ಮಡಿಕೇರಿ, ಸೆ. ೨೧: ಕೊಡಗಿನ ಕಾಳಿದಾಸ ಎಂದು ಕರೆಸಿಕೊಳ್ಳುವ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಜನ್ಮದಿನವಾದ ಸೆಪ್ಟೆಂಬರ್ ೨೧ ರಂದು ಕೊಡವ ಸಾಹಿತ್ಯ ದಿನವನ್ನಾಗಿ ಆಚರಿಸುವಂತೆ ಅಪ್ಪಚ್ಚ ಕವಿ ಅಭಿಮಾನಿಗಳ ಸಂಘ ಒತ್ತಾಯಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಉಳ್ಳಿಯಡ ಎಂ. ಪೂವಯ್ಯ, ಕೊಡವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಅಪ್ಪಚ್ಚಕವಿಯ ೧೫೪ನೇ ಜನ್ಮದಿನೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಬೇಕಾಗಿತ್ತು. ಕೇವಲ ೪ನೇ ತರಗತಿ ಓದಿದ ಅಪ್ಪಚ್ಚ ಕವಿ ಅವರು ೧೯೦೦ ರ ಕಾಲಘಟ್ಟದಲ್ಲಿ ತಮ್ಮ ಸಾಹಿತ್ಯದ ಮೂಲಕ ಕೊಡವ ಭಾಷೆಗೆ ಅಪಾರ ಸೇವೆಗೈದಿದ್ದಾರೆ.

ಮೌಖಿಕ ಸಾಹಿತ್ಯವಿದ್ದ ಕಾಲಘಟ್ಟದಲ್ಲಿ ಲಿಖಿತ ಸಾಹಿತ್ಯಕ್ಕೆ ಮುನ್ನಡಿ ಬರೆದು ಅವರ ದೂರದೃಷ್ಟಿಯಿಂದ ಕೆಲಸ ಮಾಡಿದ ಫಲವಾಗಿ ಇಂದು ಕೊಡವ ಸಾಹಿತ್ಯ ಮನ್ನಣೆ ಪಡೆದುಕೊಂಡಿದೆ. ನಾಟಕ, ಹರಿಕಥೆ, ಗಾದೆ ಹಾಗೂ ಹಾಡುಗಳನ್ನು ರಚಿಸಿ ಎಲ್ಲಾ ವರ್ಗಕ್ಕೂ ಸಾಹಿತ್ಯ ಮುಟ್ಟಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಇವರ ಜನ್ಮದಿನವನ್ನು ಕೊಡವ ಸಾಹಿತ್ಯ ದಿನವನ್ನಾಗಿ ಆಚರಿಸಬೇಕು, ಅಪ್ಪಚ್ಚಕವಿ ಜನಿಸಿದ ಕಿರುಂದಾಡು ಮನೆಯನ್ನು ರಾಷ್ಟಿçÃಯ ಸ್ಮಾರಕ ಕೇಂದ್ರವನ್ನಾಗಿ ಮಾಡಬೇಕು, ವಿವಿಧೆಡೆ ಪ್ರತಿಮೆ ಸ್ಥಾಪಿಸಬೇಕು, ಆಯ್ದ ವಿದ್ಯಾಕೇಂದ್ರಗಳಲ್ಲಿ ಅಪ್ಪಚ್ಚಕವಿ ಹೆಸರಿನಲ್ಲಿ ಅಧ್ಯಯನ ಪೀಠ ಹಾಗೂ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಬೇಕು, ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಅಪ್ಪಚ್ಚಕವಿ ಸ್ಮರಣಾರ್ಥ ಪ್ರತ್ಯೇಕ ಪುಸ್ತಕ ಭಂಡಾರ, ವಸ್ತು ಸಂಗ್ರಹಾಲಯ, ಮ್ಯೂಸಿಯಂ ಸ್ಥಾಪಿಸಬೇಕು, ಕನ್ನಡ ಸಾಹಿತ್ಯ ಪರಿಷತ್ತು ಅಪ್ಪಚ್ಚ÷ಕವಿ ಜ್ಞಾಪಕಾರ್ಥ ಧತ್ತಿನಿಧಿ ಕಾರ್ಯಕ್ರಮ ಮಾಡಬೇಕು ಸೇರಿ ಇನ್ನಿತರ ಬೇಡಿಕೆ ಮುಂದಿಟ್ಟರು. ಗೋಷ್ಠಿಯಲ್ಲಿ ಸಂಘದ ಸದಸ್ಯ ಅಲ್ಲಾರಂಡ ವಿಠಲ ನಂಜಪ್ಪ ಹಾಜರಿದ್ದರು.