ಕುಶಾಲನಗರ,ಸೆ. ೬:ನೂತನವಾಗಿ ರಚನೆ ಯಾಗಿರುವ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಮೂಲಕ ಸಕಾಲ ಯೋಜನೆ ಮಾದರಿಯಲ್ಲಿ ಕೆ.ಎಸ್.ಎಂ.ಎಸ್ ಕೇಂದ್ರ ಸ್ಥಾಪಿಸಲು ಕೊಡಗು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಉಪವಿಭಾಗಧಿಕಾರಿ ಈಶ್ವರ್ ಕುಮಾರ್ ಖಂಡು ತಿಳಿಸಿದ್ದಾರೆ.
ಕುಶಾಲನಗರದ ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಟಿ.ಎಂ ಪ್ರಕಾಶ್ ಸಮ್ಮುಖದಲ್ಲಿ ಸಿಬ್ಬಂದಿಗಳೊAದಿಗೆ ಸಭೆ ನಡೆಸಿ ನೂತನ ಯೋಜನೆಯ ರೂಪುರೇಷೆ ಬಗ್ಗೆ ಮಾಹಿತಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆ ಸಂಬAಧ ಯಾವುದೇ ಅರ್ಜಿಗಳನ್ನು ಸಲ್ಲಿಸಿದ ತಕ್ಷಣ ಆಯಾ ಅರ್ಜಿದಾರರ ಮೂಬೈಲ್ ಸಂಖ್ಯೆಗೆ ಕಡತ ಸಂಖ್ಯೆ ರವಾನಿಸಲಾಗುತ್ತದೆ. ಅಲ್ಲದೆ, ಅರ್ಜಿದಾರರು ಆನ್ಲೈನ್ ಮೂಲಕ ತನ್ನ ಅರ್ಜಿ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.
ಈಗಾಗಲೇ ಕೊಡಗು ಜಿಲ್ಲೆಯ ನೂತನ ತಾಲೂಕು ಪೊನ್ನಂಪೇಟೆಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದಲ್ಲದೆ ವೀರಾಜಪೇಟೆ, ಸೋಮವಾರಪೇಟೆ, ಮಡಿಕೇರಿಯಲ್ಲೂ ಇದು ಕಾರ್ಯ ಆರಂಭಿಸಲಿದ್ದು, ಯೋಜನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಆಯಾ ಸರ್ಕಾರಿ ಕಚೇರಿ ಆವರಣದಲ್ಲಿ ನಾಮಫಲಕ ಅಳವಡಿಸಲು ನಿರ್ಧರಿಸಲಾಗಿದೆ ಎಂದರು.
ಆನ್ಲೈನ್ ಬುಕ್ಕಿಂಗ್ ಮಾದರಿಯಲ್ಲಿ ಈ ನೂತನ ತಂತ್ರಜ್ಞಾನ ರೂಪಿಸಲಾಗಿದ್ದು ಅರ್ಜಿದಾರನ ದೂರವಾಣಿ ಸಂಖ್ಯೆಗೆ ಬಂದಿರುವ ಸಂಖ್ಯೆ ಪರಿಶೀಲನೆ ನಡೆಸಬಹುದು., ಈ ಮೂಲಕ ಅನಗತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಿಸಬಹುದಾಗಿದೆ ಎಂದರು. ಈ ಸಂದರ್ಭ ತಹಶೀಲ್ದಾರ್ ಪ್ರಕಾಶ್ ಇದ್ದರು.