ಮಡಿಕೇರಿ, ಸೆ. ೪: ಮಡಿಕೇರಿ ನಿವಾಸಿ ಪಾಡಿಚೆಟ್ಟಿರ ವರುಣ್ ಉತ್ತಪ್ಪ ದಂಪತಿಯ ಪುತ್ರ ನಿಹಾನ್ ಉತ್ತಪ್ಪ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ. ೨ ವರ್ಷ, ೩ ತಿಂಗಳು ಪ್ರಾಯದ ನಿಹಾನ್ ೧೦ ದೇವರ ಹೆಸರುಗಳು, ದೇಹದ ೩೭ ಅಂಗಗಳ ಹೆಸರು, ೧೨ ಆಕೃತಿಗಳು, ೧೭ ಬಣ್ಣಗಳ ಹೆಸರು, ೬೧ ಪ್ರಾಣಿಗಳ ಹೆಸರು, ೧೨ ಕೀಟಗಳ ಹೆಸರು, ೩೨ ವಾಹನಗಳ ಹೆಸರು, ೨೩ ರೀತಿಯ ಪಕ್ಷಿಗಳು, ೨೦ ಕ್ರೀಡೆಗಳು, ೨೦ ಹಣ್ಣುಗಳು ಹಾಗೂ ೨೮ ತರಕಾರಿಗಳನ್ನು ಗುರುತಿಸುವುದಲ್ಲದೆ, ೮ ರಾಷ್ಟಿçÃಯ ಚಿಹ್ನೆಗಳು, ಬೆರಳುಗಳ ಹೆಸರು, ೩೫ ವಿರುದ್ಧಾರ್ಥಕ ಪದಗಳ ಉಚ್ಚರಣೆ, ೩೮ ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರ ನೀಡುವುದಲ್ಲದೆ ಇನ್ನಷ್ಟು ಸಾಧನೆ ಮಾಡಿದ್ದಾನೆ.
ನಿಹಾನ್ನನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಗುರುತಿಸಿ ಪ್ರಶಂಸನಾ ಪತ್ರ ಹಾಗೂ ಪದಕ ನೀಡಲಾಗಿದೆ.