ಮಡಿಕೇರಿ ಸೆ. ೬: ಹಿರಿಯ ಸಾಹಿತಿ ನಾಗೇಶ್ ಕಾಲೂರು ಬರೆದಿರುವ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ೨೦೨೦ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ, ಕೊಡವ ಮಕ್ಕಡ ಕೂಟ ಪ್ರಕಟಿಸಿದ ಕಾದಂಬರಿ ಆಧಾರಿತ ಕೊಡವ ಚಲನಚಿತ್ರ ‘ನಾಡ ಪೆದ ಆಶಾ’ ಮೂರ್ನಾಡು ಕೊಡವ ಸಮಾಜದಲ್ಲಿ ಬಿಡುಗಡೆಗೊಂಡಿತು.

ಸಭಾ ಕಾರ್ಯಕ್ರಮವನ್ನು ಬರಹಗಾರ ಹಾಗೂ ಸಾಹಿತಿ ನಾಗೇಶ್ ಕಾಲೂರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು; ಬರಹಗಾರರು ಒಂದು ಭಾಷೆಯನ್ನು ಬೆಳೆಸುತ್ತಾರೆ. ಭಾಷೆಯ ಮೂಲಕ ಬೆಳೆದ ಸಂಸ್ಕೃತಿಯಿAದ ಇಡೀ ಜನಾಂಗ ಉಳಿಯಲು ಸಾಧ್ಯ. ಬರಹದ ಮೂಲಕ ಬಂದ ಭಾಷೆಯನ್ನು ಸಂಕೇತದ ಮೂಲಕ ತೋರಿಸುವ ಶಕ್ತಿ ಒಂದು ಚಿತ್ರಕ್ಕಿದೆ ಎಂದರು.

ಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಟ್ರತಂಡ ಸುಬ್ಬಯ್ಯ ಈ ಸಿನಿಮಾ ಕೊಡಗಿನಲ್ಲಿ ಮಾತ್ರವಲ್ಲದೆ ಎಲ್ಲೆಡೆ ಪ್ರದರ್ಶನ ಕಾಣುವಂತಾಗಲಿ ಎಂದು ಹಾರೈಸಿದರು.

ಸುಭಾಷ್ ನಾಣಯ್ಯ ಮಾತನಾಡಿ, ಕೊಡವ ಭಾಷೆ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರ ಇದಾಗಿದ್ದು, ಸಾಮಾಜಿಕ ಬದುಕಿನಲ್ಲಿ ನಡೆಯುವ ಕಷ್ಟ ಸುಖಗಳನ್ನು ಮೀರಿ ಸಂಸಾರವನ್ನು ನಿಭಾಯಿಸುವ ರೀತಿಯನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು. ಕೊಡಗಿನ ಜನ ಕೊಡಗಿನ ಪ್ರತಿಭೆಗಳನ್ನು ಪೋತ್ಸಾಹಿಸುವ ಮೂಲಕ ಸಹಕರಿಸಬೇಕು ಎಂದರು.

ಮೂರ್ನಾಡು ಗ್ರಾ.ಪಂ ಉಪಾಧ್ಯಕ್ಷ ಮುಂಡAಡ ವಿಜು ತಿಮ್ಮಯ್ಯ ಮಾತನಾಡಿ, ಸಾಹಿತ್ಯ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಉತ್ತಮ ಸಿನಿಮಾಗಳು ಮತ್ತಷ್ಟು ಹೊರಬರುವಂತಾಗಲಿ ಎಂದು ಹೇಳಿದರು.

ಚಿತ್ರದ ನಾಯಕ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಚಿತ್ರದಲ್ಲಿ ತಾನು ಯೋಧನಾಗಿ ನಟಿಸಿದ್ದು, ಉತ್ತಮ ಅನುಭವವನ್ನು ನೀಡಿದೆ. ಕೊಡವ ಭಾಷೆ, ಸಂಸ್ಕöÈತಿ, ಆಚಾರ, ವಿಚಾರಗಳನ್ನು ಬೆಳೆಸುವ ನಿಟ್ಟಿನಲ್ಲಿ ಚಿತ್ರತಂಡ ಕಾರ್ಯನಿರ್ವಹಿಸುತ್ತಿದೆ ಎಂದರು.

