ಮಡಿಕೇರಿ, ಸೆ. ೬: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಮಾಡುವ ವಾರ್ಷಿಕ ಗೌರವ ಮಡಿಕೇರಿ, ಸೆ. ೬: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಮಾಡುವ ವಾರ್ಷಿಕ ಗೌರವ ಪಾರ್ವತಿ ಅಪ್ಪಯ್ಯ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಪರಿಸ್ಥಿತಿ ಇದ್ದ ಹಿನ್ನೆಲೆ ಕಳೆದ ವರ್ಷ ಪ್ರಶಸ್ತಿ ನೀಡಲಾಗಲಿಲ್ಲ. ಈ ಹಿನ್ನೆಲೆ ೨ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ತಾ.೧೨ ರಂದು ಮಕ್ಕಂದೂರು ಕೊಡವ

(ಮೊದಲ ಪುಟದಿಂದ) ಸಮಾಜದಲ್ಲಿ ಆಯೋಜಿಸಲಾಗಿದೆ. ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಬಡಕಡಮ್ಮಂಡ ಕಸ್ತೂರಿ ಗೋವಿಂದಮಯ್ಯ, ಜಾನಪದ, ಕಲಾಕ್ಷೇತ್ರದಲ್ಲಿ ದಿ.ಕಾಮೆಯಂಡ ಸಿ. ಅಯ್ಯಣ್ಣ, ಬೊಟ್ಟೋಳಂಡ ಕಾಳಿ ಅಚ್ಚಯ್ಯ ಸಂಶೋಧನ ಕ್ಷೇತ್ರದಲ್ಲಿ ಕಂಬೀರAಡ ಕಾವೇರಿ ಪೊನ್ನಪ್ಪ, ಭಾಷ, ಶಿಲ್ಪಕಲಾ ಕ್ಷೇತ್ರದಲ್ಲಿ ಅಪ್ಪನೆರವಂಡ ಕಿರಣ್ ಸುಬ್ಬಯ್ಯ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಾರ್ಷಿಕ ಪುಸ್ತಕ ಪ್ರಶಸ್ತಿಗೆ ‘ಪೊಂಜAಗ್’ ಕವನ ಸಂಕಲನಕ್ಕೆ ಬಾಚರಣಿಯಂಡ ಪಿ. ಅಪ್ಪಣ್ಣ, ರಾಣು ಅಪ್ಪಣ್ಣ, ‘ಮಹಾವೀರ ಅಚ್ಚುನಾಯಕ’ ಕಾದಂಬರಿಗೆ ಕಾಡ್ಯಮಾಡ ರೀಟಾ ಬೋಪಯ್ಯ, ‘ಬದ್‌ಕ್ ಪಿಂಞ ದೇಚವ್ವ’ ನಾಟಕ ಪುಸ್ತಕಕ್ಕೆ ಅಡ್ಡಂಡ ಸಿ. ಕಾರ್ಯಪ್ಪ, ‘ನಾಡ ಪೆದ ಆಶಾ’ ಕಾದಂಬರಿಗೆ ನಾಗೇಶ್ ಕಾಲೂರು, ‘ನಂಗದಾರ್ ಕೊಡವ’ ಪುಸ್ತಕಕ್ಕೆ ಮಾಳೇಟಿರ ಸೀತಮ್ಮ ವಿವೇಕ್, ‘ನಾಟಕ ರಂಗ’ ಪುಸ್ತಕಕ್ಕೆ ಉಳುವಂಗಡ ಕಾವೇರಿ ಉದಯ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿ ಪಡೆದವರಿಗೆ ತಲಾ ರೂ. ೫೦ ಸಾವಿರ, ಪುಸ್ತಕ ಪ್ರಶಸ್ತಿ ಪಡೆದವರಿಗೆ ತಲಾ ರೂ. ೨೫ ಸಾವಿರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮ ಸಂಚಾಲಕ, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಬಬ್ಬಿರ ಸರಸ್ವತಿ, ಮಾಚಿಮಾಡ ಜಾನಕಿ ಮಾಚಯ್ಯ, ಮಕ್ಕಂದೂರು ಕೊಡವ ಸಮಾಜದ ಕಾರ್ಯದರ್ಶಿ ಅಂಚೆಟ್ಟೀರ ಮನು ಮುದ್ದಪ್ಪ ಇದ್ದರು.