ಶಿರಿನ್ ಪಥಾರೆ ಏರ್ ಇಂಡಿಯಾದ ಭದ್ರತಾ ವಿಭಾಗದ ಸಹಾಯಕ ಜನರಲ್ ಮ್ಯಾನೇಜರ್. ಇವರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಇಲಾಖೆಯ ಅಧಿಕಾರಿಯಾಗಿ ನಿಯುಕ್ತಿ ಆಗಿದ್ದವರು. ಇವರು ಆಗಸ್ಟ್ ೧೫, ೧೬, ೨೦೨೧ರಂದು ಕಾಬೂಲ್ ನಿಂದ ಭಾರತಕ್ಕೆ ಮರಳಿದ ಸಂದರ್ಭದಲ್ಲಿ ಅನುಭವಿಸಿದ ನೈಜ ಘಟನೆಗಳ ಇಂಗ್ಲೀಷ್ ವರದಿಯನ್ನು ಕನ್ನಡಕ್ಕೆ ಭಾಷಾಂತರಿಸಿ ಕೊಡಲಾಗಿದೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನಿರೀಕ್ಷಿತವಾಗಿ, ಫಕ್ಕನೆ ಆಗಸ್ಟ್ ೧೫ರಂದು ತಾಲಿಬಾನರ ವಶವಾದಾಗ ನಾನೇನು ಮಾಡಬೇಕೆಂದು ಗೊತ್ತಾಗದೆ ಅತಿ ಗೊಂದಲಕ್ಕೆ ಒಳಗಾಗಿಹೋದೆ !!
ನಾನು ಶಿರಿನ್ ಪಥಾರೆ. ೨೦೨೦ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಕಾಬೂಲ್ ಪ್ರವೇಶಿಸಿದೆ. ಅಂದು ಅಲ್ಲಿ ಬಲುಸುಂದರ ತಂಪು ಆಹ್ಲಾದಕರ ವಾತಾವರಣವನ್ನು ಅನುಭವಿಸಿದೆ. ನಮ್ಮ ಎದುರುಭಾಗದಲ್ಲಿ ಸುಂದರ, ಹಿಮಾಚ್ಚಾದಿತ ಪರ್ವತಗಳು ಕಾಣಿಸುತ್ತಿದ್ದವು. ನಮ್ಮ ಒಡನಾಟದ ಜನರು ಸಜ್ಜನರು. ಎಲ್ಲವೂ ಚೆನ್ನಾಗಿಯೇ ಇತ್ತು. ನಾನು ಏರ್‌ಇಂಡಿಯಾ ಕಾಬೂಲ್ ವಿಮಾನ ನಿಲ್ದಣದ ಭದ್ರತಾ ವಿಭಾಗದ ಮುಖ್ಯಸ್ಥನಾಗಿದ್ದೆ. ಇದು ನನಗೆ ಜವಾಬ್ದಾರಿಕೆಯುಳ್ಳ, ಮೇಲಾಗಿ ತೃಪ್ತಿ ತರುವ ಹುದ್ದೆಯಾಗಿತ್ತು. ನಾನು ಕರ್ತವ್ಯನಿರತನಾಗಿ ಒಂದು ತಿಂಗಳಾಗಿತ್ತು. ಆ ದಿನಗಳಲ್ಲಿ ಅಫ್ಘಾನ್ ಸರಕಾರ, ತಾಲಿಬಾನ್, ಅಮೇರಿಕಾ, ಟರ್ಕಿ ಮತ್ತು ಕತಾರ್ ನಡುವೆ ಶಾಂತಿ ಮಾತುಕತೆಗಳು ನಡೆದರೂ ಮಾತುಕತೆ ಹಳಿತಪ್ಪಿ ಹೋಗಿದ್ದುದು ಎಲ್ಲರ ಗಮನಕ್ಕೆ ಬಂದಿತ್ತು. ಆ ಸಂದರ್ಭದಲ್ಲಿ ಮುಂದೆ ಮೇ ೨೦೨೧ರ ಅಂತ್ಯದೊಳಗೆ ಅಮೇರಿಕನ್ ಪಡೆಗಳು ಸಂಪೂರ್ಣವಾಗಿ ಅಫ್ಘಾನ್‌ನಿಂದ ಹಿಂದೆ ಸರಿಯುವುದು ನಿಶ್ಚಿತವಾಗಿಹೋಗಿತ್ತು. ಆ ದಿನಗಳಲ್ಲಿ ಅಫ್ಘಾನ್‌ನಲ್ಲಿ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಿದ್ದವೇ ಹೊರತು ಹಿಂಸಾಚಾರಗಳು ನಡೆಯುತ್ತಿರಲಿಲ್ಲ. ಆದರೆ, ನವೆಂಬರ್ ಕೊನೆಯ ವಾರದಲ್ಲಿ ಪಾಕ್ ಪ್ರಧಾನಿ ಇಮ್ರಾನ್‌ಖಾನ್ ಕಾಬೂಲ್‌ಗೆ ಬಂದಾಗ ಹಿಂಸಾಚಾರ ನಡೆದಿತ್ತು. ಆತ ಕಾಬೂಲ್‌ನಿಂದ ಹಿಂದಿರುಗಿದ ತಕ್ಷಣ ನಗರದ ಹಲವಾರು ಕಡೆಗಳಲ್ಲಿ ಬಾಂಬ್ ಸ್ಪೋಟ ನಡೆದಿತ್ತು!!
ಅಂದು ನಾನು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದೆ. ಆಗ, ನನ್ನ ಎದುರು ಕೆಲವು ಧಾಳಿಕೋರರು ಯಾರ ಭಯವಿಲ್ಲದೆ ಯಾವುದೇ ಕಾರಣವಿಲ್ಲದೆ ಸುಮಾರು ೨೪ ರಾಕೆಟ್ ಲಾಂಚರ್‌ಗಳನ್ನು ಒಂದರ ಹಿಂದೆ ಒಂದರAತೆ ಸ್ಪೋಟಿಸಿದರು!!
