ಮಡಿಕೇರಿ, ಸೆ. ೭: ನಗರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುವ ಹಸು ಕರುಗಳನ್ನು ನಗರಸಭೆ ವತಿಯಿಂದ ತಾ. ೧೩ ರಿಂದ ಹಿಡಿದು ಗೋ ಶಾಲೆಗೆ ಕಳುಹಿಸಲಾಗುವುದು. ಆದ್ದರಿಂದ ಸಂಬAಧಿಸಿದ ಮಾಲೀಕರು ತಮ್ಮ ಜಾನುವಾರುಗಳು ಬೀದಿಗೆ ಬರದಂತೆ ನೋಡಿಕೊಳ್ಳುವುದು. ಇಲ್ಲವಾದಲ್ಲಿ ನಗರಸಭೆ ವತಿಯಿಂದ ವಹಿಸಲಾಗುವ ಕ್ರಮಕ್ಕೆ ತಾವೇ ಜವಾಬ್ದಾರರು ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ಅವರು ತಿಳಿಸಿದ್ದಾರೆ.