ಚಿತ್ರದ ನಾಯಕಿ ನೆಲ್ಲಚಂಡ ರಿಷಿ ಪೂವಮ್ಮ ಮಾತನಾಡಿ, ಚಿತ್ರದಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ನಟಿಸಿದ್ದು, ಚಿತ್ರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದೇನೆ. ಕಷ್ಟ ಬಂದರೆ ಹೇಗೆ ನಿಭಾಯಿಸಬೇಕು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೂರ್ನಾಡು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್, ಚಿತ್ರದ ನಿರ್ಮಾಪಕರಾದ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ ಕೊಡವ ಸಮಾಜ ಸೇರಿದಂತೆ ಎಲ್ಲಾ ಕೊಡವಾಭಿಮಾನಿಗಳು ಚಿತ್ರಕ್ಕೆ ಪೋತ್ಸಾಹ ನೀಡುವಂತಾಗಬೇಕು ಎಂದು ಶುಭ ಹಾರೈಸಿದರು.

ಚಲನಚಿತ್ರದ ಪ್ರದರ್ಶನದ ಜವಾಬ್ದಾರಿಯನ್ನು ವಿಜಯ ಎಂಟರ್ ಪ್ರೆöÊಸಸ್‌ನ ಜಾನ್ ಪುಲಿಕಲ್ ವಹಿಸಿಕೊಂಡಿದ್ದರು.

ಪ್ರಾರ್ಥನೆಯನ್ನು ಕೇಸರಿ ವಿಜಯ್ ಮಾಡಿದರು. ನಿರ್ಮಾಪಕಿ ಈರಮಂಡ ಹರಿಣಿ ಸ್ವಾಗತಿಸಿ, ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿದರು. ನಟ ಬೊಳ್ಳಜಿರ ಅಯ್ಯಪ್ಪ ವಂದಿಸಿದರು.

