ಶನಿವಾರಸಂತೆ, ಸೆ. ೨೧: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಅಧ್ಯಕ್ಷತೆಯಲ್ಲಿ ಬಾಡಿಗೆ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ಸಭೆ ನಡೆಯಿತು.
ಬಿಳಿ ಫಲಕ ಹಾಕಿರುವ ಎಲ್ಲಾ ವಾಹನ ಚಾಲಕರು ಹಾಗೂ ಮಾಲೀಕರು ತಿಂಗಳೊಳಗೆ ಹಳದಿ ಫಲಕ ಅಳವಡಿಸಬೇಕು. ನಿಗದಿತ ತೆರಿಗೆ ದೃಢೀಕರಣ ಪತ್ರ ಇಟ್ಟುಕೊಂಡು ಬಾಡಿಗೆ ಮಾಡಬಹುದು. ಇಲ್ಲವಾದಲ್ಲಿ ಅಂತವರ ಮೇಲೆ ಮೋಟಾರ್ ಕಾಯ್ದೆ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪರಶಿವಮೂರ್ತಿ ಎಚ್ಚರಿಸಿದರು.
ಪಿಎಸ್ಐ ಗೋವೀಂದ್ ರಾಜ್, ಸಿಬ್ಬಂದಿ ಮಂಜುನಾಥ, ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಕೆ.ಯು. ಸುಬ್ರಮಣ್ಯ, ಕಾರ್ಯದರ್ಶಿ ಎಸ್.ಎಲ್. ಲೀಲಾಧರ್, ಖಜಾಂಚಿ ಎ.ಎಸ್. ಪ್ರೇಮನಾಥ್, ಸದಸ್ಯರು ಹಾಜರಿದ್ದರು.