ಐದೂವರೆ ದಶಕಗಳ ಹಿಂದೆ (೧೯೬೫) ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರು ವಿಮಾನವನ್ನು ಕೆಚ್ಚೆದೆಯಿಂದ ಹೊಡೆದುರುಳಿಸಿದ ಪರಿಣಾಮ ಯುದ್ಧ ನೆಲೆಯಲ್ಲೇ ಬಲಿದಾನಗೈದ ಕೊಡಗಿನ ವೀರಯೋಧ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಮಡಿಕೇರಿ ಯಲ್ಲಿ ಪ್ರತಿಷ್ಠಾಪಿಸಿ ಒಂದು ವರ್ಷ ಕಳೆಯಿತು. ಇದು ವೀರಯೋಧನ ಕೀರ್ತಿ ಅಜರಾಮರವಾಗಲೆಂದು ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಎಂಟು ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಫಲ.
ಕೊಡಗಿನ ವೀರಸೇನಾ ಪರಂಪರೆಯ ಇತಿಹಾಸದಲ್ಲಿ ಎರಡನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರಚಕ್ರ ಪ್ರಶಸ್ತಿ ಮರಣೋತ್ತರವಾಗಿ ಸ್ಕಾ÷್ವ. ಲೀ. ಅಜ್ಜಮಾಡ ದೇವಯ್ಯನವರಿಗೆ ದೊರೆತ್ತಿದ್ದು, ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್. ಗಣಪತಿ ಅವರ ಸೇವೆಗೂ ಈ ಗೌರವಯುತ ಪ್ರಶಸ್ತಿ ಸಿಕ್ಕಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ, ಸ್ವಾತಂತ್ರ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ÷ಗೌಡ, ವೀರಸೇನಾನಿ ಜನರಲ್ ತಿಮ್ಮಯ್ಯ, ಹುತಾತ್ಮ ಯೋಧ ಮಂಗೇರಿರ ಮುತ್ತಣ್ಣ ಇವರುಗಳ ಪ್ರತಿಮೆಗಳ ಜೊತೆಗೆ ಸ್ಕಾ÷್ವಡ್ರನ್ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪ್ರತಿಮೆ ಮಡಿಕೇರಿಯ ಹೃದಯ ಭಾಗದಲ್ಲಿ ಅಜರಾಮರಗೊಂಡಿದೆ.
ಕ್ಷಾತ್ರ ಪರಂಪರೆಯ ಇತಿಹಾಸ ಹೊಂದಿರುವ ಕೊಡಗಿನ ಮಣ್ಣಿನಲ್ಲಿ ಭಾರತೀಯ ವಾಯುಸೇನಾ ಪಡೆಯ ಸ್ಕಾ÷್ವಡ್ರನ್ಲೀಡರ್ ಹುದ್ದೆಯನ್ನೇರಿ ತಮ್ಮ ಜೀವದ ಹಂಗನ್ನೆಲ್ಲ ತೊರೆದು ಶತ್ರುಗಳೊಂದಿಗೆ ಹೋರಾಡಿ ಕೀರ್ತಿ ಮೆರೆಯುತ್ತಲೇ ದೇವಯ್ಯ ಅವರು ವೀರ ಮರಣವನ್ನಪ್ಪಿ ಇಂದಿಗೆ ೫೬ ವರ್ಷಗಳೇ ಕಳೆದುಹೋಗಿವೆ. ಅಂದು ೧೯೬೫ರಲ್ಲಿ ಭಾರತ-ಪಾಕ್ಯುದ್ಧದ ಸಂದರ್ಭ ವಿಂಗ್ ಕಮಾಂಡರ್ ಆಗಿದ್ದ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರಿಗೆ ಪಾಕ್ ಭದ್ರಕೋಟೆಯಾಗಿದ್ದ ಸರಗೋಡ ವಾಯುನೆಲೆಯ ಮೇಲೆ ತಮ್ಮ ದಾಳಿ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ತಮ್ಮ ಪಾಲಿನ ಹೊಣೆಗಾರಿಕೆಯನ್ನು ನಿಭಾಯಿಸುವ ಸಲುವಾಗಿ ಹೊರಟ ದೇವಯ್ಯ ಅವರ ತಂಡಕ್ಕೆ ಶತ್ರುಗಳ ವಾಯುನೆಲೆಯನ್ನು ಧ್ವಂಸಗೊಳಿಸುವ ಮೂಲಕ ಗುರಿಸಾಧಿಸಿ ಹಿಂತಿರುಗಿ ಬರುವ ಎಲ್ಲ ಅವಕಾಶಗಳಿದ್ದರೂ ತಮ್ಮ ತಂಡದ ಇತರೆ ಯುದ್ಧ ವಿಮಾನಗಳ ಮೇಲೆ ದಾಳಿಯಾಗದಿರಲಿ ಎಂದು ಬೆಂಗಾವಲಾಗಿ ಸುರಕ್ಷಿತವಾಗಿ ಹಿಂತಿರುಗುತ್ತಿದ್ದAತೆ ದಿಢೀರನೆ ಹಿಂಬಾಲಿಸಿದ ಶತ್ರು ವಿಮಾನದೊಂದಿಗೆ ಮತ್ತೆ ಹೋರಾಟ ನಡೆಸಬೇಕಾಗಿತ್ತು. ಎದೆಗುಂದದ ದೇವಯ್ಯ ಪ್ರಾಣದ ಹಂಗುತೊರೆದು ತಮ್ಮದೇ ಆದÀ ವಿಮಾನದ ಹೋರಾಟದಲ್ಲಿ ರಣರಂಗದಲ್ಲಿ ಭೂ ಸೇನಾ ಸೈನಿಕರು ಮುಖಾಮುಖಿ ಹೇಗೆ ಹೋರಾಡುತ್ತಾರೋ ಅದೇ ರೀತಿ ವಾಯೂಸೇನೆ ಯಲ್ಲೂ ಮುಖಾಮುಖಿ ಹೋರಾಡುವ ಅಪಾಯಕಾರಿ ಡಾಗ್ಫೈಟನ್ನು ಕೆಚ್ಚೆದೆಯಿಂದ ಎದುರಿಸಬೇಕಿತ್ತು. ಯುದ್ಧ ವಿಮಾನಗಳು ಪರಸ್ಪರ ‘ಡೈ’ ಹೊಡೆಯುತ್ತಾ ಬಹುಹೊತ್ತಿನವರೆಗೆ ದಾಳಿ ಮುಂದುವರಿಯಿತು. ದೇವಯ್ಯ ತನ್ನ ವಿಮಾನದಿಂದ ಸ್ಟಾರ್ಫೈಟರ್ಗೆ ತೀವ್ರ ಹಾನಿ ಉಂಟು ಮಾಡಿದರು. ಶತ್ರುಗಳ ಬಲಿಷ್ಠವಾದ ಸೂಪರ್ಸಾನಿಕ್ ವಿಮಾನವನ್ನು ಹೊಡೆದು ಉರುಳಿಸುವ ಮೂಲಕ ಭಾರತೀಯ ವಾಯುಪಡೆಯಲ್ಲಿ ಸಾಹಸದ ಒಂದು ದಾಖಲೆ ನಿರ್ಮಿಸಿದರು. ಕಾಳಗದ ಕೊನೆಯಲ್ಲಿ ದೇವಯ್ಯ ಅವರ ವಿಮಾನಕ್ಕೂ ದಕ್ಕೆಯಾಯಿತು. ಆ ಸಂದರ್ಭ ತಾನೂ ಕೂಡ ಪ್ಯಾರಚೂಟ್ನನಲ್ಲಿ ಹಾರುವ ಅವಕಾಶವಿತ್ತಾದರೂ, ಯುದ್ಧ ವಿಮಾನ ಪತನಗೊಂಡು ಸುಟ್ಟು ಕರಕಲಾದ ಪರಿಣಾಮ ದೇವಯ್ಯ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಅಮರರಾದರು.