ಹುತಾತ್ಮನಾದ ವೀರಯೋಧನ ಪತ್ನಿ, ಅಂಗನವಾಡಿ ಕಾರ್ಯಕರ್ತೆ ಸಮಾಜಮುಖಿಯಾಗಿ ಮಾಡುವ ಉತ್ತಮ ಕೆಲಸ ಹಾಗೂ ಕಾರ್ಯ ಒತ್ತಡದ ನಡುವೆ ಸಂಸಾರವನ್ನು ನಿಭಾಯಿಸುವ ರೀತಿಯನ್ನು ಮನೋಜ್ಞವಾಗಿ “ನಾಡ ಪೆದ ಆಶಾ” ದಲ್ಲಿ ನಿರೂಪಿಸಲಾಗಿದೆ. ಕೊಡಗು ಮತ್ತು ಕೊಡವ ಜನಾಂಗದ ಸಂಸ್ಕೃತಿ, ಆಚಾರ-ವಿಚಾರ, ಹಬ್ಬ-ಹರಿದಿನಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಮೂರು ಉತ್ತಮ ಹಾಡುಗಳನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಪಾತ್ರದಲ್ಲಿ ಅಡ್ಡಂಡ ಅನಿತಾ ಕಾರ್ಯಪ್ಪ ಕಾಣಿಸಿಕೊಂಡಿದ್ದು, ನಾಯಕ ನಟನಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ನಾಯಕಿಯಾಗಿ ನೆಲ್ಲಚಂಡ ರಿಶಿ ಪೂವಮ್ಮ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಈರಮಂಡ ಹರಿಣಿ ವಿಜಯ್, ವಾಂಚಿರ ವಿಠಲ್ ನಾಣಯ್ಯ, ತಾತಂಡ ಪ್ರಭಾ ನಾಣಯ್ಯ, ಚೆರುವಾಳಂಡ ಸುಜಲಾ ನಾಣಯ್ಯ, ಅಜ್ಜಿಕುಟ್ಟಿರ ಪ್ರಥ್ವಿ ಸುಬ್ಬಯ್ಯ, ತೇಲಪಂಡ ಪವನ್ ತಮ್ಮಯ್ಯ, ಪುತ್ತರಿರ ಕರುಣ್ ಕಾಳಯ್ಯ ಸೇರಿದಂತೆ ಬಾಲ ಕಲಾವಿದರಾಗಿ ಈರಮಂಡ ಕುಶಿ ಕಾವೇರಮ್ಮ, ಮಂದೆಯAಡ ಪಾವನಿ ಕಾವೇರಮ್ಮ, ಚಂಗAಡ ಶಿವಾಂಚಿ ಮುತ್ತಮ್ಮ, ಕುಂಜಿಲನ ಸಿರಿ ಕಿರಣ್, ಚೆಟ್ಟಿಮಾಡ ಅನುಷಾ ವೇಣುಗೋಪಾಲ್, ಅಮ್ಮಾಟಂಡ ಪ್ರಾಪ್ತಿ ದೇವಯ್ಯ ತಾರಾಗಣದಲ್ಲಿದ್ದಾರೆ. ಹೊಸ ಪ್ರತಿಭೆಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಸಂಗೀತ ವಿಠಲ್ ರಂಗಧೋಳ್, ಛಾಯಾಗ್ರಹಣ ಪ್ರದೀಪ್ ಆರ್ಯನ್, ಸಾಹಿತ್ಯ ಹಾಗೂ ಗಾಯಕ ಆಪಾಡಂಡ ಜಗ್ಗ ಮೊಣ್ಣಪ್ಪ, ಚಲನಚಿತ್ರ ನಿರ್ದೇಶಕ ಎ.ಟಿ. ರಘು ಅವರ ಪುತ್ರಿ ಹಾಗೂ ಹಲವಾರು ಕೊಡವ ಸಿನಿಮಾ, ಧಾರಾವಾಹಿಗಳಿಗೆ ಹಾಡುಗಳನ್ನು ಹಾಡಿದ ಗಾಯಕಿ ಬಯವಂಡ ಬಿನು ಸಚಿನ್, ಕಾರ್ಯಕಾರಿ ನಿರ್ಮಾಪಕರಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಸಹ ನಿರ್ದೇಶಕರಾಗಿ ನಾಗರಾಜು ನೀಲ್ ಹಾಗೂ ಜನನ ಶಂಕರ್, ಸಂಕಲನ ಆನಂದ್ ಅನಿ, ವರ್ಣಸಂಸ್ಕರಣಕಾರರಾಗಿ ನಿಖಿಲ್ ಕಾರ್ಯಪ್ಪ, ಸುಶ್ರುೃತ್ ಭಟ್ ಕಾರ್ಯನಿರ್ವಹಿಸಿದ್ದಾರೆ.

ಚಿತ್ರ ಪ್ರದರ್ಶನದ ಸ್ಥಳ

ತಾ. ೬ ಮತ್ತು ೭ ರಂದು ಮೂರ್ನಾಡು ಕೊಡವ ಸಮಾಜ, ೯, ೧೦ ಮತ್ತು ೧೧ ರಂದು ನಾಪೋಕ್ಲು, ೧೪, ೧೫ ಮತ್ತು ೧೬ ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ಪ್ರದರ್ಶನಗೊಳ್ಳಲಿದೆ. ಬೆಳಿಗ್ಗೆ ೧೦.೪೫, ಮಧ್ಯಾಹ್ನ ೧, ೩.೩೦ ಮತ್ತು ಸಂಜೆ ೬ ಗಂಟೆಗೆ ಪ್ರತಿದಿನ ನಾಲ್ಕು ಪ್ರದರ್ಶನಗಳಿರುತ್ತವೆ.