*ಗೋಣಿಕೊಪ್ಪ, ಸೆ. ೨೦: ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಉತ್ಪಾದನೆ ಮತ್ತು ಮಾರಾಟ ಹೆಚ್ಚಿಸುವ ಮೂಲಕ ಸಂಘದ ಆರ್ಥಿಕ ಬಲ ಹೆಚ್ಚಿಸಲು ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಿರುವುದಾಗಿ ಸಂಘದ ಅಧ್ಯಕ್ಷ ಚೆಪುö್ಪಡೀರ ಅರುಣ್ ಮಾಚಯ್ಯ ಮಾಹಿತಿ ನೀಡಿದ್ದಾರೆ.

ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಮಾತನಾಡಿದ ಅವರು ಸಂಘದ ಆರ್ಥಿಕ ಚಟುವಟಿಕೆಗಳನ್ನು ಉನ್ನತೀಕರಣ ಗೊಳಿಸುವ ಹಿನ್ನೆಲೆಯಲ್ಲಿ ಪುತ್ತೂರಿನ ಕ್ಯಾಂಪ್ಕೋ ಕಂಪೆನಿಯೊAದಿಗೆ ಮಾತುಕತೆ ಮತ್ತು ಪತ್ರ ವ್ಯವಹಾರ ನಡೆಸಿ ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ, ಉತ್ಪಾದನೆಯನ್ನು ಮಾಡಿ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲು ಕ್ಯಾಂಪ್ಕೋ ಕಂಪೆನಿಯನ್ನು ಆಹ್ವಾನಿಸಲಾಗಿದೆ. ಅಲ್ಲದೇ ಆ

(ಮೊದಲ ಪುಟದಿಂದ) ಕಂಪೆನಿಯ ಅಡಿಕೆ ಮತ್ತು ಕಾಳು ಮೆಣಸಿನ ಸಂಸ್ಕರಣಕ್ಕೆ ಸಂಘದ ಕೊಠಡಿಯನ್ನು ಬಾಡಿಗೆ ನೀಡಲು ಕೂಡ ನಿರ್ಧರಿಸಲಾಗಿದೆ ಎಂದು ತಿಳಿಸಿದರು. ೨೦೨೧-೨೨ನೇ ಸಾಲಿನಲ್ಲಿ ಸ್ಕಾ÷್ವಷ್, ಜಾಮ್, ಎಲೊಪಿನೊ ಉತ್ಪನ್ನಗಳ ಮಾರಾಟಗಳಿಂದ ೨೨ ಲಕ್ಷ ಆದಾಯ ಗಳಿಸಿದೆ. ಮಿಡಿ ಸೌತೆ, ನೆಲ್ಲಿಕಾಯಿ, ಹೇರಳೆಕಾಯಿ, ಬೈಂಬಳೆ ಸೇರಿದಂತೆ ಒಟ್ಟು ೬೭ ಲಕ್ಷ ಮೌಲ್ಯದ ಪದಾರ್ಥಗಳನ್ನು ಸಂಘದಲ್ಲಿ ದಾಸ್ತಾನು ಇಡಲಾಗಿದೆ.

ಮಡಿಕೇರಿಯ ಐನ್‌ಮನೆ ಮತ್ತು ಪಥಾಯ ಕೂರ್ಗ್ ಸ್ಟೋರ್ ಬ್ರಾಂಡ್‌ನಲ್ಲಿ ಜೇನು, ಉಪ್ಪಿನಕಾಯಿಗಳನ್ನು ೫೦ ಲಕ್ಷ ಮೊತ್ತದಲ್ಲಿ ತಯಾರಿಸಿ ನೇರವಾಗಿ ೬ ಲಕ್ಷ ಆದಾಯವನ್ನು ಗಳಿಸಿದೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ನ ಹಣ್ಣಿನ ಮಂಡಿಯಲ್ಲಿ ೧ ಕೋಟಿ ಹಣ್ಣಿನ ವ್ಯಾಪಾರ ನಡೆಸಿ ೧೦ ಲಕ್ಷದ ೨೦ ಸಾವಿರ ಆದಾಯವನ್ನು ಪಡೆದುಕೊಳ್ಳಲಾಗಿದೆ. ಬೆಂಗಳೂರಿನ ಸಿಂಗನ ಆಗ್ರಹಾರ ಎ.ಪಿ.ಎಂ.ಸಿ ಯಾರ್ಡ್ನಲ್ಲಿ ೬೦ ಲಕ್ಷ ಹಣ್ಣಿನ ವ್ಯಾಪಾರ ನಡೆಸಿ ೬ ಲಕ್ಷ ಆದಾಯವನ್ನು ಗಳಿಸಲಾಗಿದ್ದು, ಮುಂದಿನ ೧೦ ವರ್ಷಗಳಿಗೆ ಪರವಾನಗಿಯನ್ನು ನವೀಕರಿಸಲಾಗಿದೆ ಎಂದು ತಿಳಿಸಿದರು.

ಪಾಲಿಬೆಟ್ಟ ಸಂಘದ ಆಸ್ತಿಯಲ್ಲಿರುವ ಕಟ್ಟಡವನ್ನು ಪರಿಶಿಷ್ಟ ಪಂಗಡದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ನೀಡಿ ವಾರ್ಷಿಕ ೨ ಲಕ್ಷದ ೨೫ ಸಾವಿರ ಆದಾಯವನ್ನು ಪಡೆದುಕೊಳ್ಳಲಾಗುತ್ತಿದೆ. ಕಾಫಿ ಮತ್ತು ತಾಳೆ ತೋಟದಿಂದ ೧ ಲಕ್ಷದಷ್ಟು ಆದಾಯಗಳಿಸಲಾಗಿದೆ ಎಂದು ತಿಳಿಸಿದ ಅವರು ಕೃಷಿ ಇಲಾಖೆ ನೀಡುವ ಸಬ್ಸಿಡಿಯನ್ನು ಬಳಸಿ ರೆಡಿ ಟು ಜ್ಯೂಸ್ ತಯಾರಿಸುವ ಮೂಲಕ ಹೊಸ ಮಾರುಕಟ್ಟೆಗೆ ಮುಕ್ತವಾಗಿ ಸಂಘ ತೆರೆದುಕೊಳ್ಳುವ ಚಿಂತನೆಯನ್ನು ಹೊಂದಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭ ಲಂಡನಿನ ಬರ್ಮಿಂಗ್ ಹ್ಯಾಮ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಭಾರತ ಕರಾಟೆ ತಂಡದ ನೇತೃತ್ವ ವಹಿಸಿ ಚಿನ್ನದ ಪದಕ ಪಡೆದ ಕಿತ್ತಲೆ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಚೆಪುö್ಪಡೀರ ಅರುಣ್ ಮಾಚಯ್ಯ ಅವರನ್ನು ಸಂಘದ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ, ನಿರ್ದೇಶಕರುಗಳಾದ ಕಾಡ್ಯಮಾಡ ಸುನೀಲ್ ಮಾದಪ್ಪ, ಚೇಂದಿರ ಸುಮಿ ಸುಬ್ಬಯ್ಯ, ಸಣ್ಣುವಂಡ .ಎಂ. ವಿಶ್ವನಾಥ್, ಎಸ್.ಎಸ್. ಸುರೇಶ್, ಶೋಭ ಕುಟ್ಟಪ್ಪ, ಕಿರಿಯಮಾಡ ಯು. ಅರುಣ್ ಪೂಣಚ್ಚ, ಸಿ.ಎಂ ಸೊಮಣ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.