ಸೋಮವಾರಪೇಟೆ, ಸೆ.೬: ಇಲ್ಲಿನ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಮತ್ತು ೩ರಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಎರಡೂ ವಾರ್ಡ್ನಲ್ಲಿ ಕಮಲ ಅರಳಿದೆ. ವಾರ್ಡ್ ೧ರ ಬಸವೇಶ್ವರ ರಸ್ತೆಯಲ್ಲಿ ಬಿಜೆಪಿಯ ಮೃತ್ಯುಂಜಯ ಹಾಗೂ ವಾರ್ಡ್ ೩ರ ವೆಂಕಟೇಶ್ವರ ಬಡಾವಣೆಯಲ್ಲಿ ಬಿಜೆಪಿಯ ಮೋಹಿನಿ ಅವರುಗಳು ಅತ್ಯಧಿಕ ಮತಗಳಿಸಿ ಜಯಶೀಲರಾಗಿದ್ದಾರೆ.

ಕಳೆದ ತಾ.೩ರಂದು ಪಟ್ಟಣದ ಎಸ್‌ಜೆಎಂ ಹಾಗೂ ಬೇಳೂರು ಶಾಲೆಯ ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಇಂದು ಇಲ್ಲಿನ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಬೆಳಿಗ್ಗೆ ೮ ಗಂಟೆಗೆ ಮತ ಎಣಿಕೆ ಪ್ರಾರಂಭವಾಯಿತು.

ವಾರ್ಡ್ ೧ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮೃತ್ಯುಂಜಯ ಅವರು ಬೆಳಿಗ್ಗೆ ೮ ಗಂಟೆಗೆ ಮತ ಎಣಿಕೆ ಪ್ರಾರಂಭವಾಯಿತು.

ವಾರ್ಡ್ ೧ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮೃತ್ಯುಂಜಯ ಅವರು ನೋಟಾಕ್ಕೆ ಚಲಾವಣೆಗೊಂಡಿದ್ದವು.

ವಾರ್ಡ್ ೩ರಲ್ಲಿ ಬಿಜೆಪಿಯ ಮೋಹಿನಿ ೨೧೬, ಕಾಂಗ್ರೆಸ್‌ನ

ಸಂದ್ಯಾ ೧೬೮,

(ಮೊದಲ ಪುಟದಿಂದ) ಜೆಡಿಎಸ್‌ನ ಪುಷ್ಪ ೧೭ ಮತಗಳನ್ನು ಗಳಿಸಿದರೆ, ೩ ಮತಗಳು ನೋಟಾಕ್ಕೆ ಚಲಾವಣೆಗೊಂಡಿದ್ದವು. ವಾರ್ಡ್ ಒಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭುವನೇಶ್ವರ್ ಅವರಿಗಿಂತ ೧೭೯ ಹೆಚ್ಚುವರಿ ಮತಗಳನ್ನು ಗಳಿಸುವ ಮೂಲಕ ಬಿಜೆಪಿಯ ಮೃತ್ಯುಂಜಯ ದಿಗ್ವಿಜಯ ಸಾಧಿಸಿದರು. ವಾರ್ಡ್ ೩ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂದ್ಯಾ ಅವರಿಗಿಂತ ಬಿಜೆಪಿಯ ಅಭ್ಯರ್ಥಿ ಮೋಹಿನಿ ೪೮ ಮತಗಳ ಅಂತರದಿAದ ಜಯಗಳಿಸಿದರು.

ಮತ ಎಣಿಕಾ ಕಾರ್ಯದಲ್ಲಿ ಚುನಾವಣಾಧಿಕಾರಿ ಹೇಮಂತ್ ಕುಮಾರ್, ಸಹಾಯಕ ಚುನಾವಣಾದಿ üಕಾರಿ ರಾಜೇಶ್, ಶಿರಸ್ತೇದಾರ್ ಲೋಹಿತ್, ಎಣಿಕೆ ಮೇಲ್ವಿಚಾರಕ ದಿನೇಶ್ ಸಹಾಯಕ ಸತೀಶ್ ಭಾಗವಹಿಸಿದ್ದರು. ತಾಲೂಕು ತಹಶೀಲ್ದಾರ್ ಆರ್. ಗೋವಿಂದ ರಾಜು ಉಪಸ್ಥಿತರಿದ್ದರು. ವಿಜೇತ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಗಳು ಪ್ರಮಾಣ ಪತ್ರ ವಿತರಿಸಿದರು. ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.

ಬಿಜೆಪಿಯಿಂದ ವಿಜಯೋತ್ಸವ: ಪಟ್ಟಣದ ಎರಡೂ ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪಟ್ಟಣ ದಲ್ಲಿ ವಿಜಯೋತ್ಸವ ಆಚರಿಸಿ ದರು. ಶಾಸಕ ಎಂ.ಪಿ.ಅಪ್ಪಚ್ಚುರAಜನ್, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಮುಖಂಡರಾದ ಅಭಿಮನ್ಯುಕುಮಾರ್, ಪ.ಪಂ. ಸದಸ್ಯರಾದ ಪಿ.ಕೆ.ಚಂದ್ರು, ಬಿ.ಆರ್.ಮಹೇಶ್, ಶುಭಕರ್ ಸೇರಿದಂತೆ ಕಾರ್ಯಕರ್ತರು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ರಂಜನ್, ಪಟ್ಟಣದ ಎರಡೂ ವಾರ್ಡ್ಗಳ ಜನತೆ ಬಿಜೆಪಿ ಪಕ್ಷ ಹಾಗೂ ಸರ್ಕಾರದ ಮೇಲೆ ನಂಬಿಕೆಯಿಟ್ಟಿದ್ದು, ಅದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.

ಅತ್ತೆಯ ಸ್ಥಾನಕ್ಕೆ ಸೊಸೆ ಆಯ್ಕೆ: ವಾರ್ಡ್ ೩ರಲ್ಲಿ ಈ ಹಿಂದೆ ಜಯಗಳಿಸಿ ಅಧ್ಯಕ್ಷರೂ ಆಗಿದ್ದ ನಳಿನಿ ಗಣೇಶ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಬಿಜೆಪಿಯಿಂದ ಅವರ ಸೊಸೆ ಮೋಹಿನಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದೇ ವಾರ್ಡ್ನಿಂದ ಕಾಂಗ್ರೆಸ್‌ನಿAದ ಸ್ಪರ್ಧಿಸಿದ್ದ ಸಂದ್ಯಾ ಅವರ ಪತಿ ಚುನಾವಣಾ ಪ್ರಚಾರದ ಸಮಯದಲ್ಲೇ ಮನೆಯಲ್ಲಿ ಹೃದಯಾಘಾತ ಕ್ಕೀಡಾಗಿದ್ದರು. ಇವರ ನಿಧನದಿಂದಾಗಿ ಅನುಕಂಪದ ಆಧಾರದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂದೇ ವಿಶ್ಲೇಷಿಸ ಲಾಗಿತ್ತು. ಆದರೆ ಬಿಜೆಪಿಯ ಮೋಹಿನಿ ಅವರು ೪೮ ಮತಗಳ ಅಂತರದಿAದ ಗೆಲುವು ಸಾಧಿಸುವ ಮೂಲಕ ಅತ್ತೆ(ನಳಿನಿ ಗಣೇಶ್) ಪ್ರತಿನಿಧಿಸಿದ್ದ ಸ್ಥಾನಕ್ಕೆ ಆಯ್ಕೆಯಾದರು.