ಫೆಬ್ರವರಿಯಲ್ಲಿ ಭಾರತೀಯ ವಿದೇಶೀ ರಾಯಭಾರಿ ಕಛೇರಿಯಿಂದ ನಮಗೆ ಕಚೇರಿ ಬಿಡದಂತೆ, ರಾತ್ರಿ ಎಷ್ಟು ಮಾತ್ರಕ್ಕೂ ಪ್ರಯಾಣಿಸದಂತೆ ಮತ್ತು ಬಲುಮುಖ್ಯವಾಗಿ ಏಕಾಂತ ಸ್ಥಳಗಳಿಗೆ ಹೋಗದಿರುವಂತೆ ಆದೇಶ ಬಂದಿತ್ತು. (ಹಾಗೇನಾದರೂ ಹೋದರೆ ಅಪಹರಣವಾಗುವುದು ನಿಶ್ಚಿತ ವಾಗಿತ್ತು.)
u ಬಿಡೆನ್ ಅಧ್ಯಕ್ಷರಾಗಿರುವ ಅಮೇರಿಕಾ ಸರಕಾರವು ತಮ್ಮ ಸೈನ್ಯವು ೩೧-೮-೨೦೨೧ರೊಳಗೆ ಅಫ್ಘಾನಿಸ್ತಾನವನ್ನು ಬಿಟ್ಟು ಹಿಂತಿರುಗುವುದಾಗಿ ಘೋಷಿಸಿದ್ದರಿಂದ ತಾಲಿಬಾನರಿಂದ ಅಕ್ರಮ ಧಾಳಿ ನಡೆಯುವುದು ನಿಶ್ಚಿತ ವಾಗಿತ್ತು. ಇದಕ್ಕೆ ಮುನ್ಸೂಚನೆಯಂತೆ ಮಾರ್ಚ್ ತಿಂಗಳಲ್ಲಿ ಕ್ರೌರ್ಯ ವನ್ನೊಳಗೊಂಡ ಧಾಳಿಗಳು ಆರಂಭವಾಗಿಬಿಟ್ಟಿದ್ದವು.
u ಮೇ ತಿಂಗಳಲ್ಲಿ ಕಂದಾಹಾರವನ್ನು ತಾಲಿಬಾನರು ಆವರಿಸಿದರು. ಮಾತ್ರವಲ್ಲ ನಗರಕ್ಕೆ ಆಹಾರ ಸರಬರಾಜಾಗದಂತೆ ರಸ್ತೆಗಳನ್ನು ಬಂದ್ ಮಾಡಿದರು. ಇದರ ಪರಿಣಾಮವಾಗಿ ಜನಸಾಮಾನ್ಯರಿಗೆ, ಸೈನ್ಯವಿಭಾಗಕ್ಕೆ ಆಹಾರ ಸಿಗದಾಯಿತು. ಇದರ ಉದ್ದೇಶ ಸರಕಾರವನ್ನು ಶರಣಾಗತಿ ಸ್ಥಿತಿಗೆ ತರುವುದಾಗಿತ್ತು.
u ಮಝೂರ್-ಎ- ಶರೀಫ್ ವಶವಾಗುತ್ತಿದ್ದಂತೆ ಮುಂದಿನ ಗುರಿ ಕೇವಲ ೪೨೫ ಕಿ ಮೀ ದೂರದ ಕಾಬೂಲ್ ಎಂಬುದು ಅರ್ಥವಾಗಿಹೋಗಿತ್ತು.
u ಈದ್ ಹಬ್ಬದ ದಿನ ಅಧ್ಯಕ್ಷ ಅಶ್ರಫ್‌ಘನಿ ಪ್ರಾರ್ಥನಾ ಮಂದಿರಕ್ಕೆ ಹೋಗುವ ದಾರಿಯಲ್ಲಿ ರಾಕೆಟ್ ಲಾಂಚರ್‌ಗಳನ್ನು ಹಾರಿಸಲು ಸಿದ್ಧತೆ ಆಗಿತ್ತು.
u ಜುಲೈ ೨೯ರಂದು ನನ್ನ ತಂದೆಯವರು ಮುಂಬೈಯಲ್ಲಿ ತೀರಿಹೋದ ನಿಮಿತ್ತ ನಾನು ಅವರ ಅಪರ ಕ್ರಿಯೆಗಳನ್ನು ಮಾಡಲು ಊರಿಗೆ ಹೋಗಿ ಆಗಸ್ಟ್ ೧೨ಕ್ಕೆ ಕಾಬೂಲಿಗೆ ಹಿಂತಿರುಗಿದೆ. ಆ ಸಂದರ್ಭದಲ್ಲಿ ನನ್ನ ಹಲವಾರು ಮುಂಬೈ ಸ್ನೇಹಿತರು ಮರಳಿ ಕಾಬೂಲಿಗೆ ಹೋಗದಿರಲು ಹೇಳಿದರು. ಕಾಬೂಲ್ ಸ್ನೇಹಿತರು ‘ಬರಬಾರದಿತ್ತು’ ಎಂದರು. ಆದರೆ, ನನಗೆ ಕರ್ತವ್ಯ ನಿರ್ವಹಿಸುವುದು ಮುಖ್ಯವಾಗಿತ್ತು!
