ಮಡಿಕೇರಿ, ಸೆ. ೬: ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದ., ನೆಂಟರಿಷ್ಟರನ್ನು ಮದುವೆಗೆ ಕರೆಯಲು ಬಂದವ ಮಂಜು ಮುಸುಕಿದ ದಾರಿಯಲ್ಲಿ ಮಸಣದತ್ತ ಪಯಣಿಸಿದ ಹೃದಯ ವಿದ್ರಾವಕ ದುರ್ಘಟನೆ ಸಂಭವಿಸಿದೆ. ಮಡಿಕೇರಿ ಸನಿಹದ ರಾಷ್ಟಿçÃಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಟಿಪ್ಪರ್ ಲಾರಿಯಡಿ ಸಿಲುಕಿ ಮದುಮಗ ಸೇರಿದಂತೆ ಎರಡು ಜೀವಗಳು ಇಹಲೋಕ ತ್ಯಜಿಸಿವೆ. ಮೂಲತಃ ಮೈಸೂರು ಜಿಲ್ಲೆಯ ನಿವಾಸಿ ವಿಶ್ವನಾಥ್ ಎಂಬಾತನ ವಿವಾಹ ಇದೇ ತಾ. ೧೯ರಂದು ನಿಗದಿಯಾಗಿತ್ತು. ಮಡಿಕೇರಿ ಯಲ್ಲಿರುವ ವಿಶ್ವನಾಥ್ ಸಂಬAಧಿಕರಿಗೆ ಆಮಂತ್ರಣ ಪತ್ರಿಕೆ ನೀಡುವ ಸಲುವಾಗಿ ಆಮಂತ್ರಣ ಪತ್ರದೊಂದಿಗೆ ತನ್ನ ಸಂಬAಧಿಕ ದಿನೇಶ್ ಎಂಬಾತನೊAದಿಗೆ ಇಂದು ಮಡಿಕೇರಿಯತ್ತ ಪಯಣ ಬೆಳೆಸಿದ್ದರು. ರಾಯಲ್ ಎನ್‌ಫೀಲ್ಡ್ ಬುಲ್ಲೆಟ್ ಬೈಕ್ (ಕೆಎ೦೫ ಎಝಡ್೮೩೧೪)ನಲ್ಲಿ ಸುಂಟಿಕೊಪ್ಪ ಮಾರ್ಗವಾಗಿ ಇಬ್ನಿವಳವಾಡಿ ದಾಟಿ (ಇನ್ನೇನು ಮಡಿಕೇರಿ ತಲುಪಬೇಕು) ಬರುತ್ತಿದ್ದಾಗ ಎದುರಿಗೆ ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಟಿಪ್ಪರ್ ಲಾರಿ (ಕೆಎಲ್೧೪-ಕೆ೮೭೫೮)ಯನ್ನು ಹಿಂದಿಕ್ಕಿ ಮುಂದೆ ಸಾಗಲು ಪ್ರಯತ್ನಿಸಿದ್ದಾರೆ. ಸಾಮಾನ್ಯವಾಗಿ ಮಂಜು ಮುಸುಕಿದ್ದ ಪ್ರದೇಶವಾಗಿದ್ದು, ಸಂಜೆ ೭ ಗಂಟೆ ದಾಟಿದ್ದರಿಂದ ರಸ್ತೆಯ ಅಂದಾಜು ಸಿಗದೆ ಬೈಕ್ ಸವಾರರಿಬ್ಬರು ಬೈಕ್ ಸಹಿತ ರಸ್ತೆಗೆ ಮಗುಚಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಮಣ್ಣು ಹಾಕಿರುವುದರಿಂದ ಕೆಸರಿನಿಂದಾಗಿ ಬೈಕ್ ಮಗುಚಿಕೊಂಡಿದೆ. ಹಿಂದಿನಿAದ ಅದೇ ವೇಗದಲ್ಲಿದ್ದ ಟಿಪ್ಪರ್ ಲಾರಿ ನಿಯಂತ್ರಣ ಕಳೆದುಕೊಂಡು ಇವರಿಬ್ಬರ ಮೇಲೆ ಹರಿದಿದೆ. ಸ್ಥಳದಲ್ಲೇ ಈರ್ವರ ಉಸಿರು ಹಾರಿಹೋಗಿದೆ. ಲಾರಿ ಹರಿದ ರಭಸಕ್ಕೆ ಈರ್ವರು ಯುವಕರ ದೇಹಗಳು ಛಿದ್ರವಾಗಿವೆ. ಮಡಿಕೇರಿ ನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಮಾಡಿ ಲಾರಿ ಚಾಲಕ ಮಹಮ್ಮದ್ ಸಾಧಿಕ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- ಸಂತೋಷ್