ಸ್ಥಾನ ಕಳೆದುಕೊಂಡ ಕಾಂಗ್ರೆಸ್: ವಾರ್ಡ್ ೧ರ ಬಸವೇಶ್ವರ ರಸ್ತೆಯಲ್ಲಿ ಈ ಹಿಂದೆ ಕಾಂಗ್ರೆಸ್‌ನ ಅಭ್ಯರ್ಥಿ ಉದಯಶಂಕರ್ ಜಯಗಳಿಸಿದ್ದರು. ಅವರ ನಿಧನದಿಂದ ತೆರವಾದ ಸದಸ್ಯ ಸ್ಥಾನಕ್ಕೆ ಮೃತ್ಯುಂಜಯ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ೧೭೯ ಮತಗಳ ಭಾರೀ ಅಂತರದಿAದ ಬಿಜೆಪಿ ಜಯಗಳಿಸುವ ಮೂಲಕ ಕಾಂಗ್ರೆಸ್ ಒಂದು ಸ್ಥಾನವನ್ನು ಕಳೆದುಕೊಳ್ಳುವಂತಾಯಿತು.

ಠೇವಣಿ ಕಳೆದುಕೊಂಡ ಜೆಡಿಎಸ್: ಸ್ಪರ್ಧಿಸಿದ್ದ ಎರಡೂ ವಾರ್ಡ್ಗಳಲ್ಲಿ ಜಾತ್ಯತೀತ ಜನತಾದಳ ಭಾರೀ ನಿರಾಸೆ ಅನುಭವಿಸಿದ್ದು, ಠೇವಣಿ ಕಳೆದುಕೊಂಡಿದೆ. ಸಾಮಾನ್ಯ ಕ್ಷೇತ್ರದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ. ೬ರ ೧ ಭಾಗ ಮತಗಳಿಸಬೇಕಿದ್ದು, ಮೀಸಲಾತಿ ಕ್ಷೇತ್ರದಲ್ಲಿ ಶೇ.೧೬ರ ೧ ಭಾಗ ಮತ ಪಡೆಯಬೇಕಿದೆ. ಚುನಾವಣೆ ನಡೆದ ಎರಡೂ ವಾರ್ಡ್ಗಳೂ ಸಹ ಮೀಸಲು ಕ್ಷೇತ್ರವಾಗಿದೆ. ವಾರ್ಡ್ ೧ ಹಿಂದುಳಿದ ವರ್ಗ ಬಿ, ವಾರ್ಡ್ ೩ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಜೆಡಿಎಸ್ ಅಭ್ಯರ್ಥಿಗಳು ಚಲಾವಣೆಯಾದ ಮತಗಳ ಪೈಕಿ ೧೬ರ ೧ ಭಾಗ ಮತಗಳನ್ನು ಪಡೆಯಲು ವಿಫಲರಾಗಿದ್ದಾರೆ. ಇದರೊಂದಿಗೆ ವಾರ್ಡ್ ೧ರ ಪಕ್ಷೇತರ ಅಭ್ಯರ್ಥಿಯೂ ಇದೇ ಹಾದಿಯಲ್ಲಿದ್ದು, ಮೂವರೂ ಠೇವಣಿ ಕಳೆದುಕೊಂಡಿದ್ದಾರೆ.

ವಾರ್ಡ್ ೧ರಲ್ಲಿ ೫೫೫ ಮತದಾರರ ಪೈಕಿ ೩೫೫ ಮತದಾರರು ಮತ ಚಲಾಯಿಸಿದ್ದರು. ಇದರಲ್ಲಿ ಪುರುಷರು ೧೭೩ ಹಾಗೂ ಮಹಿಳೆಯರು ೧೮೨ ಮಂದಿ ಮತದಾನದಲ್ಲಿ ಭಾಗವಹಿಸುವ ಮೂಲಕ ಶೇ. ೬೩.೯೬ ಮತದಾನವಾಗಿತ್ತು. ಮೂರನೇ ವಾರ್ಡ್ನ ೪೮೪ ಮತದಾರರ ಪೈಕಿ ೪೦೪ ಮತದಾರರು ತಮ್ಮ ಮತ ಚಲಾಯಿಸಿದ್ದರು. ಪುರುಷರು ೧೮೩ ಹಾಗೂ ೨೨೧ ಮಹಿಳೆಯರು ತಮ್ಮ ಮತ ಚಲಾಯಿಸುವ ಮೂಲಕ ಶೇ. ೮೩.೪೭ರಷ್ಟು ಮತದಾನವಾಗಿತ್ತು.