u ಆಗಸ್ಟ್ ೧೩, ೧೪ರಂದು ಏರ್ ಇಂಡಿಯಾ ವಿಮಾನಗಳು ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ಆಗಸ್ಟ್ ೧೫ರಂದು ಹೆಂಡತಿ ಮತ್ತು ಮಕ್ಕಳಿಗೆ ಕಾಬೂಲ್‌ನಿಂದಲೇ ಸ್ವಾತಂತ್ರö್ಯ ದಿನದ ಶುಭ ಹಾರೈಸಿದೆ. ಅಂದು ಮಧ್ಯಾಹ್ನ ಸುಮಾರು ೧೧ ಗಂಟೆ ಇರಬಹುದು. ಆಗ ನನ್ನ ಸ್ನೇಹಿತನೊಬ್ಬನು ಬಂದು, ತಾಲಿಬಾನರು ‘ಕಾಬೂಲ್ ವಿಮಾನ ನಿಲ್ದಾಣದಿಂದ ಕೇವಲ ೧೧ ಕಿ. ಮೀ. ದೂರದಲ್ಲಿದ್ದಾರೆ ಎಂಬ ಸ್ಪೋಟಕ ಸುದ್ದಿ ತಿಳಿಸಿದ. ಅಂದು, ನಗರದ ಮಧ್ಯದಲ್ಲಿದ್ದ ನನ್ನ ಮನೆಯಿಂದ ನಾನು ಹೊರಟಾಗ, ಎಂದೂ ನನ್ನ ಪಾಸ್‌ಪೋರ್ಟ್ ತೆಗೆದುಕೊಂಡು ಹೋಗಲು ಮರೆಯದ ನಾನು ಅಂದು ಮರೆತಿದ್ದೆ!! ಹೀಗೆ ಮರೆತದ್ದು ನನಗೇ ಆಶ್ಚರ್ಯ!! ಅಂದು ಮರೆಯದೇ ಹೋಗಿದ್ದರೆ ಆಗಸ್ಟ್ ೧೫ರಂದು ನಾನು ಭಾರತದಲ್ಲಿರಬಹುದಾಗಿತ್ತು!!
u ಆಗಸ್ಟ್ ೧೫ರಂದು ಕಾಬೂಲ್‌ನಿಂದ ನವದೆಹಲಿಗೆ ಬರುವ ವಿಮಾನವು ೧೬೦ ಪ್ರಯಾಣಿಕರಿಂದ ತುಂಬಿಹೋಗಿತ್ತು. ಆರಂಭದಲ್ಲಿ ೩೫ ಪ್ರಯಾಣಿಕರಿಗೆ ತಪಾಸಣೆ ನಡೆಸಿದರೂ, ನಂತರ ಎಲ್ಲರಿಗೂ ಅವಕಾಶ ಮಾಡಿಕೊಟ್ಟರು.
u ನನ್ನ ಸಹೋದ್ಯೋಗಿಗಳು ಅವರವರ ಮೊಬೈಲ್‌ನಿಂದ ಅವರದೇ ಕಟ್ಟಡದ ಮೇಲೆ ಧಾಳಿ ನಡೆಸಲು ಸಿದ್ಧರಾಗಿರುವ ತಾಲಿಬಾನ್ ಸೈನಿಕರನ್ನು ವಿಡೀಯೊ ರೆಕಾರ್ಡ್ ಮಾಡುತ್ತಿರುವುದನ್ನು ತೋರಿಸಿದರು! ನಾನು ರಕ್ಷಣಾಧಿಕಾರಿಯಾಗಿದ್ದುಕೊಂಡು ಮುಖದಲ್ಲಿ ಭಯ ತೋರಿಸುವಂತಿರಲಿಲ್ಲ. ನಾನು ಏನೂ ನಡೆದೇಇಲ್ಲವೆಂಬ ಭಾವವನ್ನು ವ್ಯಕ್ತಪಡಿಸುತ್ತಾ ಎಲ್ಲರಿಗೂ ಮೊಬೈಲ್ ಸ್ವಿಚ್ ಆಫ್ ಮಾಡಲು ಆದೇಶಿಸಿದೆ. ಈ ಮಧ್ಯೆ ಆಗಲೇ ಬರಬೇಕಾಗಿದ್ದ ೩೧ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ!! ನಾನು ಫ್ಲೆöÊಟ್ ಕಮಾಂಡರ್‌ಗೆ ಪ್ರಸ್ತುತ ಪರಿಸ್ಥಿತಿ ತಿಳಿಸುತ್ತಾ ತನ್ನಲ್ಲಿ ಪಾಸ್‌ಪೋರ್ಟ್ ಇಲ್ಲದಿರುವ ವಿಚಾರವನ್ನೂ ತಿಳಿಸಿದೆ. ಆಗ ಆತ ‘ಪರವಾಗಿಲ್ಲ!, ಇದು ತುರ್ತುಪರಿಸ್ಥಿತಿಯಾದ್ದರಿಂದ ತಾನು ನನ್ನನ್ನು ಕರೆದು ಕೊಂಡು ಹೋಗಲು ಸಿದ್ಧ’ ಎಂದ. ನಾನು ‘ಅದು ಸರಿಯಲ್ಲ’ ಎಂದೆ. ಅವನು ‘ಏಕೆ?’ ಎಂದು ಪ್ರಶ್ನಿಸಿದ. ನಾನು ‘ಮನಸ್ಸೊಪ್ಪುತ್ತಿಲ್ಲ! ನೋಡು ನನಗೆ ಅಮಿತಾಬಚ್ಚನ್ ನಟಿಸಿದ ‘ಕಾಲಾ ಪತ್ಥರ್’ ಸಿನೆಮಾ ಜ್ಞಾಪಕಕ್ಕೆ ಬರುತ್ತದೆ. ಅಲ್ಲಿ ಹಡಗಿನ ಕ್ಯಾಪ್ಟನ್ ಆಗಿದ್ದವನು ಪ್ರಯಾಣಿಕರ ಭದ್ರತೆಯತ್ತ ಗಮನಹರಿಸದೇ ಇದ್ದುದರಿಂದ ಕೆಲಸ ಕಳೆದುಕೊಳ್ಳಬೇಕಾಯಿತು. ಆ ಸಂದರ್ಭ ದಲ್ಲಿ ಆತನಿಗೆ ತನ್ನ ಪಾಪಪ್ರಜ್ಞೆ ಕಾಡಿತ್ತು. ಅಧಿಕಾರಿಯಾದವನು, ನಾಯಕನಾದ ವನು ಕರ್ತವ್ಯದ ಜವಾಬ್ದಾರಿಕೆ ನಿರ್ವಹಿಸಬೇಕು. ಉಳಿದವರನ್ನು ಕಷ್ಟಕ್ಕೆ ಸಿಕ್ಕಿಸಿ ತಾನು ಮಾತ್ರ ಅಪಾಯದಿಂದ ಪಾರಾಗುವುದು ನನಗೆ ಬೇಕಿರಲಿಲ್ಲ. ಹಾಗೇನಾದರೂ ಮಾಡಿದ್ದರೆ, ನಂತರ, ಜೀವನ ಪರ್ಯಂತ ‘ಹೇಡಿ’ ಎಂದೆನಿಸಿ ಕೊಳ್ಳಬೇಕಾಗುತ್ತಿತ್ತು’ ಎಂದೆ. ಆಗ ಆ ಕ್ಯಾಪ್ಟನ್ ಹೇಳಿದ ‘ನಿಮ್ಮಿಚ್ಛೆ’!!. ಆಗ ನಾನಂದೆ ‘ದೇವನೊಬ್ಬನಿದ್ದಾನೆ ಎಂದಾದರೆ ಅವನು ನನ್ನನ್ನು ರಕ್ಷಿಸುತ್ತಾನೆ!!’.
