ಗೋಣಿಕೊಪ್ಪಲು, ಸೆ. ೨೧: ಶ್ರೀ ಕಾವೇರಿ ದಸರಾ ಸಮಿತಿಯ ವತಿಯಿಂದ ವಿವಿಧ ಚಟುವಟಿಕೆಗೆ ನಗರದ ಉಮಾಮಹೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಈ ಬಾರಿ ನಡೆಯುವ ೪೪ನೇ ವರ್ಷದ ದಸರಾ ಜನೋತ್ಸವ ಯಶಸ್ವಿಯಾಗಿ ನಡೆಯಲು ಈಗಾಗಲೇ ಕಾವೇರಿ ದಸರಾ ಸಮಿತಿ ವತಿಯಿಂದ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣದ ಕಾರ್ಯಕ್ಕೆ ಚಾಲನೆ ದೊರೆತಿದೆ. ಈ ಹಿನೆÀ್ನಲೆಯಲ್ಲಿ ದಸರಾ ಉತ್ಸವಕ್ಕೆ ಯಾವುದೇ ವಿಘ್ನ ಎದುರಾಗದೆ ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿ ಸಮಿತಿಯ ಅಧ್ಯಕ್ಷ ಬಿ.ಎನ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ಪೂಜಾ ಕಾರ್ಯ ನಡೆಯಿತು.
ಈ ವೇಳೆ ಸಮಿತಿಯ ಕಾರ್ಯಧ್ಯಕ್ಷ ಸಿ.ಕೆ. ಬೋಪಣ್ಣ, ಪ್ರಧಾನ ಕಾರ್ಯದರ್ಶಿ ಜಪ್ಪು ಸುಬ್ಬಯ್ಯ, ಖಜಾಂಚಿ ಮಲ್ಚೀರ ಗಾಂಧಿ ದೇವಯ್ಯ, ಉಪಾಧ್ಯಕ್ಷ ಶಿವಾಜಿ, ಸಮಿತಿಯ ಪ್ರಮುಖರಾದ ಚೈತ್ರ ಬಿ. ಚೇತನ್, ಗಣೇಶ್ ರೈ, ಕೇಶವ್ ಕಾಮತ್, ಪ್ರಮೋದ್ ಗಣಪತಿ, ಜಿ.ಕೆ. ಗೀತಾ, ರಾಜಶೇಖರ್, ನೂರೆರ ರತಿ ಅಚ್ಚಪ್ಪ, ಹೆಚ್.ಆರ್. ಜ್ಯೋತಿ, ಎಸ್. ಧನಲಕ್ಷಿö್ಮ, ವಿವೇಕ್ ರಾಯ್ಕರ್, ವಕೀಲರಾದ ಸಂಜೀವ್, ಚಂದನ್ ಕಾಮತ್, ರಾವiಕೃಷ್ಣ, ಚೇತನ್ ಸೇರಿದಂತೆ ಪ್ರಮುಖರು ಹಾಜರಿದ್ದರು.