ನಾಪೋಕ್ಲು, ಸೆ. ೨೧: ಸಮಾಜದ ಬೆಳವಣಿಗೆಯಲ್ಲಿ ದವಸ ಭಂಡಾರಗಳ ಪಾತ್ರ ಮಹತ್ವದ್ದು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು. ಸ್ಥಳೀಯ ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಜರುಗಿದ ನಾಪೋಕ್ಲು ವಿವಿಧೋದ್ದೇಶ ಸಹಕಾರ ದವಸ ಭಂಡಾರದ ವಾರ್ಷಿಕ ಮಹಾಸಭೆ ಹಾಗೂ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯ ಪ್ರಥಮ ದವಸ ಭಂಡಾರ ೧೯೧೦ರಲ್ಲಿ ಬಾವಲಿ ಗ್ರಾಮದಲ್ಲಿ ಪ್ರಾರಂಭವಾಯಿತು. ೧೯೨೦ ರಲ್ಲಿ ಪ್ರಾರಂಭವಾದ ಆರು ದವಸ ಭಂಡಾರಗಳಲ್ಲಿ ನಾಪೋಕ್ಲು ದವಸ ಭಂಡಾರವು ಒಂದಾಗಿದೆ. ವಿವಿಧ ಹಂತದಲ್ಲಿ ಬೆಳವಣಿಗೆ ಕಂಡ ಈ ದವಸ ಭಂಡಾರ ಇಂದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದವಸ ಭಂಡಾರದ ಅಧ್ಯಕ್ಷ ಕಂಗಾAಡ ಜಾಲಿ ಪೂವಪ್ಪ ಮಾತನಾಡಿ, ೨೮ ಸೆಂಟ್ ಜಾಗದಲ್ಲಿ ಆರಂಭಗೊAಡ ಈ ದವಸ ಭಂಡಾರವು ಸುಮಾರು ೪೦೦ ಕ್ವಿಂಟಲ್ ಭತ್ತವನ್ನು ಶೇಖರಿಸಿಡ ಬಹುದಾದ ಪತ್ತಾಯವನ್ನು ಹೊಂದಿದೆ. ೧೯೭೬ ರಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಯಿತು. ಮಹಿಳಾ ಸಮಾಜವು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ೭೦೧ ಸದಸ್ಯರನ್ನು ಹೊಂದಿದ್ದು ಸಂಘವು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಈ ಹಿಂದೆ ದವಸ ಭಂಡಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಬೊಪ್ಪೇರ ಕಾವೇರಪ್ಪ, ಶಿವಚಾಳಿಯಿಂಡ ಸಹದೇವ, ಕೊಂಬAಡ ಗಣೇಶ, ಶಿವಚಾಳಿಯಂಡ ಪಾರ್ವತಿ ಹಾಗೂ ಶಿವಚಾಳಿಯಂಡ ಸುಭಾಷ್ ಸೋಮಯ್ಯ, ಕಾರ್ಯದರ್ಶಿ ಕುಮ್ಮಂಡ ಜಿ. ಕೇಶವ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿದರು. ಈ ಸಂದರ್ಭ ಭಗವತಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಲ್ಲೇಟಿರ ಗುರುವಪ್ಪ, ಉಪಾಧ್ಯಕ್ಷ ಬೊಪ್ಪಂಡ ಕುಶಾಲಪ್ಪ, ದವಸ ಭಂಡಾರದ ಉಪಾಧ್ಯಕ್ಷ ಶಿವಚಾಳಿಯಂಡ ಕಿಶೋರ್ ಬೋಪಣ್ಣ, ನಿರ್ದೇಶಕರಾದ ಅಮ್ಮಂಡ ಮನು ಮಹೇಶ್, ಕುಲ್ಲೇಟಿರ ರಾಜೇಶ್, ಶಿವಚಾಳಿಯಂಡ ಸುಬ್ಬವ್ವ, ಎ. ರಾಣಿ, ಅಮ್ಮಂಡ ಅಶೋಕ, ಬೊಪ್ಪಂಡ ಕಾಳಪ್ಪ, ಹೆಚ್.ಕೆ. ಬೊಳ್ಳು, ಸದಾ ವಿನೋದ್ ಮತ್ತಿತರರು ಇದ್ದರು. ಕೆ.ಜಿ. ಕೇಶವ ಸ್ವಾಗತಿಸಿ, ಕುಲ್ಲೇಟಿರ ಅರುಣ್ ಬೇಬ ನಿರೂಪಿಸಿ, ಕುಲ್ಲೇಟಿರ ತಮ್ಮಯ್ಯ ವಂದಿಸಿದರು.