ಮಡಿಕೇರಿ, ಸೆ. ೨೧: ಪ್ರವಾಸೋದ್ಯಮದ ಪುನರಾವಲೋಕನ (ರೀ ತಿಂಕಿAಗ್ ಟೂರಿಸಂ) ಶೀರ್ಷಿಕೆಯಡಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೨೨ ರ ಆಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಮತ್ತು ವಿವಿಧ ಸ್ತರಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಸಾರ್ವಜನಿಕರಿಗೆ ಛಾಯಾಗ್ರಹಣ ಸ್ಪರ್ಧೆ- ವಿಷಯ ಅನ್-ಸೀನ್ ಕೂರ್ಗ್. ಮೊಬೈಲ್ ಮತ್ತು ಡಿಎಸ್‌ಎಸ್‌ಆರ್ ಫೋಟೋಗಳನ್ನು ಕಳುಹಿಸಬಹುದು. ಆಯ್ದ ಫೋಟೋಗಳನ್ನು ಜಿಲ್ಲಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುತ್ತದೆ. ಕಿರುಚಿತ್ರ ಸ್ಪರ್ಧೆ/ಶಾರ್ಟ್ ಮೂವಿ- ವಿಷಯ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ (ಟೂರಿಸಂ ಅಂಡ್ ಡೆವಲಪ್‌ಮೆಂಟ್), ಅವಧಿ ಗರಿಷ್ಠ ೨ ನಿಮಿಷಗಳು. ಮುಕ್ತ ಪ್ರವೇಶವಿರುತ್ತದೆ.

ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ-ವಿಷಯ ಪ್ರವಾಸೋದ್ಯಮದ ಪುನರಾವಲೋಕನ (ರೀ ತಿಂಕಿAಗ್ ಟೂರಿಸಂ). ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ೧೦೦೦ ಪದಗಳ ಮಿತಿ, ಕಾಲೇಜು ವಿದ್ಯಾರ್ಥಿಗಳಿಗೆ ೨೦೦೦ ಪದಗಳ ಮಿತಿ, ಪ್ರತಿ ವಿಭಾಗದಲ್ಲಿ ೩ ಬಹುಮಾನ ನೀಡಲಾಗುತ್ತದೆ.

ಛಾಯಾಚಿತ್ರಗಳು, ಕಿರುಚಿತ್ರ, ಪ್ರಬಂಧವನ್ನು ಇ-ಮೇಲ್ ವಿಳಾಸ ಚಿಜಞoಜಚಿguಣouಡಿism@gmಚಿiಟ.ಛಿom, ವಿಳಾಸ, ಫೋನ್ ನಂಬರ್ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯ ಹೆಸರು ಕಡ್ಡಾಯವಾಗಿ ನಮೂದಿಸಿರಬೇಕು. ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಪ್ರವೇಶಕ್ಕೆ ತಾ. ೨೪ ಕೊನೆಯ ದಿನವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.