u ಪಾಕಿಸ್ತಾನದ ಕ್ವಾತರ್ ಏರ್‌ವೇಸ್ ವಿಮಾನವು ೩೦೦ ಪ್ರಯಾಣಿಕರನ್ನು ತುಂಬಿಕೊAಡು ಹಾರಲು ಹಸಿರು ನಿಶಾನೆಗಾಗಿ ಕಾಯುತ್ತಿತ್ತು. ಕಾಯುವ ಕಾರಣವೇನೆಂದು ಗೊತ್ತಾಗಿರಲಿಲ್ಲ. ಸಂಜೆ ೪.೩೦ಕ್ಕೆ ಭಾರತೀಯ ವಿಮಾನ ಒಂದಕ್ಕೆ ಹಾರಲು ಅವಕಾಶ ಸಿಕ್ಕಿತು. ಭಾರತೀಯ ಕ್ಯಾಪ್ಟನ್ ಆ ಅವಕಾಶವನ್ನು ಮಿಂಚಿನವೇಗದಲ್ಲಿ ಉಪಯೋಗಿಸಿಕೊಂಡರು, ವಿಮಾನ ಹಾರಿತು. ಹೀಗೆ ಹಾರಿದ್ದು ನೋಡಿ ನಾನು ಸಮಾಧಾನದ ನಿಟ್ಟುಸಿರುಬಿಟ್ಟೆ. ಆ ಕ್ಷಣದಲ್ಲಿ ತಾಲಿಬಾನ್ ಧಾಳಿಕೋರರು ವಿಮಾನ ನಿಲ್ದಾಣವನ್ನು ಆವರಿಸಿಕೊಂಡು ಗುಂಡಿನ ಮಳೆಗೆರೆಯಲಾರಂಭಿಸಿದರು. ಆಗಲೇ ನಮಗೆಲ್ಲರಿಗೂ ‘ವಿಮಾನ ನಿಲ್ದಾಣ ಬಿಡಬಾರದೆಂಬ’ ಸಂದೇಶ ಬಂದಿತು. ನೋಡನೋಡುತ್ತಿದ್ದಂತೆ ನನ್ನ ಕಾರ್ ಡ್ರೆöÊವರ್ ಎತ್ತಲೋ ಓಡಿಹೋಗಿಬಿಟ್ಟ. ಸ್ನೇಹಿತರೆಲ್ಲಾ ಮಾಯಾವಾಗಿ ಹೋದರು ! ಅದೃಷ್ಟವಶಾತ್ ಭಾರತೀಯ ದೂತವಾಸದ ಅಧಿಕಾರಿಯೊಬ್ಬರು ನನ್ನನ್ನು ಕರೆದು ಡ್ರೆöÊವರ್ ಸಹಿತ ಬುಲ್ಲೆಟ್ ಪ್ರೂಫ್ ಕಾರ್ ಕೊಟ್ಟು ೫ ಕಿ. ಮೀ. ದೂರದ ಭಾರತೀಯ ದೂತವಾಸ ಕಟ್ಟಡಕ್ಕೆ ದಾರಿಯಲ್ಲಿ ಎಲ್ಲೂ ನಿಲ್ಲದೆ ಅತ್ಯಂತ ರಭಸದಲ್ಲಿ ಹೋಗಲು ಆದೇಶಿಸಿದರು. ಮುಂದೆ ಹಸಿರು ವಲಯ ತಲುಪುತ್ತಿದ್ದಂತೆ ನಿಟ್ಟುಸಿರು ಬಿಟ್ಟೆ. ಕಾಬೂಲ್‌ನ ಹಸಿರು ವಲಯ ಅತ್ಯಂತ ಸುರಕ್ಷಿತ ವಲಯವಾಗಿದ್ದು, ಅಲ್ಲಿ ಪ್ರಪಂಚದ ವಿವಿಧ ಭಾಗಗಳ ಅತ್ಯಂತ ಮೇಲ್ದರ್ಜೆಯ ಅಧಿಕಾರಿಗಳು ವಾಸಿಸುವ ಸ್ಥಳವಾಗಿದೆ. ಆದರೆ ಅಂದು ಮಾತ್ರ ರಕ್ಷಕರೇ ಇಲ್ಲದ ನಿರ್ಜನ ಪ್ರದೇಶವಾಗಿತ್ತು. ಆಗ ಸಂಜೆ ೬.೩೦ ಆಗಿತ್ತು. ಆಗಲೇ ನಾನು ಕಾಬೂಲ್ ನಗರದಲ್ಲಿದ್ದ ನನ್ನ ಮನೆಗೆ ಹೋಗಿ ‘ಪಾಸ್‌ಪೋರ್ಟ್’ ತರುವ ನಿರ್ಧಾರ ಮಾಡಿದೆ. ಆ ಪಾಸ್‌ಪೋರ್ಟ್ನ ಆಧಾರದಿಂದ ನಾನು ಅಮೇರಿಕಾ, ಕೆನಡಾ ಮತ್ತು ಯುಕೆಗೆ ಪ್ರಯಾಣಿಸ ಬಹುದಿತ್ತು. ಆ ಪಾಸ್‌ಪೋರ್ಟ್ ಬಿಟ್ಟು ಹೋದ ಪಕ್ಷದಲ್ಲಿ ಪುನಃ ಪಡೆಯು ವುದು ಕನಸಿನ ಮಾತಾಗಿತ್ತು. ಆ ಸಂದರ್ಭದಲ್ಲಿ ಸ್ನೇಹಿತನೊಬ್ಬನ ಸಹಾಯ ದಿಂದ ಕಾರೊಂದನ್ನು ಪಡೆದೆ. ಆತನ ಕಾರಿನಲ್ಲಿ ಮೂವರು ನಂಬಿಕಸ್ಥ ಅಫ್ಘಾನ್ ರನ್ನು ಒದಗಿಸಿದ. ಆತ ಜಲಾಲಾಬಾದ್‌ನ ಮಝೂರ್-ಇ-ಶರೀಫ್ ಆಗಿದ್ದ.
u ಅಂದು ಸಂಜೆ ೭.೩೦, ನಾನು ನನ್ನ ಕಟ್ಟಡ ಪ್ರವೇಶಿಸಿದೆ. ಕಟ್ಟಡದ ಮಾಲೀಕ ಹೇಳಿದ, “ನೋಡು ತಾಲಿಬಾನರು ಯಾವುದೇ ಕ್ಷಣದಲ್ಲಿ ಈ ಕಟ್ಟಡವನ್ನು ಆಕ್ರಮಿಸಬಹುದು. ನಾನೂ ಕಟ್ಟಡ ಬಿಡಬೇಕಾಗಬಹುದು. ನಿನಗೆ ಹದಿನೈದು ನಿಮಿಷ ಕೊಡುತ್ತೇನೆ. ಅಷ್ಟರೊಳಗೆ ನೀನಿಲ್ಲಿಂದ ಹೋಗಿಬಿಡಬೇಕು” ಎಂದ. ನಾನು ಪಾಸ್‌ಪೋರ್ಟ್ ತೆಗೆದುಕೊಂಡೆ. ಆದರೆ ನನ್ನ ಅನೇಕ ಅಮೂಲ್ಯ ವಸ್ತುಗಳನ್ನು ಅಲ್ಲಿ ಬಿಟ್ಟೆ. ಅಂತಹ ಭೀಕರ ತುರ್ತು ಸಂದರ್ಭದಲ್ಲಿ ನನ್ನ ಹೃದಯ ಮತ್ತು ಬುದ್ಧಿ ಹೊಂದಿಕೊAಡು ಒಟ್ಟಾಗಿ ಕೆಲಸ ಮಾಡುವ ಸ್ಥಿತಿಯಲ್ಲಿರಲಿಲ್ಲ. ಹೃದಯವೂ ಬುದ್ಧಿಯೂ ಮರಗಟ್ಟಿಹೋಗಿತ್ತು !! ಆ ಸಂದರ್ಭದಲ್ಲಿ ನನಗೆ ಕಾಣುತ್ತಿದ್ದ ವ್ಯಕ್ತಿಗಳೆಲ್ಲಾ ತಾಲಿಬಾನರೇ ಆಗಿರುತ್ತಿದ್ದರು. ಜನಸಾಮಾನ್ಯರೆಲ್ಲರೂ ಗಾಬರಿ, ಭಯ, ಆತಂಕ, ದುಃಖದಿಂದ ಓಡಾಡುತ್ತಿ ದ್ದರು. ನಾನು ನನ್ನ ಡ್ರೆöÊವರ್‌ನನ್ನು ‘ಅವರೆಲ್ಲರೂ ಏನು ಮಾಡ್ತಿದ್ದಾರೆ’ ಎಂದು ಪ್ರಶ್ನಿಸಿದೆ. ಡ್ರೆöÊವರ್ ನನಗೆ, ‘ಬಾಯಿ ಮುಚ್ಚಿರಿ’ ಎಂದು ದಬಾಯಿಸಿದ!! ನಂತರ, ನಾನು ಭಾರತೀಯ ದೂತವಾಸ ತಲಪುವವರೆಗೆ ಬಾಯಿ ಮುಚ್ಚಿ ಕೂತೆ. ಆದರೆ, ಆ ಸಂದರ್ಭದಲ್ಲಿ ನನ್ನ ಕುಲದೇವತೆಯನ್ನು ಮನದಲ್ಲಿ ಎಡೆಬಿಡದೆ ಪ್ರಾರ್ಥಿಸುತ್ತಿದ್ದೆ!!. ನನ್ನ ರಕ್ತದೊತ್ತಡ ಏರಿಹೋಯಿತು. ದಾರಿಯಲ್ಲಿ ಕೆನೆಡಿಯನ್ ದೂತವಾಸದ ಎದುರು ನಮ್ಮನ್ನು ತಾಲಿಬಾನರು ತಡೆದರು!!
u ಹಾಗೆ ತಡೆದಾಗ ಅವರು ೧೫ ಮಂದಿ ಇದ್ದರು. ಅವರ ಕೈಯಲ್ಲಿ ಕೋವಿ, ರಾಕೆಟ್ ಲಾಂಚರ್‌ಗಳಿದ್ದವು. ಆಗ ರಾತ್ರಿ ೮.೩೦ರ ಸಮಯ. ಆ ಸಂದರ್ಭದಲ್ಲಿ ನಾನು ನನ್ನ ಪರ್ಸ್ನಿಂದ ಹೆಂಡತಿಯ, ಮಕ್ಕಳ ಫೋಟೋ ತೆಗೆದು ನೋಡಿಕೊಂಡಾಗ, ‘ಬಹುಶಃ ಇದುವೇ ನನ್ನ ಆಖೈರಿ ನೋಟ ಇರಬಹುದೇನೋ’ ಎಂದೆನಿಸಿತು. ಹಾಗೆ ನೋಡಿದರೆ ನನಗೆ ತಾಲಿಬಾನರ ಹೆದರಿಕೆ ಇರಲಿಲ್ಲ. ಆದರೆ, ಐಎಸ್‌ಐಎಸ್ ಹೆದರಿಕೆ ಇತ್ತು. ಇದಕ್ಕೆ ಕಾರಣವಿದೆ., ಈ ಮೊದಲು ರಾಯ್ಟರ್ ಸಂಸ್ಥೆಯ ಸುಪ್ರಸಿದ್ಧ ಫೋಟೋಗ್ರಾಫರ್ ಡೇನಿಶ್ ಸಿದ್ದಿಕಿಗೆ ಆದ ಗತಿಯೇ ನನಗಾಗಬಹುದು ಎಂದು ಭಾವಿಸಿದ್ದೆ. ಆ ಸಂದರ್ಭದಲ್ಲಿ ನನ್ನೊಡನಿದ್ದ ಮೂವರು ಅಫ್ಘಾನ್ ಸ್ನೇಹಿತರು ದೇವರೇ ನನ್ನ ರಕ್ಷಣೆಗಾಗಿ ಕಲ್ಪಿಸಿಕೊಟ್ಟ ದೇವದೂತರು ಎಂದು ಭಾವಿಸಿಕೊಂಡೆ. ಅವರು ತಾಲಿಬಾನರೊಡನೆ ಅತ್ಯಂತ ನಯವಾಗಿ ಸೌಹಾರ್ದದಿಂದ ಮಾತಾಡಿದರು. ಆಗ ರಾತ್ರಿಯಾಗಿದ್ದುದರಿಂದ ಅವರಿಗೆ ನನ್ನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಆದುದರಿಂದ ನಾನು ಭಾರತೀಯ ಎಂದು ಅವರಿಗೆ ಗೊತ್ತಾಗಲಿಲ್ಲ. ಕಾರನ್ನು ಬಹುಶಃ ಇಪ್ಪತ್ತು ನಿಮಿಷಗಳ ಕಾಲ ತಡೆಹಿಡಿದದ್ದಿರಬೇಕು. ಆದರೆ, ನನಗೆ ಮಾತ್ರ ಆ ಅವಧಿಯü ಪ್ರತಿ ಘಳಿಗೆಯೂ ಜೀವನ್ಮರಣದ ಅವಧಿಯಾಗಿ ಕಾಣುತ್ತಿತ್ತು. ನಾನು ಆ ಸಮಯದಲ್ಲಿ, ವಾಹನದೊಳಗೆ ಕುಳಿತಿದ್ದರೂ ಮುಳ್ಳಿನ ಮೇಲೆ ಕುಳಿತವನಂತಿದ್ದೆ., ಮಾತ್ರವಲ್ಲ ಇಲ್ಲೇ ನನ್ನ ಕೊನೇ ಉಸಿರು ನಿಂತುಬಿಡುವುದೇನೋ ಎಂದು ಭಾವಿಸಿದ್ದೆ. ಅಫ್ಘಾನರು ಹೀಗೆ ತಾಲಿಬಾನರೊಡನೆ ಮಾತನಾಡುತ್ತಿರುವಾಗ ತಾಲಿಬಾನ ನೊಬ್ಬ ಆಕಾಶಕ್ಕೆ ಗುಂಡು ಹಾರಿಸಿದ. ಆಗ ಬೆಚ್ಚಿಬಿದ್ದ ನಾನು ಆ ಗುಂಡು ನನಗೇ ತಾಗಿದಂತೆ ಭಾವಿಸಿಕೊಂಡು ಬೆವತುಹೋದೆ ! ನಮ್ಮ ಡ್ರೆöÊವರ್ ತಾಲಿಬಾನರೊಡನೆ ಮಾತನಾಡುತ್ತಲೇ ಇದ್ದ. ಅಷ್ಟರಲ್ಲಿ, ಫಕ್ಕನೆ ತಾಲಿಬಾನ್ ಕಮಾಂಡರ್‌ನನ್ನು ಒಳಗೊಂಡ ತಂಡವೊAದು ಅಲ್ಲಿಗೆ ಬಂದಿತು. ಅವರಲ್ಲೊಬ್ಬ ‘ಪಾಸ್ಟೊçÃ’ ಭಾಷೆಯಲ್ಲಿ ‘ಬರ‍್ರೋ’ ಎಂದು ಜೋರಾಗಿ ಅಧಿಕಾರಯುಕ್ತನಾಗಿ ಆದೇಶಿಸಿದ. ಈ ಜೋರಾದ ಆದೇಶವನ್ನು ನಾನು ಜೀವಮಾನದಲ್ಲಿ ಮರೆಯು ವಂತಿಲ್ಲ. ‘ಬರ‍್ರೋ’ ಎಂದರೆ ‘ಬಿಟ್ಟುಬಿಡು ಹೋಗಲಿ’ ಎಂದರ್ಥವAತೆ!! ಆ ಆದೇಶ ಬರುತ್ತಿದ್ದಂತೆ ಡ್ರೆöÊವರ್ ನಮ್ಮ ಕಾರನ್ನು ಅಲ್ಲಿಂದ ಹಾರಿಸಿ ವಾಯುವೇಗದಲ್ಲಿ ಭಾರತೀಯ ದೂತಾವಾಸಕ್ಕೆ ತಂದು ಮುಟ್ಟಿಸಿದ.
u ದೂತಾವಾಸ ತಲಪಿದ ತಕ್ಷಣ ಹಸಿದು ಕಂಗಲಾಗಿದ್ದ ನಾನು ಗಡದ್ದಾಗಿ ಊಟ ಮಾಡಿದೆ. ನಿದ್ರಿಸಲು ಯತ್ನಿಸಿದೆ., ನಿದ್ರೆ ಬರಲಿಲ್ಲ! ಆಗಲೂ ನಾನು ಮುಂದೆ ಬೃಹತ್ ತಡೆಯೊಂದನ್ನು ದಾಟಬೇಕಾಗುತ್ತ ದೆಂಬ ಅರಿವು ನನಗೆ ಬಂದಿರಲಿಲ್ಲ.
