ.