ಮಡಿಕೇರಿ, ಸೆ. ೨೧: ಭಾಗಮಂಡಲದಿAದ ತಲಕಾವೇರಿಗೆ ಹೋಗುವ ರಸ್ತೆ ಅಭಿವೃದ್ಧಿಪಡಿಸುವ ಕುರಿತು ವಿಶೇಷ ಸಭೆ ನಡೆಸುವ ಕುರಿತು ವಿಧಾನ ಪರಿಷತ್‌ನಲ್ಲಿ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಪ್ರಶ್ನೆಗೆ ಮಾಹಿತಿ ಒದಗಿಸಲಾಗಿದೆ.

ಸಾವಿರಾರು ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ಮಳೆಗಾಲದಲ್ಲಿ ಕೆಲವು ಸಂದರ್ಭ ರಸ್ತೆ ಬಂದ್ ಆಗುತ್ತದೆ. ವಾಹನ ಸಂಚಾರ ದುಸ್ತರವಾಗಿದೆ ಎಂದು ಸುಜಾ ಹೇಳಿದರು. ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವ ಬಗ್ಗೆ ಹಾಗೂ ಭಾಗಮಂಡಲದಿAದ ತಲಕಾವೇರಿಗೆ ದಿನಂಪ್ರತಿ ಓಡಾಡಲು ತೊಂದರೆ ಆಗುತ್ತಿರುವ ಬಗ್ಗೆ ಗಮನ ಸೆಳೆದು ಕ್ರಮಕ್ಕೆ ಮನವಿ ಮಾಡಿದರು.

ಈ ಬಗ್ಗೆ ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ್ ಅವರ ಅನುಪಸ್ಥಿತಿಯಲ್ಲಿ ಉತ್ತರ ನೀಡಿದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ರಸ್ತೆ ಅಭಿವೃದ್ಧಿಪಡಿಸುವ ಕುರಿತು ಸಭೆ ಏರ್ಪಡಿಸುವುದಾಗಿ ಲೋಕೋಪಯೋಗಿ ಸಚಿವರು ಹೇಳಿರುವುದಾಗಿ ಮಾಹಿತಿ ಒದಗಿಸಿದರು. ಸಭಾಪತಿಗಳು ಕೂಡ ಈ ಬಗ್ಗೆ ವಿವರ ನೀಡಿದರು.