*ವೀರಾಜಪೇಟೆ, ಸೆ. ೬: ವೀರಾಜಪೇಟೆ ಪಟ್ಟಣ ಪಂಚಾಯ್ತಿ ವರ‍್ಡ್ ನಂಬರ್ ೧೩ರ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ರ‍್ಥಿ ಎಂ.ಕೆ. ವಿನಾಂಕ್ ಕುಟ್ಟಪ್ಪ ೨೩೮ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.

ವಿನಾಂಕ್ ಎದುರು ಸ್ರ‍್ಧಿಸಿದ್ದ ಕಾಂಗ್ರೆಸ್ ಅಭ್ರ‍್ಥಿ, ಮಾಜಿ ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ೧೭೮ ಮತಗಳನ್ನು ಪಡೆಯುವ ಮೂಲಕ ಸೋಲಿನ ರುಚಿ ಅನುಭವಿಸಿದ್ದಾರೆ. ವೀರಾಜಪೇಟೆ ಮಿನಿ ವಿಧಾನಸೌಧದಲ್ಲಿ ಬೆಳಿಗ್ಗೆ ೮ ಗಂಟೆಗೆ ಮತಎಣಿಕೆ ಕರ‍್ಯ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.

ರ‍್ಷರ‍್ಧನ್ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಉಭಯ ರಾಷ್ಟಿçÃಯ ಪಕ್ಷಗಳ ನಡುವೆ ನೇರಾ-ನೇರ ಸ್ರ‍್ಧೆ ರ‍್ಪಟ್ಟಿತ್ತು. ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಒಟ್ಟು ೪೧೬ ಮಂದಿ ಮತ ಚಲಾವಣೆ ಮಾಡುವ ಮೂಲಕ ಶೇಕಡ ೭೬.೪೭ ರಷ್ಟು ಮತದಾನ ನಡೆದಿತ್ತು.

ಇಂದು ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಂಡೇಪಂಡ ಸುಜಾಕುಶಾಲಪ್ಪ ಅವರ ಪುತ್ರ ಎಂ.ಕೆ ವಿನಾಂಕ್ ಕುಟ್ಟಪ್ಪ ೬೦ ಮತಗಳ ಅಂತರದಿಂದ ಪ್ರತಿಸ್ರ‍್ಧಿಯನ್ನು ಮಣಿಸಿ ಚುನಾಯಿತರಾಗಿದ್ದಾರೆ. ಪ.ಪಂ.ಚುನಾಯಿತ ಸದಸ್ಯರ ಪೈಕಿ ಅತ್ಯಂತ ಕಿರಿಯ ವಯಸ್ಸಿನ ಜನಪ್ರತಿನಿಧಿ ವಿನಾಂಕ್ ಆಗಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಕೋವಿಡ್ ನಿಯಮಾವಳಿ ಪಾಲನೆಯ ಜೊತೆಗೆ ಬಿಜೆಪಿ ಪ್ರಮುಖರು, ಅಪಾರ ಕರ‍್ಯರ‍್ತರು ವಿನಾಂಕ್ ಕುಟ್ಟಪ್ಪರಿಗೆ ಹೂವಿನ ಹಾರ ಹಾಕಿ, ಸಿಹಿ ಹಂಚಿ ಸಂಭ್ರಮಪಟ್ಟರು.(ಮೊದಲ ಪುಟದಿಂದ) ನಗರದ ಬಿಜೆಪಿ ಕಚೇರಿಯಿಂದ ಮೀನುಪೇಟೆ ತನಕ ಮೆರವಣಿಗೆ ಮೂಲಕ ಸಾಗಿ, ಪಟಾಕಿ ಸಿಡಿಸಿ, ಜಯಘೋಷ ಕೂಗಿ ವಿಜಯೋತ್ಸವ ಆಚರಿಸಿದರು.

ವಿಜಯೋತ್ಸವದಲ್ಲಿ ಬಿಜೆಪಿ ಪ್ರಮುಖರಾದ ರೀನಾ ಪ್ರಕಾಶ್, ಅಚ್ಚಪಂಡ ಮಹೇಶ್ ಗಣಪತಿ, ಬಿಜೆಪಿ ನಗರಾಧ್ಯಕ್ಷ ಟಿ.ಪಿ ಕೃಷ್ಣ, ಜೋಕಿಂ ರೋಡ್ರಿಗಸ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶ್ಮಿತಾ, ಪ.ಪಂ. ಚುನಾಯಿತ ಸದಸ್ಯರುಗಳು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.