u ಅಂದು ಆಗಸ್ಟ್ ೧೬, ನಾವು ದೂತಾವಾಸದಲ್ಲಿದ್ದೆವು. ತಾಲಿಬಾನರು ನಾವಿರುವ ದೂತಾವಾಸಕ್ಕೆ ಹೊರಗಿನಿಂದ ಯಾರೂ ಒಳಬಾರದಂತೆ ಮತ್ತು ಒಳಗಿನಿಂದ ಯಾರೂ ಹೊರಹೋಗದಂತೆ ಪರಿಸ್ಥಿತಿ ನಿರ್ಮಿಸಿಬಿಟ್ಟಿದ್ದರು. ಇದರ ಪರಿಣಾಮವಾಗಿ ಕಾಬೂಲ್‌ನಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬರದೆ ನಮಗೆ ಬಿಡುಗಡೆ ಸಿಗಲಾರದೇನೋ ಎಂದೆನಿಸಿಬಿಟ್ಟಿತ್ತು. ನಾನು ಆಗಸ್ಟ್ ೧೬ರಂದು ನನ್ನ ಹೆಂಡತಿ, ಮಕ್ಕಳಿಗೆ ನನ್ನ ಕ್ಷೇಮ ಸಮಾಚಾರದ ಸಂದೇಶ ಕಳುಹಿಸಿದೆ. ಅದೇ ರಾತ್ರಿ ೯.೩೦ಕ್ಕೆ ‘ನಾವು ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗ ಬಹುದು’ ಎಂಬ ಸಂದೇಶವು ನಮಗೆ ತಾಲಿಬಾನರಿಂದಲೇ ಬಂದಿತು. ಅದೇ ರಾತ್ರಿ ೧೦ಕ್ಕೆ ನಾವು ವಿಮಾನ ನಿಲ್ದಾಣಕ್ಕೆ ಹೊರಟಾಗ ತಾಲಿಬಾನರು ನಮ್ಮನ್ನು ‘ಇನ್ನೊಂದು ಗ್ರಹದಿಂದ ಬಂದ ವಿಚಿತ್ರ ಮಾನವ’ರಂತೆ ನೋಡಿದರು.
u ನಮ್ಮೆಲ್ಲರನ್ನು ಸಾಗಿಸಲು ನಾಲ್ಕು ವಾಹನಗಳಿದ್ದವು. ಒಂದು ತಾಲಿಬಾನ್ ವಾಹನವು ನಮ್ಮ ರಕ್ಷಣೆಗಾಗಿ ಏರ್ಪಾಡಾಗಿತ್ತು. ರಕ್ಷಣಾ ವಾಹನವು ಮುಂದೆ, ಅದರ ಹಿಂದೆ ನಮ್ಮ ವಾಹನಗಳು. ಈ ವಾಹನಗಳಲ್ಲಿ ಒಟ್ಟಾಗಿ ೨೦ ರಕ್ಷಕರು ಮತ್ತು ನಾವು ೧೫೦ ಮಂದಿ ಭಾರತೀಯರಿದ್ದೆವು. ನಾವಿದ್ದ ಸ್ಥಳದಿಂದ ವಿಮಾನ ನಿಲ್ದಾಣಕ್ಕೆ ಕೇವಲ ೨೦ ನಿಮಿಷಗಳ ಪ್ರಯಾಣಾವಧಿ. ಆದರೆ ನಾವು ತೆಗೆದುಕೊಂಡ ಸಮಯ ೫ ಗಂಟೆ. ಆ ಮಧ್ಯರಾತ್ರಿಯಲ್ಲಿ ಮಾಡಿದ ಪ್ರಯಾಣವಿದೆಯಲ್ಲಾ ಅದು ನನ್ನ ಜೀವಮಾನದಲ್ಲಿ ಮಾಡಿದ ಅತಿ ಕೆಟ್ಟ ಪ್ರಯಾಣವಾಗಿತ್ತು. ಪ್ರತಿ ಘಳಿಗೆ ಘಳಿಗೆಗೆ ಅಫ್ಘಾನರು ನಮ್ಮನ್ನು ಇಣುಕಿ ಇಣುಕಿ ನೋಡುತ್ತಿದ್ದರು. ತಾಲಿಬಾನರು ಆಗಾಗ ಆಕಾಶಕ್ಕೆ ಗುಂಡು ಹಾರಿಸಿ ಜನರನ್ನು ಚದುರಿಸುತ್ತಿದ್ದರು. ಹೀಗೆ, ತಾಲಿಬಾನರ ವರ್ತನೆ ಗಮನಿಸಿದಾಗ ಇವರು ಒಳ್ಳೆಯ ತಾಲಿಬಾನರೋ ಕೆಟ್ಟವರೋ ಎಂದು ಗೊತ್ತಾಗದೆ ಗೊಂದಲಕ್ಕೆ ಒಳಗಾಗುತ್ತಿದ್ದೆ. ಆದರೂ ತಾಲಿಬಾನರು ನಮ್ಮೊಡನೆ ಚೆನ್ನಾಗಿಯೇ ಇದ್ದರು. ಅಂತೂ-ಇAತೂ ಮಧ್ಯರಾತ್ರಿ ೨ ಗಂಟೆಗೆ ನಾವು ವಿಮಾನ ನಿಲ್ದಾಣ ತಲಪಿದೆವು.
