ಗೋಣಿಕೊಪ್ಪ ವರದಿ, ಸೆ. ೫: ನಿಟ್ಟೂರು ಗ್ರಾಮದ ತಟ್ಟೆಕೆರೆ ಹಾಡಿಯಲ್ಲಿ ಬೆಂಗಳೂರು ಬೆಳಕು ಫೌಂಡೇಶನ್ ವತಿಯಿಂದ ಮನೆಗೊಂದು ದೀಪ ಯೋಜನೆಗೆ ಚಾಲನೆ ನೀಡಲಾಯಿತು.

ಗಿರಿಜನ ಕುಟುಂಬಕ್ಕೆ ೨ ಬಲ್ಬ್ಬ್, ೧ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಹೊಂದಿರುವ ಸೋಲಾರ್ ದೀಪ ವಿತರಿಸಲಾಯಿತು. ತಟ್ಟಕೆರೆ ಹಾಡಿಯ ೪೩, ಕೊಲ್ಲಿಹಾಡಿಯ ೧೧ ಮನೆಗೆ ಸೋಲಾರ್ ಅಳವಡಿಸಲಾಯಿತು,

ಬೆಳಕು ಫೌಂಡೇಶನ್ ಸಂಸ್ಥಾಪಕಿ ಪ್ರತಿಮಾ ಮಾತನಾಡಿ, ವನವಾಸಿ ಕಲ್ಯಾಣ ಸಂಸ್ಥೆ ಮೂಲಕ ಗುರುತಿಸಿದ ಸುಮಾರು ೫೦೦ ಗಿರಿಜನ ಕುಟುಂಬಕ್ಕೆ ಸೋಲಾರ್ ದೀಪ ವಿತರಿಸುವ ಗುರಿ ಹೊಂದಲಾಗಿದ್ದು, ಸುಮಾರು ೭ ಸಾವಿರ ಮೌಲ್ಯದ ದೀಪದಿಂದ ಗಿರಿಜನರಿಗೆ ಪ್ರಯೋಜನವಾಗಲಿದೆ ಎಂದರು.

ನಿಟ್ಟೂರು ಗ್ರಾ.ಪಂ. ಅಧÀ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ ನಗರದ ಉದ್ಯೋಗಿಗಳು ಗಿರಿಜನರಿಗೆ ಸ್ಪಂದಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಬೆಳಕು ಫೌಂಡೇಶನ್ ನಿರ್ದೇಶಕ ನವೀನ್‌ಕುಮಾರ್, ವನವಾಸಿ ಕಲ್ಯಾಣ ಸಂಸ್ಥೆ ಕಾರ್ಯಕರ್ತ ಪಡಿಞರಂಡ ಪ್ರಭುಕುಮಾರ್, ನಿಟ್ಟೂರು ಗ್ರಾ.ಪಂ. ಸದಸ್ಯ ಕಾಟಿಮಾಡ ಶರೀನ್ ಮುತ್ತಣ್ಣ, ಸ್ಥಳೀಯ ಜೇನುಕುರುಬರ ಸಾಸು, ಕಾಟಿಮಾಡ ಕುಟ್ಟಪ್ಪ, ತಿರುನೆಲ್ಲಿಮಾಡ ಪೂಣಚ್ಚ ಇದ್ದರು.