ಗುಡ್ಡೆಹೊಸೂರು, ಸೆ. ೬: ಇಲ್ಲಿನ ರಾಷ್ಟಿçÃಯ ಹೆದ್ದಾರಿ ಬಳಿ ಗುಡ್ಡೆಹೊಸೂರು ಶಾಲಾ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಎರಡು ಕಂಬಗಳ ನಡುವೆ ಚರಂಡಿಯ ನಡುವೆ ಇರುವ ಕಲ್ಲಿಗೆ ತಾಗಿ ನಿಂತಿದೆ. ಅಲ್ಲಿಯೇ ಇದ್ದ ನಾಮಫಲಕದ ಸಿಮೆಂಟ್ ಕಂಬಕ್ಕೂ ಕೇವಲ ೧ ಅಡಿಯಷ್ಟು ಮಾತ್ರ ಅಂತರವಿತ್ತು.
ಕಾರಿನಲ್ಲಿದ್ದವರು ಜೀವ ಉಳಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಕಾರು ನಂಜರಾಯಪಟ್ಟಣದ ಉದ್ಯಮಿಯವರದ್ದಾಗಿದ್ದು, ಅವರು ತಮ್ಮ ಕುಟುಂಬ ಸಮೇತರಾಗಿ ಮಡಿಕೇರಿಯಿಂದ ನಂಜರಾಯಪಟ್ಟಣಕ್ಕೆ ಹಿಂತಿರುಗುತ್ತಿದ್ದರು. ಸಣ್ಣದಾಗಿ ಮಳೆ ಇದ್ದ ಕಾರಣ ಕಾರು ವೇಗವಾಗಿ ಬಂದು ಚರಂಡಿಗೆ ಇಳಿದಿದೆ. ಕಾರಿಗೂ, ಕಾರಿನಲ್ಲಿದ್ದವರಿಗೂ ಯಾವುದೇ ರೀತಿ ತೊಂದರೆಯಾಗಿಲ್ಲ. -ಗಣೇಶ್ ಕುಡೆಕ್ಕಲ್