೧೯೬೫ರ ಸೆಪ್ಟೆಂಬರ್ ೭ ರಂದು ನಡೆದ ಈ ದುರ್ಘಟನೆಯಲ್ಲಿ ದೇವಯ್ಯ ತನ್ನ ಸೇನಾ ಜೀವನದಲ್ಲಿ ಸಾಹಸ ಮೆರೆದು ತನ್ನ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದಾಗ ದೇವಯ್ಯ ಅಮರ್ರಹೇ... ಅಮರ್ ರಹೇ.. ಎಂಬ ಕೂಗು ಮುಗಿಲೆತ್ತರಕ್ಕೆ ತಲುಪಿದರೂ ಜಗತ್ತಿಗೆ ತಿಳಿಯಲು ಕೆಲವು ವರ್ಷಗಳೇ ಬೇಕಾಗಿ ಬಂತು. ೨೩ ವರ್ಷಗಳ ನಂತರ ಅವರ ಹೋರಾಟದ ಪರಿಯನ್ನು ಶತ್ರು ದೇಶದ ಪೈಲೆಟ್ ಒಬ್ಬ ವಿವರಿಸಿದ್ದು, ಬ್ರಿಟೀಷ್ ಪತ್ರಕರ್ತನೊಬ್ಬ ಭಾರತ-ಪಾಕಿಸ್ತಾನ ಯುದ್ಧದ ಕುರಿತು ರಚಿಸಿದ ಕೃತಿಯಲ್ಲೂ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸಾಧನೆ ಹಾಗೂ ಹೋರಾಟ ಅಪ್ರತಿಮವಾದುದೆಂದು ದಾಖಲಾಗಿದ್ದು, ಇಡೀ ಜಗತ್ತಿಗೆ ತಿಳಿಯಿತು.
ದೇವಯ್ಯ ಅವರು, ಪತ್ನಿ ಮಕ್ಕಳೊಂದಿಗೆ ಇದ್ದ ಸಮಯ ವಾಯುಪಡೆಯ ಸಂದೇಶ ರವಾನಿಸುವ ಯೋಧನೊಬ್ಬ ಬಂದು ನೀಡಿದ ಟೆಲಿಗ್ರಾಂನಲ್ಲಿ ಗಡಿಯಲ್ಲಿ ಪಾಕಿಸ್ತಾನದ ಸೈನ್ಯವು ಅಟ್ಟಹಾಸ ಮೆರೆಯುತ್ತಿದ್ದು ಯುದ್ಧಕ್ಕೆ ಸಿದ್ಧರಾಗುವ ಬಗ್ಗೆ ತಿಳಿದು ಪತ್ನಿ ಹಾಗೂ ಪುಟ್ಟ ಕಂದಮ್ಮನಿಗೆ ಧೈರ್ಯ ತುಂಬಿ ಯುದ್ಧಕ್ಕೆ ಹೊರಟರು. ಪ್ರತಿಯೊಬ್ಬ ಯೋಧನ ಪತ್ನಿಗೂ ಗೊತ್ತು ರಣರಂಗದಿAದ ಹಿಂದಿರುಗಿದರೆ ವೀರ ಬಂದ ಹೆಮ್ಮೆ. ಇಲ್ಲದಿದ್ದರೆ ಹುತಾತ್ಮ ಪತಿ ಎಂಬ ಪಟ್ಟ. ಅದೇ ರೀತಿ ಕೊಡವರಿಗೆ ಯುದ್ಧ ಎನ್ನುವುದು ಸಾಮಾನ್ಯ. ಗಂಡು ಯುದ್ಧಭೂಮಿಯಲ್ಲಿ ಹೋರಾಡಿ ಸಾಯಬೇಕು, ಹೆಣ್ಣು ಮಕ್ಕಳನ್ನು ಹೆತ್ತು ಸಾಯಬೇಕೆನ್ನುವುದು ಕೊಡವರ ರಕ್ತಗತವಾಗಿ ಬಂದ ಗಾದೆ ಮಾತಿದೆ. ಅನಾದಿಕಾಲದಿಂದಲೂ ಸೈನ್ಯದಲ್ಲಿ ಹೋರಾಡಿದ ವರಿದ್ದಾರೆ. ವಿವಾಹದ ದಿನದಂದೇ ಯುದ್ಧಕ್ಕೆ ತೆರಳಿ ವೀರಮರಣವನ್ನಪ್ಪಿದವರಿದ್ದಾರೆ. ಸ್ಕಾ÷್ವಡ್ರನ್ ಲೀಡರ್ ದಿ. ಅಜ್ಜಮಾಡ ದೇವಯ್ಯ ಧರ್ಮಪತ್ನಿ ಸುಂದರಿ ದೇವಯ್ಯ ತಮ್ಮ ಇಬ್ಬರು ಪುತ್ರಿಯರೊಂದಿಗೆ ದೇಶಕ್ಕಾಗಿ ಪ್ರ್ರಾಣತೆತ್ತ ತನ್ನ ಪತಿಯ ನೆನಪಿನೊಂದಿಗೆ ಬದುಕು ಕಳೆಯುತ್ತಿದ್ದಾರೆ. ಕೊಡಗಿನ ಶ್ರೀಮಂಗಲದ ಕುರ್ಚಿ ಗ್ರಾಮದ ಅಜ್ಜಮಾಡ ಬೋಪಯ್ಯ ನೀಲಮ್ಮ ದಂಪತಿಗಳ ಪುತ್ರ ದೇವಯ್ಯ ೧೯೫೪ರಲ್ಲಿ ತನ್ನ ೨೨ರ ಹರೆಯದಲ್ಲಿ ಸೇನೆಗೆ ಸೇರಿ ತಮ್ಮ ೧೧ ವರ್ಷದ ಸೇನಾ ಜೀವನದಲ್ಲಿ ದೇಶ ಸೇವೆಯಲ್ಲಿ ಅಸಾಮಾನ್ಯ ಸಾಹಸ, ಎದೆಗಾರಿಕೆ, ತ್ಯಾಗ, ಬಲಿದಾನಗಳನ್ನು ಪರಿಗಣಿಸಿ ಭಾರತ ಸರ್ಕಾರ ಮರಣೋತ್ತರವಾಗಿ ದೇವಯ್ಯರವರಿಗೆ ೧೯೮೮ರಲ್ಲಿ ವiಹಾವೀರ ಚಕ್ರ ಪ್ರಶಸ್ತಿಯನ್ನು ನೀಡಿತು.
೧೯೬೫ ಯುದ್ಧ ಹಾಗೂ ಕೊಡಗಿನ ಮಹಾವೀರ ಕೃತಿ: ಬದುಕನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಮಹಾವೀರ ಸ್ಕಾ÷್ವಡ್ರನ್ ಲೀಡರ್ ದಿ. ಅಜ್ಜಮಾಡ ದೇವಯ್ಯ ನೆನಪು ದಾಖಲೆ ಮಾಡಬೇಕೆನ್ನುವುದು ಕೊಡವ ಮಕ್ಕಡ ಕೂಟದ ಆಶಯವಾಗಿತ್ತು. ಸಾಹಿತಿ ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ದೇವಯ್ಯ ಅವರ ಪರಿಚಯ, ದೇಶಪ್ರೇಮ, ಹೋರಾಟದ ಬಗ್ಗೆ ಅಧ್ಯಯನ ನಡೆಸಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ೧೯೬೫ರ ಯುದ್ಧ ಹಾಗೂ ಕೊಡಗಿನ ಮಹಾವೀರ ಎಂಬ ಕೃತಿಯನ್ನು ರಚಿಸಿ ದೇವಯ್ಯ ಅವರ ಜೀವನ ಸಾಧನೆಯ ಮೆಟ್ಟಿಲನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬ ಈ ಕೃತಿಯನ್ನು ೨೦೧೭ರಲ್ಲಿ ಲೋಕಾರ್ಪಣೆಗೊಳಿಸಿತ್ತು. ಸೆಪ್ಟೆಂಬರ್ ೭ರ ದಿನವನ್ನು ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬದ ಸಹಯೋಗದಲ್ಲಿ ಸ್ಕಾ÷್ವ.ಲೀ. ಅಜ್ಜಮಾಡ ದೇವಯ್ಯ ಅವರ ಸ್ಮರಣಾ ದಿನವನ್ನಾಗಿ ಆಚರಿಸುವ ಮೂಲಕ ವೀರಯೋಧನಿಗೆ ಗೌರವ ಸಲ್ಲಿಸುತ್ತಾ ಬರಲಾಗುತ್ತಿದೆ. ಸ್ಕಾ÷್ವ. ಲೀ. ಅಜ್ಜಮಾಡ ದೇವಯ್ಯನವರ ಪ್ರತಿಮೆಯನ್ನು ಕಳೆದ ಬಾರಿ ಪ್ರತಿಷ್ಠಾಪಿಸಿ ಸೆಪ್ಟೆಂಬರ್ ೭ಕ್ಕೆ ಒಂದು ವರ್ಷ ಕಳೆದಿರುವುದು ಯೋಧ ಪರಂಪರೆಗೊAದು ಹೆಮ್ಮೆ.
-ಪುತ್ತರಿರ ಕರುಣ್ ಕಾಳಯ್ಯ,
ಚೆಟ್ಟಳ್ಳಿ.