ಮಡಿಕೇರಿ, ಸೆ. ೫: ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘ ವತಿಯಿಂದ ನಗರದ ಬಾಲಭವನದಲ್ಲಿ ಸಂಘದ ಸದಸ್ಯರ ಸಭೆ ನಡೆಯಿತು.
ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹಾಗೂ ಕೇಂದ್ರ ಸಂಘದ ಉಪಾಧ್ಯಕ್ಷ ಕನಕರಾಜು ಮಾತನಾಡಿ, ಕೊಡಗಿನಲ್ಲಿ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ೩೯ ಮಂದಿ ಸದಸ್ಯರಿದ್ದು, ಸಂಘದ ಸಭೆಗಳಿಗೆ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡಬೇಕು. ಚಾಲಕರು ಕಡ್ಡಾಯವಾಗಿ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶೀನಿವಾಸ್ ಮಾತನಾಡಿ, ಚಾಲಕರಿಗೆ ಕೇಂದ್ರಕ್ಕೆ ಸರಿಸಮನಾದ ವೇತನ ದೊರಕಿಸುವಲ್ಲಿ ಸಂಘ ಶ್ರಮಿಸುತ್ತಿದೆ. ಸಂಘಟನೆಗೆ ಆರ್ಥಿಕ ಬಲ ತುಂಬಿದರೆ ಇನ್ನಷ್ಟು ಮುಂದುವರಿಯಲು ಸಾಧ್ಯ ಎಂದರು.
ಇದೇ ವೇಳೆ ಕೊಡಗಿನಲ್ಲಿ ವಿವಿಧ ಇಲಾಖೆಗಳಲ್ಲಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣೇಶ್, ಚಂದ್ರನ್, ಪೊನ್ನಪ್ಪ ಹಾಗೂ ಸುರೇಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಜಿಲ್ಲಾಧ್ಯಕ್ಷ ಬಾಬು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕೊಡಗಿನಲ್ಲಿ ವಿವಿಧ ಇಲಾಖೆಗಳಲ್ಲಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣೇಶ್, ಚಂದ್ರನ್, ಪೊನ್ನಪ್ಪ ಹಾಗೂ ಸುರೇಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಜಿಲ್ಲಾಧ್ಯಕ್ಷ ಬಾಬು ಸಭೆಯ ಅಧ್ಯಕ್ಷತೆ ವಹಿಸಿದ್ದರು.