ಮಡಿಕೇರಿ, ಸೆ. ೬: ಇತ್ತೀಚೆಗೆ ಮುಕ್ತಾಯಗೊಂಡ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿರುವ ಕೊಡಗು ಜಿಲ್ಲೆಯ ಮೂಲದವರಾದ ಇನ್ನಿಬ್ಬರು ಕ್ರೀಡಾ ಸಾಧಕರನ್ನು ಸರಕಾರದ ಮೂಲಕ ಸನ್ಮಾನಿಸಿ ಗೌರವಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಮನವಿ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬAಧಿಸಿದAತೆ ರಾಜ್ಯದ ಕ್ರೀಡಾ ಸಚಿವರಾಗಿರುವ ಕೆ.ಸಿ. ನಾರಾಯಣ ಗೌಡ ಅವರಿಗೆ ಸುನಿಲ್ ಪತ್ರ ಬರೆದು ಗಮನ ಸೆಳೆದಿದ್ದಾರೆ. ಒಲಂಪಿಕ್ಸ್ನಲ್ಲಿ ಕೊಡಗಿನ ಮೂವರು ಪಾಲ್ಗೊಂಡಿದ್ದಾರೆ. ಇವರಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಬಿ.ಎಸ್. ಅಂಕಿತಾ ಅವರನ್ನು ಸರಕಾರದ ಮೂಲಕ ಈಗಾಗಲೇ ಗೌರವಿಸಿರುವುದು ಸಂತಸದ ವಿಚಾರ. ಇದರಂತೆ ಭಾರತ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ಭಾರತೀಯ ಸೇನೆಯಲ್ಲಿರುವ ಕೊಡಗಿನವರಾದ ಸುಬೇದಾರ್ ಸಿ.ಎ. ಕುಟ್ಟಪ್ಪ ಹಾಗೂ ಸೇಯ್ಲಿಂಗ್ ಕ್ರೀಡೆ ಸ್ಪರ್ಧಿಸಿರುವ ಕೇಳಪಂಡ ಸಿ. ಗಣಪತಿ ಅವರುಗಳನ್ನು ಕೂಡ ರಾಜ್ಯ ಸರಕಾರದ ಮೂಲಕ ಗೌರವಿಸುವ ಮೂಲಕ ಈ ಕ್ರೀಡಾಪಟುಗಳಿಗೂ ಪ್ರೋತ್ಸಾಹ ನೀಡಬೇಕೆಂದು ಸುನಿಲ್ ಸುಬ್ರಮಣಿ ಕ್ರೀಡಾ ಸಚಿವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ‘ಶಕ್ತಿ’ ಇತ್ತೀಚೆಗೆ ಬೆಳಕು ಚೆಲ್ಲಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.