u ನಾವು ಟರ್ಕೀಶ್ ಗೇಟ್‌ಗಾಗಿ ನಿಲ್ದಾಣದೊಳಗೆ ಪ್ರವೇಶಿಸಿದೆವು. ಉಳಿದೆಲ್ಲಾ ಪ್ರವೇಶದ್ವಾರಗಳನ್ನು ಅಫ್ಘಾನರು ಆಕ್ರಮಿಸಿಬಿಟ್ಟಿದ್ದರು. ಅವರು ಹೇಗಾದರೂ ಸರಿ ಕಾಬೂಲ್ ಬಿಟ್ಟು ಹೋಗಿಬಿಡಬೇಕೆಂದು ಬಯಸಿದಂತೆ ಕಾಣುತ್ತಿತ್ತು. ಆದರೆ, ವಿಮಾನ ನಿಲ್ದಾಣ ಮುಚ್ಚಿಬಿಟ್ಟಿದ್ದರು. ತಾಲಿಬಾನರು ನಮ್ಮನ್ನು ಟರ್ಕೀಶ್ ಸೈನಿಕರಿಗೆ ಒಪ್ಪಿಸಿದರು. ಟರ್ಕೀಶ್ ಸೈನಿಕರು ನಮ್ಮ ಪ್ರತಿಯೊಬ್ಬರನ್ನು ಅತ್ಯಂತ ಸೂಕ್ಷö್ಮವಾಗಿ ಪರಿಶೀಲಿಸಿ ಅಮೇರಿಕನ್ ಸೈನಿಕರಿಗೆ ಒಪ್ಪಿಸಿದರು. ಅವರೂ ಸಹ ನಮ್ಮನ್ನು ಮತ್ತೆ ಪರೀಕ್ಷಿಸಿದರು. ನಂತರ ಅದೇ ರಾತ್ರಿ-ಬೆಳಗ್ಗೆ ಎಂದರೆ ೩.೩೦ಕ್ಕೆ ಕಾಬೂಲ್ ವಿಮಾನ ನಿಲ್ದಾಣ ದೊಳಗೇ ಇರುವ ಅಮೇರಿಕಾ ವಾಯುನಿಲ್ದಾಣಕ್ಕೆ ನಮ್ಮನ್ನು ಕರಕೊಂಡು ಹೋದರು. ಆ ಸಂದರ್ಭದಲ್ಲಿ ಭಾರತೀಯ ಪ್ರತಿನಿಧಿಗಳು ಅಮೇರಿಕಾ ಮಿಲಿಟರಿ ಅಧಿಕಾರಿಗಳೊಡನೆ ಮಾತುಕತೆ ನಡೆಸುತ್ತಿದ್ದರು. ಬೆಳಗ್ಗೆ ೪ ಗಂಟೆಗೆ ಭಾರತೀಯ ವಿಮಾನವು ನಿಲ್ದಾಣಕ್ಕೆ ಬಂದಿತು. ನಮಗೆಲ್ಲರಿಗೂ ಅದರೊಳಗೆ ಪ್ರವೇಶಿಸಲು ಅನುಮತಿ ಸಿಕ್ಕಿತು. ಅದರ ಜೊತೆಯಲ್ಲಿ ಬೆಳಗ್ಗೆ ೬ ಗಂಟೆಯೊಳಗೆ ಹಾರಿಹೋಗಬೇಕೆಂಬ ಆದೇಶವೂ ದೊರೆಯಿತು! ಆ ಆದೇಶ ಬಂದಾಗ ನಮಗಾದ ಆನಂದ ವರ್ಣನಾತೀತ.
ಈ ಸಂದರ್ಭದಲ್ಲಿ ನಾನು ಹೃದಯ ತುಂಬಿ ಭಾರತೀಯ ಸರಕಾರವನ್ನು ಅಭಿನಂದಿಸುತ್ತೇನೆ. ಭಾರತೀಯರನ್ನು ಕಾಬೂಲ್‌ನಿಂದ ಕರೆತರುವಲ್ಲಿ ಜವಾಬ್ದಾರಿಕೆ ಹೊತ್ತ ಅಧಿಕಾರಿಗಳು ಮಾಡಿದ ಪ್ರಯತ್ನ, ಪ್ರತಿ ಘಳಿಗೆಘಳಿಗೆಗೆ ಬರುವ ಅಡ್ಡಿ ಅಡಚಣೆಗಳನ್ನು ನಿವಾರಿಸಿಕೊಂಡ ಕ್ರಮಗಳು ಅತ್ಯಂತ ಕರಾರುವಕ್ಕಾಗಿ ಇರುತ್ತಿದ್ದವು. ಕಾಬೂಲ್ ವಿಮಾನ ನಿಲ್ದಾಣದಿಂದ ನಮ್ಮ ಪ್ರಯಾಣ ಆರಂಭವಾದಾಗ ನಮ್ಮ ಪ್ರಯಾಣವು ತಜಾಕಿಸ್ತಾನ್, ಇರಾನ್‌ಗಾಗಿ ಗುಜರಾತ್‌ನ ಜಾಮನಗರದಲ್ಲಿ ಮುಕ್ತಾಯವಾಯಿತು. ನಾವು ಕಾಬೂಲ್ ಬಿಟ್ಟಾಗ ಬೆಳಗ್ಗೆ ೫.೩೦ ಆಗಿತ್ತು. ಜಾಮನಗರದಲ್ಲಿ ಭೂಸ್ಪರ್ಶ ಮಾಡಿದಾಗ ೧೧.೩೦ ಆಗಿತ್ತು. ಭಾರತೀಯ ವಾಯುದಳದ ಪೈಲೆಟ್ ‘ನಾವೀಗ ಜಾಮನಗರದಲ್ಲಿದ್ದೇವೆ’ ಎಂದು ಘೋಷಿಸಿದಾಗ ನನ್ನ ಮನಸ್ಸಿನಲ್ಲಿ ಬಂದ ವಿಚಾರವೆಂದರೆ ಈ ಹಿಂದೆ ಗಗನಯಾತ್ರಿ ರಾಕೇಶ್ ಶರ್ಮ ಆಗಿನ ಪ್ರಧಾನಿ ಇಂದಿರಾಗಾAಧಿಗೆ ‘ಸಾರೇ ಜಹಾಂಸೆ ಅಚ್ಛಾ ಹಿಂದೂಸ್ಥಾನ ಹಮಾರ’ ಎಂದು ಹಾಡಿದ ಹಾಡಿನ ನೆನಪಾಯಿತು. ವಿಮಾನದಿಂದ ಇಳಿದು ಭೂಸ್ಪರ್ಶವಾದೊಡನೆ ಭಾವುಕನಾಗಿ ಭೂತಾಯಿಯ ಮೇಲೆ ಮಲಗಿ ಸಾಷ್ಟಾಂಗ ನಮಸ್ಕರಿಸಿ ಆಕೆಗೆ ಭಕ್ತಿ ಗೌರವದಿಂದ ಚುಂಬಿಸಿದೆ. ಭಾರತ್ ಮಾತಾಕಿ ಜೈ.
-ಜಿ. ಟಿ. ರಾಘವೇಂದ್ರ, ಮಡಿಕೇರಿ., ೯೪೮೦೪೬೩೦೯೦